ಪುಟ:ಶ್ರೀ ನಿಂಬರಗಿ ಮಹಾರಾಜರವರ ಬೋಧ ಸುಧೆಯು.pdf/೧೦೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

30 ಬೋಧ- ಸುಧೆ ದೇಹವೊಲ್ಲೆನ್ನು ವುದು, ಕಲ್ಲಿನೊಲುವೊರಗುವದು ಭವಕೆ ಬರುವದೆಯದರ ಭಾವವಿಹುದು. ದೇಹಭಾವನ ತೊರೆದು, ಅದರ ಮಾತನು ಮುರಿದು ಸಾಧನದಿ ಸಾರ್ಥಕತೆ ಪಡೆಯುತಿಹುದು. ೫೫. ಕಲ್ಪನೆಯ ತ್ಯಾಗ. ಕದು ಸಾಧನದಿ ನೀನು, ಬಿದು ಕಲ್ಪನೆಗಳನ್ನು ಬಂದರವನಲ್ಲಿಯೇ ಮುರಿಯುತಿಹುದು, ಕೂಡುವ ಕೊಳ್ಳುವ ಕಾಯ್ದ ಕೊಲ್ವನಾತುಮು ತಾನೆ ಅವನಿಗೆ ಕಲ್ಪನೆಯು ಕೈಗೂಡದು. ಸರ್ವ ದೇವರು ಬಗೆದ ತೆರದಿ ಜರುಗಲಿಯೆಂದು ಕಲ್ಪನೆಯ ಬೀಜವನೆಯಳಿಸುತಿಹುದು, ನಿರ್ವಿಕಲ್ಪನ ಸರ್ವಕಾಲದಲಿ ಕಲ್ಪಿಸಲು ಕಲ್ಪನೆಯು ತಾನೆಯೇ ಅಳಿಯುತಿಹುದು. ೫೬, ಆತ್ಮನು ಮನುಷ್ಯನನ್ನು ಪರೀಕ್ಷಿಸುತ್ತಾನೆ. ಹುಡುಗರನು ಪರಿಕಿಸಲು, ಒಡವೆಯೊಂದನು ಕೊಟ್ಟು ಒಡನೆ ಹಿರಿಯರು ಅದನು ಬೇಡುತಿಹರು. ಕೊಡಲದನು ಒಪ್ಪಿದರೆ, ಅವರು ಸಂತಸಪಟ್ಟು ತೆಗೆದುಕೊಳದಲೆ ಮರಳಿ ನೀಡುತಿಹರು. . 11 92 11 1192. || 1 ಭೋರೆಂದು ಅಳುತಿಹುದು.