ಪುಟ:ಶ್ರೀ ನಿಂಬರಗಿ ಮಹಾರಾಜರವರ ಬೋಧ ಸುಧೆಯು.pdf/೯೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

( ಬಿಂದು ೫ ) ಪರ ಮಾರ್ಥ- ಮಾರ್ಗವು ೪೬ ಸಂಸಾರದಲ್ಲಿ ಸುಖವಿಲ್ಲ. ಸಿರಿಯ ಸಂಸಾರವದು, ಸಲಿಲ ಮೇಲಿನ ಗುಳ್ಳೆ ಎಂದದಂತಾಗುವದು ತಿಳಿಯದಿಹುದು. ಹಿರಿಯ ಆತ್ಮನನುಳಿದು ಸಿರಿಸುಖವು ಸಿಗದಲ್ಲಿ ಮೃಗಜಲದಿ ನೆಲ್ಲು ತಾ ಬೆಳೆಯದಿಹುದು. ಸೊಗದ ಸಂಸಾರವದು, ಅಗಸೆ ಹಗೆಯಂತಿಹುದು. ಅದರ ನೆಲೆಯೊಂದಿಗೂ ಸಿಲುಕದಲ್ಲ. ಸೊಗವಿಲ್ಲಿ ದೊರೆಯದಲೆ, ದುಗುಡವೇ ಬರುತಿಹುದು. 1ಅಳಲ ಕಡಲಿನ ದಡವು ನಿಲುಕದಲ್ಲ. ೪೭, ಮನಸ್ಸಿಗೆ ಬೋಧ ಎಲೆ ಮನವೆ ! ಹಿಂದೆ ನೀ, ನಿಂದ್ಯ ಯೋನಿಗಳಲ್ಲಿ ಹಾಳು ಬಾಳನು ಬಾಳಿ ದಣಿದಿ ದಣಿದಿ ! ಚೆಲುವ ಆತುಮನನ್ನು ಒಲವಿನಿಂದರಿಯದಲೆ ಮನಬಂದ ತೆರದಿ ನೀ ಕುಣಿದಿ ಕುಣಿದಿ. ಅಶನ-ವ್ಯಸನಗಳಿಲ್ಲಿ, ನಿದ್ರೆಯಲಸಿಕೆಯಲ್ಲಿ ಮಡದಿಯೆಡೆಯಲಿ ಕಾಲ ಕಳದಿ ಕಳೆದಿ ಹೇಸಿ ನಡೆಯಿಂ ಧನದ ರಾಶಿಗಳ ಮೇಳವಿಸಿ ಜನನ ಮರಣಗಳನ್ನು ತಳೆದಿ ತಳೆದಿ 1 ದುಃಖ. 110 11 11911 || 2 11 || |