ಪುಟ:ಸಮತಿ ಮದನಕುಮಾರರ ಚರಿತ್ರ.djvu/೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೮ ಸುಮತಿ ಮದನಕುಮಾರರ ಚರಿತ್ರೆ ಕಾರರ ಚರಿತ್ರೆ [ ಅಧ್ಯಾಯ ಹಾರಿ ಹೋಯಿತು, ಅದು ಕೆಳಗೆ ಬಿಟ್ಟು ಹೋದ್ದು ಒಂದು ಗಿಣಿ ಮರಿಯಾಗಿತ್ತು, ಅದಕ್ಕೆ ಗಾಯವೇನೋ ಆಗಿತ್ತು, ಪ್ರಾಣ ಹೋಗಿರ ಲಿಲ್ಲ. ಆಗ ಸುಮತಿಯು-ಜೋಯಿಸರೆ, ಆ ಕೆಟ್ಟ ಹದ್ದು ಈ ಪುಟ್ಟ ಗಿಣಿಗೆ ಅರ್ಧ ಜೀವಮಾಡಿತು, ಅದರ ಮೈಯಿಂದ ರಕ್ತ ಸುರಿಯುತಿದೆ; ರೆಕ್ಕೆ ನೇತಾಡುತಿದೆ. ಅದನ್ನು ನನ್ನ ಎದೆಗೆ ಅವಿಚಿಕೊಳ್ಳು ತೇನೆ, ಬೆಚ್ಚಗಾಗಿ ಚೇತರಿಸಿಕೊಳ್ಳಲಿ, ಮನೆಗೆ ತೆಗೆದುಕೊಂಡು ಹೋಗೋಣ. ಅದಕ್ಕೆ ಪ್ರಾಣ ಬರುವತನಕ ನನ್ನ ಎಡೇ ಅನ್ನದಲ್ಲಿ ಅದಕ್ಕೂ ಸ್ವಲ್ಪ ಹಾಕುತೇನೆ, ಎಂದನು. ಅವರು ಮನೆಗೆ ಬಂದ ಕೂಡಲೆ ಸುಮತಿಯು ಮೊದಲು ಆ ಗಿಣಿ ಮರಿಯನ್ನು ಜೋಪಾನಮಾಡಿ, ಒಂದು ಕುಕ್ಕೆಯಲ್ಲಿ ಮೆತ್ತಗಿರುವ ಹಾಗೆ ