ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕಾಂತ ದೃಕ್ಶಾಸ್ತ್ರ

ವಿಕಿಸೋರ್ಸ್ದಿಂದ

ಕಾಂತ ದೃಕ್‍ಶಾಸ್ತ್ರ

ದೃಕ್ ವಿದ್ಯಮಾನಗಳ ಮೇಲೆ ಕಾಂತ ಕ್ಷೇತ್ರದ ಪ್ರಭಾವವನ್ನು ಪರಿಶೀಲಿಸುವ ಭೌತವಿಜ್ಞಾನದ ವಿಭಾಗ (ಮ್ಯಾಗ್ನೆಟೊ ಆಪ್ಟಿಕ್ಸ್). ಬೆಳಕು ವಿದ್ಯುತ್‍ಕಾಂತ ವಿಕಿರಣವಾಗಿರುವ ಅಂಶವನ್ನು ಜ್ಞಾಪಿಸಿಕೊಂಡರೆ ಬೆಳಕು ಮತ್ತು ಕಾಂತ ಕ್ಷೇತ್ರಗಳ ನಡುವೆ ಅಂತರಕ್ರಿಯೆ (ಇಂಟರ್ಯಾಕ್ಷನ್) ಸಂಭವಿಸುವುದು ಸಾಧ್ಯವೆಂದು ತೋರುತ್ತದೆ. ಆದರೂ ಕಾಂತಕ್ಷೇತ್ರ ಮತ್ತು ಬೆಳಕು ಇವೆರಡರ ನೇರ ಪ್ರತಿಕ್ರಿಯೆಯಿಂದ ಕಾಂತದೃಕ್‍ಪರಿಣಾಮಗಳು ಉಂಟಾಗುವುದಿಲ್ಲ.  ಆದರೆ ಬೆಳಕನ್ನು ಉತ್ಸರ್ಜಿಸುವ ಅಥವಾ ಅವಶೋಷಿಸುವ ಪ್ರಕ್ರಿಯೆಯಲ್ಲಿರುವ ವಸ್ತುವಿನ ಮೇಲೆ ಕಾಂತಕ್ಷೇತ್ರದ ಸ್ವಭಾವವೇ ಈ ಪರಿಣಾಮಗಳಿಗೆ ಕಾರಣ.

ಜೀóಮಾನ್ ಪರಿಣಾಮ: ರೇಖಾರೋಹಿತವನ್ನು ಉತ್ಸರ್ಜಿಸುವ ಆಕರವನ್ನು ಪ್ರಬಲ ಕಾಂತಕ್ಷೇತ್ರದಲ್ಲಿಟ್ಟಾಗ ಒಂಟಿ ರೇಖೆಗಳು ಸನ್ನಿಕಟ ರೇಖಾ ಸಮೂಹಗಳಾಗಿ ಸೀಳಲ್ಪಡುವ ವಿದ್ಯಮಾನ. ಇದೇ ಜಿûೀಮಾನ್ ಪರಿಣಾಮ.  ಪ್ರತಿ ಲೋಮ (ಇನ್ವರ್ಸ್) ಜಿûೀಮಾನ್ ಪರಿಣಾಮದಲ್ಲಿ ಅವಶೋಷಿಸುವ ವಸ್ತುವನ್ನು ಕಾಂತಕ್ಷೇತ್ರದಲ್ಲಿಟ್ಟಾಗ ಅವಶೋಷಿತ ರೇಖೆಗಳು ಸೀಳುತ್ತವೆ.  ಅತ್ಯಲ್ಪ ಅಂತರದ ಮಟ್ಟಗಳಿಂದ ಉತ್ಪನ್ನವಾಗುವ ರೋಹಿತ ರೇಖೆಗಳಿಗೆ ಜಿûೀಮಾನ್ ಪರಿಣಾಮವನ್ನು ಪ್ಯಾಷೆನ್-ಬ್ಯಾಕ್ ಪರಿಣಾಮ ಎಂದು ಕರೆಯುತ್ತಾರೆ.  ಹೆಚ್ಚು ಕಡಿಮೆ ಎಲ್ಲ ಕಾಂತ ದೃಕ್ ಪರಿಣಾಮಗಳಿಗೆ ವಿವರಣೆ ಜಿûೀಮಾನ್ ಪರಿಣಾಮದ ಮೇಲೆಯೇ ಆಧರಿತವಾಗಿದೆ. ಆದ್ದರಿಂದ ಜಿûೀಮಾನ್ ಪರಿಣಾಮವನ್ನು ಕಾಂತದೃಕ್ ಪರಿಣಾಮಗಳಿಗೆಲ್ಲ ಮೂಲವೆಂದು ಪರಿಗಣಿಸಬಹುದು. ಇದರಿಂದ ಪರಮಾಣುವಿನ ರಚನೆ ಕುರಿತ ಮಾಹಿತಿಯನ್ನು ನಿಗಮಿಸಬಹುದು.

