ಪುಟ:ಶ್ರೀ ನಿಂಬರಗಿ ಮಹಾರಾಜರವರ ಬೋಧ ಸುಧೆಯು.pdf/೮೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೪ ಬೋಧ-ಸುಧೆ ತಾಪವನು ತಾಳ್ಮೆಯಿಂ ತಾಳ್ವುದೇ ಹಿರಿತಪವು. ತಾಪವಾದುದನೆಲ್ಲ ತಾಳಬೇಕು. ಕೋಪದಿಂ ಶಾಂತಿಯನು ಲೋಪಗೊಳಿಸದೆ ತಾನು ಶಾಂತ ಸಂತರ ತೆರದಿ ಬಾಳಬೇಕು. ಪರರ ಭಾರವನೆಲ್ಲ ಬಗೆಯಿಂದ ತಾಳುತಿರೆ ತನಗೆ ಮಿತಿಮೀರಿದಾ ಹಿತವು ಬಹುದು. ಪರರ ದುಃಖವನಿನಿತು ಸಹಿಸೆ ತನಗೊದಗುತಿಹ ಅಮಿತ ದುಃಖವು ದೂರ ಸರಿಯಬಹುದು. ತಾಳುವುದೆಯೇ ತೆರದಿ ಲಾಭವಹ ವ್ಯಾಪಾರ ಕಿರಿ ಬೆಲೆಗೆ ಹಿರಿಯೊಡನೆ ಪಡೆಯಬೇಕು, ತಾಳ್ಮೆ ಬೆಲೆಯನು ನಿಮ್ಮ ಆತ್ಮನಿಗೆ ಸಲ್ಲಿಸುತ ಶಾಂತಿ-ಸರಕನು ತಾನು ಕೊಳ್ಳಬೇಕು S ೩೧. ಮನಸ್ಸನ್ನು ನೋಯಿಸಬಾರದು ಯಾರ ಮನಸನ್ನಾವ ತೆರದಿ ನೋಯಿಸದಲಿರು ಯಾರನಲಿಸಲು ಬಳಲಿಸಲು ಬೇಡ, ಭಾರಿ ಪೀಡೆಯ ನೀಡದಾರನೂ ಕಾಡದಿರು. ಯಾರ ಬಯಕೆಯನೆಂದೂ ಅಳಿಸಬೇಡ. ಮಾತನಿತ್ತುದರಿಂದ ಸೋತ ಮನುಜಗೆ ತಾನೆ ಯಾತರಲ್ಲಿ ಹಾನಿಯತಿಯಾಗುತಿಹುದೊ ಆ ತೆರೆದ ಮಾತಿನಿಂದಾತನನು ಬಿಡಿಸುತಲಿ ಸಂತಸವನವಗೆ ತಾ ನೀಡುತಿಹುದು || 93 || ॥ ೨೨ |