ಪುಟ:ನಿರ್ಮಲೆ.djvu/೯೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಿರ್ಮಲೆ ಆ೭ ತರ (ಸ' ಮುಂದಕ್ಕೆ (ಸ' ಆಮೇಲೆ ನ, ವೊ,' ರ, ವೊ,' ಸ, ವೊ' ಯಾವುದು ಯಾವ ಅಕ್ಷರವೋ ಯಾರು ಬಲ್ಲರು ? ಚಂಡಿ:-ದುರ್ಮತಿ, ಇದೇನು ! ಯಾರಕಾಗದ ? ನಾನು ಓದಿ ಹೇ ಭಲೆ ? ಕಮಲೆ:-ಅತ್ತೆ, ನಾನು ಓದುವೆನು, ಮೋಡಿ ಅಕ್ಷರವನ್ನು ಓದಲು ನಾನು ಚನ್ನಾಗಿ ಅಭ್ಯಾಸಮಾಡಿರುವೆನು, (ದುರ್ಮತಿಯ ಕೈಯಿಂದ ಕಾಗದವನ್ನು ತೆಗೆದುಕೊಂಡು) ಇದು ಯಾರದೆಂಬುದು ಗೊತ್ತೆ ? ದುರ್ಮ:-ಇಲ್ಲ, ಪ್ರಾಯಶಃ ಗುಗ್ಗಾ ಣಿಯಿಂದ ಬಂದಿರಬಹುದು. ಕಮಲೆ: -..ಅವನೇ ಬರೆದಿರುವನು. (ಓದುವಂತೆ ನಟಿಸುವಳು) ಸ್ವಾ ಮಿ, ನಾನು ಕ್ಷೇಮ. ನೀವೂ ಕ್ಷೇಮವಾಗಿರಬಹುದು. ನಾವು ಆನಂದ ಮಂದಿರವನ್ನು ಅಲಂಕರಿಸಿರುವೆವು, ನಮ್ಮ ಮಂದಿರದಲ್ಲೊಬ್ಬನು ಜಟ್ಟಿ ಯನ್ನು ಸೋಲಿಸಿದನು. ಭಾರಿ ಕುಸ್ತಿ ! ಬಹಳ ಸೊಗಸಾದುದು !! ಇದರಲ್ಲಿರುವುದೆಲ್ಲಾ ಕೋಳಿ-ಕುರಿಗಳ ಕಾಳಗದಸುದ್ದಿಇನ್ನೇನೂ ಇಲ್ಲ. ಆಮೇಲೆ ಓದಿದರಾಯಿತು, (ಎಂದು ಅವನ ಜೆ೦ಬಿಗೆ ಮಡಿಸಿ ಹಾಕುವಳು). ದುರ್ಮ:- ಏನೂ ಸ್ವಾರಸ್ಯವಿಲ್ಲ ನಂತೆ. ಆ ವಿಷಯವು ನಿನಗೇನು ಗೊತ್ತು? ಮುಂದೆ ಬರೆದಿರುವುದನ್ನು ಕೇಳಬೇಕು. ನನ್ನ ಪ್ರಾಣವೇ ಈಗ ಆ ಆನಂದಮಂದಿರದಲ್ಲಿದೆ. ಅತ್ತೆ, ಸ್ವಾರಸ್ಯವಿಲ್ಲ ವಂತೆ. ನೀನು ಓದಿ ಹೇಳು. (ಕಾಗದವನ್ನು ಚಂಡಿಯಕಯ್ದೆ ಕೊಡುವನು.) ಚಂಡಿ:-ಇದೇನು ? (ಓದುತ್ತ) slರಾ!! ದುರ್ಮತಿರಾಯರಿಗೆ, ತೋ ಟದಬಳಿ, ಗಾಡಿ ಕುದುರೆ ಸಮೇತವಾಗಿ, ನಾನೂ ಕಮಲಾವತಿಯೂ ನಿನ್ನ ಆಗಮನವನ್ನೇ ಇದಿರು ನೋಡುತ್ತಿರುವೆವು. ನಮ್ಮ ಕುದುರೆಗಳು ಹಜ್ಜೆಹಾ ಕಲಾರವು, ವಾಗ್ದಾನ ಮಾಡಿದಂತೆ ಹೊಸ ಕುದುರೆ ಗಾಡಿಗಳನ್ನು ಸಿದ್ದ ಪಡಿಸುವಿಯೆಂದು ನಂಬಿರುವೆನು, ಶೀಘ್ರಪಡಿಸಬೇಕು, ತಡಮಾಡಿದರೆ ಆ ಮುದಿಗೂಬೆ ನಿಮ್ಮತ್ತೆಯು ಸಂದೇಹಪಡಲು ಅವಕಾಶವಾಗುವುದು. ಇಂತು