ಸದಸ್ಯ:Monishareddy990

ವಿಕಿಸೋರ್ಸ್ದಿಂದ

ನನ್ನ ಹೆಸರು ಮೋನಿಷ ರೆಡ್ಡಿ. ನನ್ನ ಜನ್ಮ ದಿನಾಂಕವು ೧೯೯೭, ಮಾರ್ಚ್ ತಿಂಗಳ ೨೦ನೇ ದಿನವಾಗಿದೆ. ನನ್ನ ತಂದೆಯ ಹೆಸರು ನಾಗರಾಜ ರೆಡ್ಡಿ, ತಾಯಿ ಸ್ವರ್ಣ. ನಾನು ಬೆಂಗಳೂರಿನ ನಿವಾಸಿ. ನಾನು ಬೆಂಗಳೂರಿನ ಕ್ರೈಸ್ತ ಶಾಲೆಯಿಂದ ತೇರ್ಗಡೆ ಹೊಂದಿ, ಜೈನ ಕಾಲೇಜಿನಿಂದ ಪಿ.ಯು ಪರೀಕ್ಷೆ ಪಾಸಾಗಿ, ಈಗ ಕ್ರೈಸ್ತ ವಿಶ್ವವಿದ್ಯಾಲಯದಲ್ಲಿ ನನ್ನ ಬಿ.ಕಾಂ ಪದವಿಗಾಗಿ ಓದುತಲಿದ್ದೇನೆ. ನನಗೆ ಪಿ.ಯು. ಪರೀಕ್ಷೆಯಲ್ಲಿ ಶೇಖಡ ಎಂಬತ್ತು ರಷ್ಟು ಅಂಕಗಳು ದೊರಕಿತ್ತು. ನನ್ನ ಹವ್ಯಾಸಗಳೇನೆಂದರೆ ನೃತ್ಯ, ಗಾನ ಕಲೆ, ಛಾಯಾಚಿತ್ರ ತೆಗೆಯುವುದು, ಈಜುವುದು, ಕವನ ರಚನೆ, ಪುಸ್ತಕಗಳು ಓದುವುದು, ಅಡಿಗೆ ಮಾಡುವುದು, ರಂಗೋಲಿ ಬಿಡಿಸುವುದು, ಹಾಗು ಕ್ರೀಡೆಗಳಲ್ಲಿ ಭಾಗವಹಿಸುವುದು.

ನನಗೆ ನಮ್ಮ ಕಾಲೇಜು ತುಂಬ ಹಿಡಿಸಿದೆ. ಕಾರಣ ಪ್ರತಿಯೊಂದು ವರ್ಷ ಕೇವಲ ನಮ್ಮ ವಯಸ್ಸು ಮಾತ್ರವಲ್ಲ, ನಮ್ಮ ಅನುಭವಗಳೂ, ಆಲೋಚನೆಗಳೂ ಹೆಚ್ಚುತ್ತಾ ಹೋಗುವುದು. ಅಂತೆಯೇ ಶಾಲೆಯಿಂದ ಪದವಿ ಪೂರ್ವಕ ಕಾಲೇಜು, ಆನಂತರ ಕ್ರೈಸ್ತ ವಿಶ್ವವಿದ್ಯಾಲಯಕ್ಕೆ ಬಂದ ನನ್ನ ಹಾದಿಯೂ ಸಹ ಅಷ್ಟೇ ಕಷ್ಟಕರ, ಅಷ್ಟೇ ಸುಖಾನುಭವ ! ನಮ್ಮ ಕಾಲೇಗಿನ ವಾತಾವರಣ ಹಾಗು ಸುತ್ತಮುತ್ತಲಿನ ಪರಿಸರವು ಬೆಂಗಳೂರಿನಲ್ಲಿರುವ ಶ್ರೇಷ್ಠ ಹಸಿರು ಉದ್ಯಾನವನಗಳಿಗೇ ಹೋಲಿಸಬಹುದೆಂದರೆ ಸೋಜಿಗವೆ ಸರಿ ! ಕಾಲೇಜಿನ ಪ್ರಾರಂಭ ದಿನಗಳಲ್ಲಿ ನನಗೆ ಕಷ್ಟವೆನಿಸಿದರೂ, ಇತ್ತೀಚೆಗೆ ನಾನು ಅದಕ್ಕೆ ತಕ್ಕಂತೆ ನಡೆದುಕೊಳ್ಳಲು ಕಲಿತಿದ್ದೇನೆ.

ಹಾಗು ವಿಕಿಪೀಡಿಯ ನನ್ನನ್ನು ಆಕರ್ಷಿಸಲು ಕಾರಣ ಅದರ ಕಡಲಿನಂತಹ ಮಾಹಿತಿಗಳು ಹಾಗು ಎಂದಿಗೂ ನಿರಂತರವಾಗಿ ಸುರಿಯುವ ಜ್ಞಾನದ ಮಳೆ. ನನಗೆ ವಿಕಿಪೀಡಿಯಾದಲ್ಲಿ ಮಾಹಿತಿ ಸಂಚಾರ, ತಂತ್ರಜ್ಞಾನ, ಬೌದ್ಧಶಾಸ್ತ್ರ, ರಸಾಯನಶಾಸ್ತ್ರ ಮುಂತಾದವಲ್ಲಿ ಆಸಕ್ತಿ ಇದೆ. ಹಾಗು ವಿಕಿಪೀಡಿಯ ನನಗೆ ತುಂಬ ಸಹಾಯ ಮಾಡಿದೆ. ವಿಕಿಸೊರ್ಸ್ ನಿಂದ ನಾನು ವಿಷಯಗಳನ್ನು ಸಂಗ್ರಹಿಸುವುದು, ಟೈಪಿಂಗ್ ಮಾಡುವುದೆಲ್ಲವನ್ನೂ ಕಲಿತೆನು. ನಾನು ವಿಕಿಪೀಡಿಯಾದಲ್ಲಿ " ಎಡಿಟರ್ " ಕೆಲಸ ನಿರ್ವಹಿಸಲು ಇಚ್ಚಿಸುತ್ತೇನೆ.