ಪುಟ:ನಿರ್ಮಲೆ.djvu/೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

وه ನಿರ್ಮಲ ದುರ್ಮ:-ಅಷ್ಟೇತಾನೆ ! ಹಾ !! ಹಾ !! ಬಲುಸೊಗಸಾಯಿತು ! ಯಾವ ನಾಟಕದಲ್ಲಿಯೂ ಇಂತಹ ನಟನೆಯನ್ನು ನೋಡಿರಲಿಲ್ಲ ? ಬಲು ಸೊಗಸಾಯಿತು ! ಬಲುಸೊಗಸು !! ನಿಜವಾಗಿಯೂ ಕಳ್ಳತನವ ನಡೆಯಿ ತಂದೇ ನಾನು ನಂಬಿದೆನು. ಹಾ ! ಹಾ !! ಚಂಡಿ:-.ಮಗು, ನಿಜವಾಗಿಯೂ ಕಳುವಾಗಿದೆಯಪ್ಪ, ನಾನು ಕೆಟ್ಟೆನೋ ಕೆಟ್ಟೆ ! ನನ್ನ ಪೆಟ್ಟಿಗೆಯನ್ನು ಒಡೆದು-ಅಯ್ಯೋ, ಎಲ್ಲ ವನ್ನೂ ದೋಚಿಕೊಂಡು ಹೋಗಿರುವರು. - ದುರ್ಮ:-ಹಾಗೆಯೇ ಹೇಳುತ್ತಿರು, ನನ್ನ ನ್ನು ಸಾಕ್ಷಿಗೆ ಕರೆಯುವಿ ಯಷ್ಟ, ಗೊತ್ತಾಯಿತು, ನನ್ನನ್ನೇ ಕೋರು. ಚಂಡಿ:-ಮಗೂ, ಹುಡುಗಾಟವಲ್ಲ ವೊ ? ದೇವರಾಣೆ, ಒಡವೆಗಳು ಮಾಯವಾಗಿವೆ. ನಾನು ನಿಜವಾಗಿಯೂ ಕೆಟ್ಟೆನೊ ! ಮುಂದೇನುಗತಿ ? ದುರ್ಮ:-ಅತ್ತೆ, ಅವು ಮಾಯವಾಗಿರುವುದು ನನಗೂ ಗೊತ್ತು. ನಾನೂ ಹಾಗೆಯೇ ಕಮಲೆಯ ಮುಂದೆ ಹೇಳಬೇಕಲ್ಲವೆ ? ಚಂಡಿ:-ಮಗೂ, ನನ್ನ ಮಾತುಗಳನ್ನು ನಂಬಪ್ಪ, ನಿಜವಾಗಿಯೂ ಹಾಳಾಗಿದೆಯಪ್ಪ : ಹುಡುಗಾಟವಲ್ಲ. - ದುರ್ಮ-ಅತ್ತೆ, ನಿನ್ನ ಮಾತುಗಳನ್ನು ಕೇಳಿದರೆ ನನಗೆ ನಗುವು ಹೆಚ್ಚುವುದು, ಹಾ ! ಹಾ ! ಅಹಾ ! -ಸರಿ ! ಸರಿ !! ಕದ್ದವರಾರೆಂಬು ದನ್ನು ನಾನು ಚೆನ್ನಾಗಿ ಬಲ್ಲೆ ನಮ್ಮ ! ಬಲ್ಲೆ ! ಹಾ ! ಹಾ ! ಆಹಾ !! - ಚಂಡಿ:ಅಯ್ಯೋ ! ಎಲ್ಲಿಯೋ ಮುಕ್ಖಾಳ ಸಹವಾಸ ! ಪರಿಹಾ ಸ್ಯಕ್ಕೂ ನಿಜಕ್ಕೂ ಭೇದಜ್ಞಾನವೇ ಬೇಡವೆ ? ಅಯ್ಯೋ ! ಮಡೆಯ ! ನಾನು ಹೇಳುವುದು ನಿಜ, ಸತ್ಯವಾಗಿಯೂ ಪರಿಹಾಸ್ಯವಲ್ಲ, ನನ್ನ ನ್ನು ಹೀಗೆ ಪೀಡಿಸುವಿಯೇಕೆ ? ದುರ್ಮ:-ನೀನು ಹೇಳುವುದಕ್ಕೆಲ್ಲಾ ಸರಿಯಾಗಿ ನಾನು ಸಾಕ್ಷಿ ಯನ್ನು ನುಡಿಯಬೇಕು, ಆಗ ಯಾರೂ ಸಂಶಯಪಡುವುದಿಲ್ಲ, ತಿಳಿಯಿತೆ ? . ಭ