ಪುಟ:ಕಥಾಸಂಗ್ರಹ ಸಂಪುಟ ೨.djvu/೯೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

. ಆಂಜನೇಯನು ಸೀತೆಯನ್ನು ಕಂಡು ಲಂಕಾಪಟ್ಟಣವನ್ನು ಸುಟ್ಟು ದು 83 ಅತಿ ರಮಣೀಯತೆಯುಳ್ಳುದಾಗಿಯೂ ಶೋಭಿಸುತ್ತಿದ್ದಿತು. ಆ೦ಜನೇಯನು ಇಂಥ ಉದ್ಯಾನವನವನ್ನು ನೋಡಿ ಆಶ್ಚರ್ಯವುಳ್ಳವನಾಗಿ ಆ ಮೇಲೆ ಭೂಮಂಡಲದಲ್ಲಿರುವ ಸಕಲಪರ್ವತಗಳೂ ಸಮವಲ್ಲವೆಂದು ಪರಮೇಶ್ವರನಿಗೆ ಆವಾಸಸ್ಥಾನವಾದ ರಜತಾದ್ರಿ ಯೋಪಾದಿಯಲ್ಲಿ ಬೆರತುನಿಂತಿದೆಯೋ ಎಂಬಂತೆ ಅತ್ಯುನ್ನತವಾಗಿರುವ ತ್ರಿಕೂಟಾಚಲದ ಮೇಲುಗಡೆಯಲ್ಲಿ ನವರತ್ನ ಯುಕ್ತವಾದ ಜೀವರತ್ನಗಳಿಂದ ನಿರ್ಮಿತವಾಗಿ ಮೇಘ ಮಂಡಲವನ್ನು ಆಕ್ರಮಿಸಿಕೊಂಡಿರುವ ಕೋಟೆಗಳಿಂದಲೂ ಕನಕಮಯಗಳಾಗಿ ಸೂರ್ಯಮಂಡಲವನ್ನು ಭೇದಿಸಿಕೊಂಡು ಹೋಗಿರುವ ಕೊತ್ತಲುಗಳಿಂದಲೂ ಚಂದ್ರ ಮಂಡಲವನ್ನು ಆಕ್ರಮಿಸಿಕೊಂಡಿರುವ ಪಚೆ ಯ ಅಳೋರಿಗಳಿಂದಲೂ ಥಳಥಳಾಯ ಮಾನವಾಗಿ ಮೇರುಶಿಖರಗಳ ಹಾಗೆ ಪ್ರಕಾಶಿಸುತ್ತಿರುವ ರತ್ನ ಕಲಶಗಳಿಂದಲೂ ಪರಿ ಶೋಭಿಸುತ್ತ, ಅಮರಾವತಿಯನ್ನು ಜರಿಯುವಂತಿರುವ ಲಂಕಾಪಟ್ಟಣವನ್ನು ನೋಡಿ ಕಣ್ಣಿಟ್ಟಿ ಕ್ಷಿಸಲಾರದೆ ಒಂದು ಕ್ಷಣಮಾತ್ರ ಮನಸ್ಸಿನಲ್ಲಿ ರಾಮನ ಪಾದಗಳನ್ನು ನೆನೆ ಯುತ್ತ ಕಣ್ಣು ಚ್ಚಿ ಕೊಂಡಿದ್ದು ಅನಂತರದಲ್ಲಿ ಆ ನಗರದ ದ್ವಾರಸಮೂಾಪಕ್ಕೆ ಬಂದನು. ಆ ದ್ಯಾರಪ್ರದೇಶವು ಹೇಗಿತ್ತೆಂದರೆ ಸಾಲುಮುತ್ತಿನ ಗೊಂಚಲುಗಳಿಂದ ಕಟ್ಟ ಲ್ಪಟ್ಟಿರುವ ತೋರಣಗಳಿಂದಲೂ ರತ್ನಖಚಿತಗಳಾದ ವಜದ ಕವಾಟಗಳಿಂದಲೂ ವಜ್ರ ಸ್ತಂಭಗಳಿಂದಲೂ ನವರತ್ನ ಶಿಲಾನಿರ್ಮಿತವಾದ ಗೋಡೆಗಳಿಂದಲೂ ಕರ್ಪೂರದ ದೀವಿಗೆ ಗಳಿಂದಲೂ ಬಲವಾಗಿ ನೆಡಲ್ಪಟ್ಟಿರುವ ಧ್ವಜಪತಾಕೆಗಳಿ೦ದಲೂ ಶೋಭಿಸುತ್ತಿದ್ದಿತು. ಮತ್ತು ಆ ದ್ವಾರದಲ್ಲಿ ಹುಲಿಮೊಗದ ರಕ್ಕಸರೂ ಜ್ಯೋತಿರ್ಮುಖದ ನಿಶಾಚರರೂ ಬ್ರಹ್ಮ ರಾಕ್ಷಸರೂ ಪಿಶಾಚಿಗಳೂ ಆರ್ಭಟಿಸುತ್ತ ಅತಿ ಭಯಂಕರವಾದ ಆಯುಧಗಳನ್ನು ಧರಿಸಿ ಎಡೆಬಿಡದೆ ಕಾದುಕೊಂಡಿದ್ದರು. ಆಂಜನೇಯನು ಅಂಥ ದ್ವಾರಪ್ರದೇಶವನ್ನು ನೋಡಿ ಆಶ್ಚರ್ಯಪಟ್ಟವನಾಗಿ ತಾನು ಕಾಮರೂಪಿಯಾದುದರಿಂದ ಶರೀರಸೂಕ್ಷತೆ ಯನ್ನು ಹೊಂದಿ ಕಳ್ಳಗಂಡಿಯಿಂದ ತೂರಿ ಒಳಹೊಕ್ಕು ನೋಡಲು ಅಲ್ಲಿ ಒಂದು ನೊಣವನ್ನಾದರೂ ಒಳಗೆ ಹೋಗಬಿಡದೆ ಎಚ್ಚರಿಕೆಯಿಂದ ಕಾಯ್ದು ಕೊಂಡಿರುವ ಲಂಕಿಣಿಯೆಂಬ ಮಹಾ ರಾಕ್ಷಸಿಯನ್ನು ಯುದ್ಧದಲ್ಲಿ ಕೊಂದು ಯಮಾಲಯಕ್ಕೆ ಕಳುಹಿಸಿ ಮುಂದಕ್ಕೆ ಹೋಗಿ ರಾತ್ರಿಯಾದ ಮೇಲೆ ಆನೆ ಕುದುರೆಗಳ ಲಾಯ ಗಳಲ್ಲೂ ದೇವಾಲಯ ಮಂಟಪಗಳೇ ಮೊದಲಾದ ಸ್ಥಳಗಳಲ್ಲೂ ಅಂಗಡಿಬೀದಿಗಳಲ್ಲೂ ಹೂವಾ ಡಿಗರ ಕೇರಿಗಳಲ್ಲೂ ಅನೇಕ ರಾಕ್ಷಸರ ಮನೆಗಳಲ್ಲೂ ರಾವಣನ ಮುಖ್ಯ ಮಂತ್ರಿ ಯಾದ ಪ್ರಹಸನೆಂಬವನ ಮನೆಯಲ್ಲೂ ಕಿವಿ ಮೂಗುಗಳಿಲ್ಲದೆ ವಿಕಾರರೂಪಿಣಿ ಯಾಗಿರುವ ಶೂರ್ಪನಖಿಯೆಂಬ ರಾವಣನ ತಂಗಿಯ ಮನೆಯಲ್ಲೂ ಸೀತೆಯನ್ನು ಹುಡುಕಿ ಕಾಣದೆ ಅಲ್ಲಿಂದ ಮುಂದಕ್ಕೆ ಹೊರಟು ನೋಡಲು ವಿವಿಧವಾದ ಚಿತ್ರಮಂ ಟಪಗಳಿಂದಲೂ ವಿಚಿತ್ರ ತರವಾದ ನೀರಾಜೆಯ ಮೇಲು ಕಟ್ಟುಗಳಿಂದಲೂ ಗಗನವನ್ನು ಮುಟ್ಟುತ್ತಿರುವ ಪತಾಳೆಗಳಿಂದಲೂ ಶೋಭಿಸುತ್ತ ಇ೦ದ್ರಪುಷ್ಪ ಕದಂತಿರುವ ಕುಂಭಕ ರ್ಣನ ಮನೆಯನ್ನು ಹೊಕ್ಕು ಅಲ್ಲಿ ಬಿದ್ದು ನಿದ್ರಿಸುತ್ತಿರುವ ಘೋರಾಕಾರಿಣಿಯರಾದ ರಾಕ್ಷಸಸ್ತ್ರೀಯರನ್ನು ನೋಡಿಕೊಂಡು ಪಾನಭೂಮಿಗಳಲ್ಲೂ ಪಾಠಶಾಲೆಗಳಲ್ಲೂ