ಪುಟ:ಧರ್ಮಸಾಮ್ರಾಜ್ಯಂ.djvu/೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಉಪೋದ್ಘಾತ 66 ಶರಚ್ಚಂದ್ರ ದಾಸ್, ಮತ್ತು ರಾಜೇಂದ್ರಲಾಲಮಿತ್ರ, ನೂ ಸಹ ಬರೆದಿರ್ದ ವಿಷ ಯಗಳನ್ನು ಓದುತ್ತಿರುವಲ್ಲಿ ಈ ಕಥೆಯ ಘನತೆಯು ವ್ಯಕ್ತವಾಯಿತು.

  • ಪ್ರಾಯಶಃ ಕ್ರಿಸ್ತಪೂರ್ವ ೨ ನೆಯ ಶತಮಾನದಲ್ಲಿ, 11 ಮಂಗೋಲ್,, ದೇಶದ ಕೂಷಣವಂಖೋತ್ಪನ್ನ ಕೆಲವು ಯೋದ್ಧರು, ಎಮ್ಮ ಭರತಖಂಡಕ್ಕೆ ಬಂದು ಗಾಂಧಾರ, ಮತ್ತು ಕಾಶ್ಮೀರ, ದೇಶಗಳನ್ನು ಆಕ್ರಮಿಸಿಕೊಂಡರು. ಆಗ ಅಲ್ಲಿ ವಾಸಿಸುತಿರ್ದ ಅರ್ಯಕೂಟದ ಜನರಿಗೆ ಈ ಅನ್ಯದೇಶೀಯರ ಆಳ್ವಿಕೆಯಿಂದಲೂ ಅವರ ದುಷ್ಕೃತ್ಯಗಳಿಂದಲೂ ಅನೇಕ ಉಪದ್ರವಗಳುಂಟಾಗಿ, ಪ್ರಜೆಗಳೆಲ್ಲರೂ ಅಸಮಾಧಾನ ಚಿತ್ತಾದರು, ಇದರಿಂದ ದೇಶದ ಸುಖಯಾತ್ರೆಗೆ ಕುಂದುಂಟಾಯಿತು. ಹೀಗೆಯೇ ಅರ್ಧಶತಮಾನಕಾಲ ಕಳೆಯುವುದರೊಳಗಾಗಿ ರಾಜ್ಯದಲ್ಲಿ ಅವ್ಯವಸ್ಥೆಯು ಪ್ರಬಲಿಸಿತು. ಬಳಿಕ ಈ ಕೂಷಣಜನರ ಮುಖಂಡನಾದ ೧ ನೆಯ 66ಕನಿಷ್ಠ” ಅಥವಾ “ಕಾಸಿಕ ,, ನೆಂಬ ವಿವೇಕಿಯು, ಪ್ರಜಾನುರಾಗವನ್ನು ಸಂಪಾದಿಸಬೇಕೆಂಬ ಉದ್ದೇಶದಿಂದ ಅಲ್ಲಿ ರ್ದ ಪಂಡಿತರನ್ನೂ ವಿರಕ್ತರನ್ನೂ ಕರೆಯಿಸಿ, ರಾಜ್ಯದಲ್ಲಿ ತಾಯಿಯುಂಟಾಗಲು ಉಪಾಯಗ ಳೇನೆಂದು ಕೇಳಿವಾಗ, 16 ಶ್ರೀಮದಾರ್ಯಶ್ವರ,, ನೆಂಬ ಬ್ರಾಹ್ಮಣಬೌದ್ದನು, ಎಮ್ಮಿ ಕಥೆಯನಿಳಕೊಂಡಿರುವ 66 ಬೋಧಿಸತ್ತಾವದಾನಮಾಲಾ ,, ಎಂಬ ಅಸಮವಾದ ದಿವ್ಯಪ್ರಬಂಧವನ್ನು ಬುದ್ಧನ ಪೂರ್ವಜನ್ಮವೃತ್ತಾಂತಗಳನ್ನೊಳಗೊಂಡಿರುವ, ದಿವ್ಯ ನೀತಿಗಳನ್ನೇ ಬೋಧಿಸುವ 66ಚಾತಕ,, ಎಂಬ ಗ್ರಂಥದ ಆಧಾರದಮೇಲೆ ರಚಿಸಿ, ಅದರ ಬೋಧೆಯಂತೆ ರಾಜಪ್ರಜೆಗಳೆಲ್ಲ ರೂ ಆಚರಿಸುವಂತೆ ಆಜ್ಞೆ ಮಾಡಿದನು. ಈ ಆಜ್ಞೆಯು ಸರ್ವಜನರಿಂದಲೂ ಅಂಗೀಕರಿಸಲ್ಪಡಲು ಆ ದೇಶದಲ್ಲಿ ದುಃಖಗಳೆಲ್ಲವೂ ಶಮನವಾಗಿ ರಾಜಪ್ರಜೆಗಳಿರ್ವರಿಗೂ ಪರಸ್ಪರಾನುರಾಗವೂ ಮೈತ್ರಿಗೌರವಗಳೂ ಉಂಟಾಗಿ, ಧರ್ಮ ರಾಜ್ಯವೆನಿಸಲ್ಪಟ್ಟುದೆಂದು ಐತಿಹ್ಯದಿಂದ ತಿಳಿದುಬರುವುದು, ಅದಲ್ಲದೆ ಈ ಗ್ರಂಥದ ಕಥೆಗಳನ್ನು ನಾಟಕವನ್ನಾಗಿ ರಚಿಸಿ, ರೂಪಕವಾಗಿ ಅಭಿನಯಿಸುವಂತೆ ಮಾಡಲಾಗಿ ರಾಜಪ್ರಜೆಗಳೆಲ್ಲರೂ ಪ್ರತಿಯೊಂದು ಶುಭದಿನಗಳಲ್ಲಿಯೂ ವಿಭವವಾಸರಗಳಲ್ಲಿಯೂ ತಪ್ಪದೆ ನೋಡುತ್ತ, ಅದರ ನೀತಿಗಳಂತ ಸಕಲಜನರೂ ಆಚರಿಸುತ್ತ ಬರಲಾಗಿ ರಾಜ್ಯ ವೆಲ್ಲ ಸದ್ಧರ್ಮನುಯವಾಯಿತು.

ಬಳಿಕ ಇದೇ ಉಪಾಯವನ್ನು 64ಟಿಬೆಟ್, ದೇಶದವರೂ, ಅವರಿಂದ ಚಿಕರೂ, ಚೀಲರಿಂದ ಜಪಾನರೂ ಅವಲಂಬಿಸಿ, ರಾಜ್ಯದ ಸುಶಿಯಾತ್ರೆಗೆ ಧರ್ಮವನ್ನೂ ನೀತಿ