ಪುಟ:ಕಥಾಸಂಗ್ರಹ ಸಂಪುಟ ೨.djvu/೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶ್ರೀರಾಮನ ಜನನ ವಿವಾಹ ವನವಾಸ ಇವುಗಳ ಕಥೆ 53 ತಿಳಿಸುವವನಾಗು ಎಂದು ವಿನಯದಿಂದ ಕೇಳಿಕೊಳ್ಳಲು ರಾಮನು.-ಎಲೈ ಪ್ರಾಣವ ಅಭೆಯೇ ! ಈಗ ನನಗೆ ಒದಗಿರುವ ವಿಪತ್ತನ್ನು ಏನೆಂದು ಹೇಳಲಿ, ಸತ್ಯ ಪ್ರತಿಜ್ಞನಾದ ನನ್ನ ತಂದೆಯು ತನ್ನ ಕಿರಿಯ ಹೆಂಡತಿಯಾದ ಕೈಕೇಯಿಯ ಮಾತಿಗೆ ಕಟ್ಟು ಬಿದವ ನಾಗಿ ಆಕೆಯ ಮಗನಾದ ಭರತನಿಗೆ ಪಟ್ಟಾಭಿಷೇಕವನ್ನು ಮಾಡುತ್ತಾನೆ. “ನನಗಾ ದರೋ ಜಟಾಚೀರಧರನಾಗಿ ಹದಿನಾಲ್ಕು ಸಂವತ್ಸರಗಳ ವರೆಗೂ ಮುನಿಗಳಂತೆ ಗಡ್ಡೆ ಗೆಣಸುಗಳನ್ನು ತಿಂದು ಕೊಂಡು ದಂಡಕಾರಣ್ಯದಲ್ಲಿ ವಾಸಮಾಡುವುದಕ್ಕೆ ಅಪ್ಪಣೆಯ ನ್ನಿತ್ತನು. ಅದು ಕಾರಣ ಈಗ ನಾನು ತಂದೆಯ ಆಜ್ಞಾನುಸಾರವಾಗಿ ವನಪ್ರಯಾಣಕ್ಕೆ ಸನ್ನದ್ದನಾಗಿ ಹೊರಟು ಪ್ರಿಯಳಾದ ನಿನಗೆ ಹೇಳಿಹೋಗಬೇಕೆಂದು ಇಲ್ಲಿಗೆ ಬಂದೆನು. ನೀನು ನನ್ನ ವಿಯೋಗದಿಂದ ದುಃಖಪಡುತ್ತಿರುವ ನನ್ನ ತಂದೆತಾಯಿಗಳಾದ ದಶರಥ ಮಹಾರಾಜನನ್ನೂ ಕೌಸಲ್ಯಾದೇವಿಯನ್ನೂ ಶು ಶೂಪಿಸುತ್ತಿರುವವಳಾಗಿ ಶುಚಿತವ ನವಲಂಬಿಸಿ ನಾನು ಬರುವ ವರೆಗೂ ಇಲ್ಲಿರು, ನನ್ನ ತಮ್ಮಂದಿರನ್ನು ನಿನ್ನ ಹೊಟ್ಟೆ ಯಲ್ಲಿ ಹುಟ್ಟಿದ ಮಕ್ಕಳಿಗಿಂತಲೂ ಹೆಚ್ಚೆಂದು ಭಾವಿಸಿಕೊಂಡಿರು. ನನಗೆ ತಾಯಿಯ ನಿನಗೆ ಅತ್ತೆಯೂ ಆಗಿರುವ ಕೈಕೇಯಿದೇವಿಯ ವಿಷಯದಲ್ಲಿ ಮರೆತಾದರೂ ಬಿರುನು ಡಿಗಳನ್ನಾಡೀಯ ಜೋಕೆ ! ದಶರಥ ಭೂಪಾಲನ ಅಂತಃಪುರ ಜನರೆಲ್ಲರೊಡನೆಯ ಮೃದುಮಧುರವಾದ ಮಾತುಗಳನ್ನಾಡುತ್ತ ವಿಹಿತದಿಂದಿರುವವಳಾಗು ಎಂದು ಹೇಳಲು ಆಗ ಸೀತೆಯು ರಾಮನನ್ನು