ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೨೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೦೭ ಮಾಡಿದ್ದು ಣೋ ಮಹಾರಾಯ, ಕ್ಕೆ ಬಂತು, ಪ್ರಾಣಾ ಕಳೆದುಕೊಂಡಳು ಎಂದು ಜನರು ಆಡಿಕೊಂ ಡಾದ್ರೂ ಮಾನ ಹೋಯಿತಲ್ಲವೆ ? ಅಷ್ಟು ದೂರ ತಾನು ದುರಾ ಲೋಚನೆ ಮಾಡತಕ್ಕದೂ ವಾಸವಲ್ಲವೆ ? ಸೀತಾನ್ನು ನವರನ್ನು ರಾವಣ ಕೈಯಾರ ಮುಡಿ ಎತ್ತಿ ರಧದಮೇಲೆ ಕೂರಿಸಿಕೊಂ ಡು ಹೋದನಲ್ಲ ? ಆದಾಗ್ಯೂ ಅವಳ ಧಾತಿವ್ರತ್ಯಕ್ಕೆ ಭಂಗ ಬರ ಲಿಲ್ಲವಲ್ಲ ? ತುಳಸೀ ಕಟ್ಟೆಯಲ್ಲಿ ಆ ನೀಚನು ಮಾಡಿದ ಮಾನ ಭಂಗವನ್ನು ಯಾರು ಯಾರು ನೋಡಿದರೋ ? ಅದನ್ನು ಕಂಡವರಿ ಗೆಲಾ ತಾನು ಮುಖವನ್ನು ತೋರಿಸುವುದು ಹೇಗೆ ? ಈ ಪ್ರಕಾ ರದಲ್ಲಿ ಸೀತಮ್ಮನ ಮನಸ್ಸಿಗೆ ಬಗೆ ಬಗೆಯಾಗಿ ತೋರುತಾ ಬಂತು. ಎಂಜಲೆತ್ತಿ ಗೋಮಯವನ್ನು ಹತ್ತಿಸಿ ವಾತ್ರೆಯನ್ನು ತೊಳೆದು ಬರಿ ಸುವಷ್ಟರೊಳಗಾಗಿ ಇವಳ ಮೈಗೆ ಇರಸು ಮುರತಾಯಿತು. ವಿಶೇಷವಾಗಿ ಕೋಪವಾಗು ನೀತಿಯಾಗಲಿ ಆನಂದವಾಗಲಿ ಹು ಟಿದರೆ ದೇಹದ ಸಹಜವಾದ ವೃತ್ತಿ ಬದಲಾಯಿಸಿ ವಿಗಡವಾಗು ವುದು. ಯಾವುದು ಎನಾದರೂ ಆಗಲಿ, ಸೀತಮ್ಮ ನಿಗೆ ಬಂದ ಪವೇನೋ ಆ ದಿವಸವೆಲ್ಲಾ ಇಳಿಯಲೇ ಇಲ್ಲ. ಮರುದಿವಸವೂ ಮೂರನೇ ದಿವಸವೂ ಹಾಗೂ ಹೀಗೂ ಇತ್ತು. ಸೀತಮ್ಮ ಏನೋ ಒಂದು ವಿಧವಾಗಿದಾಳೆಂದು ಮನೆಯವರೆಲ್ಲರೂ ಅಂದು ಕೊಳ್ಳುತಾ ಬಂದರು. ಎನಾದರೂ ಆಗಲಿ, ತುಳಸೀ ಪೂಜೆಯನ್ನು ಮಾತ್ರ ಬಿಡಲಿಲ್ಲ. ಪುನಃ ಆ ನೀಚ ಸಮಯವನ್ನು ಸಾಧಿಸಿಕೊಂಡಿದ್ದು ಬಂದಾನೋ ಮಾನಭಂಗ ಮಾಡಿಯಾನೋ ಪ್ರಾಣವನ್ನು ತೆಗೆದಾ ನೋ ಎಂಬ ಭಯ ಚೆನ್ನಾಗಿ ಹುಟ್ಟಿತ್ತು, ಆದಕಾರಣ ಬೃಂದಾ ವನದ ಬಳಿಗೆ ಪೂಜೆಗೆ ಹೋಗುವಾಗ್ಗೆ ಸೀತೆಯು ವಾಗೃತಮ್ಮ