ಪುಟ:ಸಾಮಾನ್ಯ ಶಸ್ತ್ರವೈದ್ಯದ ಕಾಯಿಲೆಗಳು.pdf/೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೧ ಜೀವುಂಡಿಗೆ ಪರೀಕ್ಷೆ

ನಾರುಗಾಜಿನ ಅಂತರ್ದರ್ಶಕ ದುರ್ಬೀನುಗಳನ್ನು ತೂರಿಸಿ, ಅವುಗಳಲ್ಲಾದ ಬದಲಾವಣೆಗಳನ್ನು ವೀಕ್ಷಿಸುವ ಪರೀಕ್ಷಾ ವಿಧಾನ ಈಗ ಬಹಳಷ್ಟು ಕಡೆ ಸಾಧ್ಯವಿದೆ. ಜಠರ, ಶ್ವಾಸಕೋಶ, ದೊಡ್ಡ ಕರುಳು ಮುಂತಾದ ಕಡೆಗಳಿಂದ ಈ ದುರ್ಬೀನುಗಳ ಮೂಲಕ ಒಳಗಿರುವ ಗೆಡ್ಡೆ ಅಥವಾ ವ್ರಣದ ತುಣುಕನ್ನು ಹೊರತಂದು ಪರೀಕ್ಷೆಗೊಳಪಡಿಸಬಹುದು. ಯಕೃತ್ತಿನ ತುಣುಕನ್ನು ಚರ್ಮದ ಮೂಲಕ ತೂರಿಸಿದ ಸೂಜಿಯಿಂದ ಹೊರತೆಗೆದು ಪರೀಕ್ಷಿಸುವ ವಿಧಾನ ಬಹಳ ಕಾಲದಿಂದಲೂ ಜಾರಿಯಲ್ಲಿದ್ದುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.

   ಎದೆ ಹೊಟ್ಟೆ ಮುಂತಾದವುಗಳ ಒಳಗಡೆ ಇರುವ ಗಡ್ಡೆ ಅಥವಾ ವ್ರಣಗಳನ್ನು ಶಸ್ತ್ರ ಚಿಕಿತ್ಸೆ ಜರುಗುತ್ತಿರುವಾಗ ಇಲ್ಲವೇ ನಂತರ ಪರೀಕ್ಷೆಗೊಳಪಡಿಸಬಹುದು. ಶಸ್ತ್ರ ಚಿಕಿತ್ಸೆಯಿಂದ ತೆಗೆದ ರೋಗಪೀಡಿತ ಆಂಗ ಅಥವಾ ಗೆಡ್ಡೆಯ ಮಾದರಿ ತುಣುಕನ್ನು ಮತ್ತೆ ಪರೀಕ್ಷೆಗೊಳಪಡಿಸುವುದರಿಂದ, ಈ ಮೊದಲೇ ಮಾಡಿದ ರೋಗ ನಿರ್ಣಯವನ್ನು ಖಚಿತಪಡಿಸಿಕೊಳ್ಳಬಹುದು; ಇಲ್ಲವೇ ಅದು ಬೇರೆ ತರಹೆಯ ಕಾಯಿಲೆಯಿಂದಾದರೆ ಹೊಸ ಚಿಕಿತ್ಸಾ ಕ್ರಮವನ್ನು ಅನುಸರಿಸಲು ಅನುಕೂಲವಾಗುತ್ತದೆ.


                             * * * *