ಫ್ಯಾರಡೇ ಪರಿಣಾಮ: ಪ್ರಬಲ ಕಾಂತಕ್ಷೇತ್ರದಲ್ಲಿಟ್ಟಿರುವ ಸಮದೈಶಿಕ ಪಾರಕ ಮಾಧ್ಯಮದ ಮೂಲಕ ಸಮತಲ ಧ್ರುವೀಕೃತ (ಪ್ಲೇನ್ ಪೋಲರೈಸ್ಡ್ ಲೈಟ್) ಬೆಳಕನ್ನು ಕಾಂತಕ್ಷೇತ್ರ ಘಟಕದ ದಿಶೆಯಲ್ಲಿ ಹರಿಸಿದಾಗ ಧ್ರುವೀಕರಣ ತಲದಲ್ಲಿ ಕಂಡುಬರುವ ಆವರ್ತನೆಗೆ ಫ್ಯಾರಡೇ ಪರಿಣಾಮವೆಂದು ಹೆಸರು. ಬೆಳಕು ಚಲಿಸಿದ ದೂರ , ಸಂಚರಣ ದಿಶೆಯಲ್ಲಿ ಕ್ಷೇತ್ರದ ಸಾಮಥ್ರ್ಯ, ಮತ್ತು ಆವರ್ತನ ಕೋನ  ಆಗಿದ್ದರೆ, ಆಗ  ಇಲ್ಲಿ  ಗೆ ವರ್ಡೆಟ್ ಸ್ಥಿರಾಂಕವೆಂದು ಹೆಸರು.

ವಾಯಿಗ್ಟ್ ಪರಿಣಾಮ: ಕಾಂತಕ್ಷೇತ್ರದಲ್ಲಿ ಅಸಮವರ್ತಿ (ಅನ್-ಐಸೋಟ್ರೋಪಿಕ್) ವಸ್ತುವನ್ನು ಇಟ್ಟರೆ ಅದು ದ್ವೀವಕ್ರೀಕಾರಕ (ಬೈರೆಫ್ರಿಂಜೆಂಟ್) ಆಗುವುದು. ಅದರ ದೃಕ್ ಗುಣಧರ್ಮಗಳು ಏಕಾಕ್ಷೀಯ ಹರಳಿನ ಗುಣಗಳಿಗೆ ಸಮರೂಪವಾಗಿರುತ್ತವೆ.  ಕಾಂತಕ್ಷೇತ್ರಕ್ಕೆ ಸಮಾಂತರದಲ್ಲಿ ವೀಕ್ಷಣೆಗಳನ್ನು ಮಾಡಿದರೆ ಫ್ಯಾರಡೆ ಪರಿಣಾಮವನ್ನು ನೋಡಬಹುದು. ಕಾಂತರೇಖೆಗಳಿಗೆ ಲಂಬವಾಗಿ ನೋಡಿದಾಗ ಕಾಣುವ ಅಡ್ಡಕಾಂತೀಯ ದ್ವೀವಕ್ರೀಕಾರಕ ಪರಿಣಾಮಕ್ಕೆ ವಾಯಿಗ್ಟ್ ಪರಿಣಾಮವೆಂದು ಹೆಸರು. ಒಳಹೊಕ್ಕ ಬೆಳಕಿನ ಕಿರಣವನ್ನು ಎರಡಾಗಿ ಒಡೆದು ಬೇರೆ ಬೇರೆ ಕೋನಗಳಲ್ಲಿ ವಕ್ರೀಭವನಗೊಳ್ಳುವಂತೆ ಮಾಡಬಲ್ಲ ಪ್ರಕ್ರಿಯೆಗೆ ದ್ವಿವಕ್ರೀಭವನವೆಂದು ಹೆಸರು.