ನೋಡಿ ಪ್ರೀತ್ಯತಿಶಯದಿಂದ ಕೋಪಿಷ್ಠಳಾಗಿ ಏನೆ ಸಕಲಧರ್ಮಜ್ಞನಾದ ಪ್ರಿಯನೇ ! ಇಂಥ ಮರ್ಮಭೇದಕವಾದ ಮಾತುಗಳನ್ನಾಡು ತಿರುವೆಯಲ್ಲ ? ನಿನ್ನ ನೆಳಲಿನಂತಿರುವ ನನ್ನನ್ನು ಇಲ್ಲೇ ಬಿಟ್ಟು ನೀನು ಮಾತ್ರ ವನಕ್ಕೆ ಹೋಗುವೆಯೋ ? ಬಲು ಚೆನ್ನಾಯಿತು. ನಿನ್ನ ಸಕಲಧರ್ಮಜ್ಞತೆಯೂ ತಿಳಿದಂತಾ ಯಿತು. ಎಲೈ ಆರ್ಯನೇ ! ಲೋಕದಲ್ಲಿ ತಂದೆಯ ತಾಯಿಯ ಮಕ್ಕಳೂ ಆಣ. ತಮ್ಮಂದಿರೂ ಅತ್ತೆ ಮಾವಂದಿರೂ ಬಂಧುಮಿತ್ರರೂ ಸೊಸೆಯರೂ ಇವರೆಲ್ಲರೂ ತಮ್ಮ ತಮ್ಮ ಕರ್ಮಾನುಗುಣವಾಗಿ ಭಾಗ್ಯವನ್ನು ಅನುಭವಿಸುತ್ತಿರುವರು. ಹೆಂಡತಿಯೊಬ್ಬಳು ಮಾತ್ರೆ ಗಂಡನ ಐಶ್ವರ್ಯದಾರಿದ್ರಗಳಲ್ಲೂ ಸುಖದುಃಖಗಳಲ್ಲೂ ಸರಿಪಾಲುಗಾತಿ ಯಾಗಿ ಅನುಭವಿಸುವಳು ಎಂದು ಸಕಲಶಾಸ್ತ್ರ ಪುರಾಣಗಳೂ ಒರಳುತ್ತಿರುವುವು. ನೀನು ವನಕ್ಕೆ ಹೊರಡುವುದಾದರೆ ನಾನು ನಿನಗಿಂತಲೂ ಮುಂಚಿತವಾಗಿ ಹೊರಟು ಕಲ್ಲು ಮುಳ್ಳುಗಳನ್ನು ತುಳಿಯುತ್ತ ನಿನ್ನೊಡನೆಯೇ ಬರುವೆನೆಂದು ಕಂಬನಿಗಳನ್ನು ಸುರಿಸುತ್ತ ಹೇಳಲು ಆಗ ರಾಮನು ಸೀತೆಯನ್ನು ಕುರಿತು-ಎಲೈ ಪ್ರಾಣನಾಯಕಿಯೇ ! ನೀನು ಹೇಳಿದುದೆಲ್ಲವೂ ಯುಕ್ತವಾದುದೇ ಸರಿ. ಆದರೂ ಮಹಾರಾಜನ ಮಗಳೂ ಮಹಾ ರಾಜನ ಸೊಸೆಯ ಅತಿಸುಕುಮಾರಾ೦ಗಿಯೂ ಆಗಿ ಸೂರ್ಯಾತಪಸ್ಪರ್ಶವನ್ನರಿಯದ ನಿನ್ನನ್ನು ಸಿಂಹ ಶಾರ್ದೂಲ ಭಲ್ಲೂ ಕಾದಿ ಕರ ವಗಗಳಿಂದಲೂ ಬಹು ದುಷ ರಾದ ರಾಕ್ಷಸರಿಂದಲೂ ಕೂಡಿ ದುರ್ಗಮವಾದ ಮಹಾರಣ್ಯಕ್ಕೆ ಕರಕೊಂಡು ಹೋಗಿ ಹೇಗೆ ಕಾಪಾಡಲಿ ? ವ್ಯತ್ಯಸ್ತವಾದ ಕಾಡು ದಾರಿಯಲ್ಲಿ ನಡೆಯುವ ನಿನ್ನ ಕೋಮಲವಾದ ಕಾಲುಗಳಿಗೆ ಕಲ್ಕುಳುಗಳು ತಗುಲಿ ರಕ್ತವು ಚಿಲ್ಲೆಂದು ಹೊರಡು