ಕಾಟನ್ - ಮೂಟಾನ್ ಪರಿಣಾಮ: ದ್ರವವನ್ನು ಅಡ್ಡಕಾಂತಕ್ಷೇತ್ರದಲ್ಲಿಟ್ಟಾಗ (ಟ್ರಾನ್ಸ್‍ವರ್ಸ್ ಮ್ಯಾಗ್ನೆಟಿಕ್ ಫೀಲ್ಡ್) ಬೆಳಕಿನ ದ್ವಿ-ವಕ್ರೀಭವನಕ್ಕೆ ಈ ಪರಿಣಾಮ ಸಂಬಂಧಪಟ್ಟಿದೆ. ತೊಡಕಾದ ಅಣುರಚನೆಯುಳ್ಳ ದ್ರವಗಳಲ್ಲಿ ಇದನ್ನು ನೋಡಬಹುದು. ಪರಮಾಣು ದೃಕ್‍ಅಸಮವರ್ತಿಯಾಗಿದ್ದರೆ ದ್ರವವೂ ಅಸಮವರ್ತಿಯಾ ವಕ್ರೀಭವನವನ್ನು ದ್ವಿ-ವಕ್ರೀಭವನವನ್ನು ಪ್ರದರ್ಶಿಸುತ್ತದೆ. ನೈಟ್ರೋಬೆಂಜಿûೀನ್ ಮತ್ತು ಆರೋಮ್ಯಾಟಿಕ್ ಸಂಯುಕ್ತ ವಸ್ತುಗಳಲ್ಲಿ ಈ ಪರಿಣಾಮವನ್ನು ವೀಕ್ಷಿಸಬಹುದು.

ಕಾಂತ-ದೃಕ್ ಕೆರ್ ಪರಿಣಾಮ: ಲೋಹ-ಕಾಂತೀಯ ವಸ್ತುವನ್ನು ಕಾಂತವಾಗುವಂತೆ ಮಾಡಿದಾಗ ಅದರ ದೃಕ್ ಗುಣಧರ್ಮಗಳು ವ್ಯತ್ಯಾಸವಾಗುತ್ತವೆ. ವಿದ್ಯುಕ್ಷೇತ್ರದ ವರ್ಗಕ್ಕೆ ಅನುಪಾತೀಯವಾಗಿರುವ ವಿದ್ಯುತ್ಪ್ರೇರಿತ ದ್ವಿ-ವಕ್ರೀಭವನಕ್ಕೆ ಕೆರ್ ಪರಿಣಾಮವೆನ್ನುತ್ತಾರೆ. ಒಂದು ಲಾಕ್ಷಣಿಕ ಪರಿಸ್ಥಿತಿಯಲ್ಲಿ ಲೋಹೀಯ ಪರಾವರ್ತನದ ಸಾಮಾನ್ಯ ನಿಯಮಗಳ ಪ್ರಕಾರ ಸಮತಲ-ಧ್ರುವೀಕರಣದ ಬೆಳಕು ಉತ್ಪನ್ನವಾಗಬೇಕು ; ಇದಕ್ಕೆ ಪ್ರತಿಯಾಗಿ ದೀರ್ಘವೃತ್ತ ಧ್ರುವೀಕರಣದ ಬೆಳಕು ಕಾಣಬರುತ್ತದೆ. ಜಾನ್ ಕೆರ್ (1824-1907) ಇದನ್ನು 1875ರಲ್ಲಿ ಆವಿಷ್ಕರಿಸಿದನು.

ಮೇಜರಾನ ಪರಿಣಾಮ: ಕಲಿಲ (ಕೊಲ್ಲಾಯ್ಡಲ್) ದ್ರಾವಣಗಳಲ್ಲಿನ ದೃಕ್ ವಿಷಮದೈಶಿಕ ವಿಷಯಕ್ಕೆ ಈ ಪರಿಣಾಮ ಸಂಬಂಧಿಸಿದೆ. ಕಾಂತಕ್ಷೇತ್ರದಲ್ಲಿ ಕಣಗಳ ದೃಕ್‍ವಿನ್ಯಾಸದಿಂದ ಬಹುಶಃ ಈ ಪರಿಣಾಮ ಸಂಭವಿಸಿರಬಹುದು.

ಸೂಕ್ಷ್ಮತರಂಗ ರೋಹಿತ ವಿಜ್ಞಾನದಲ್ಲಿ ಕಾಂತ-ದೃಕ್ ಪರಿಣಾಮಗಳು ಹೆಚ್ಚು ಹೆಚ್ಚು ಮುಖ್ಯಪಾತ್ರವನ್ನು ವಹಿಸುತ್ತವೆ ; ಇಲ್ಲಿ ಒಂಟಿ ಮಟ್ಟದ ಜಿûೀಮಾನ್ ಘಟಕಗಳ ನಡುವೆ ಸಂಕ್ರಮಗಳನ್ನು ನೇರವಾಗಿ ವೀಕ್ಷಿಸಬಹುದು.  

              (ಎ.ಸಿ.)

(ಪರಿಷ್ಕರಣೆ: ಹೆಚ್.ಆರ್.ಆರ್)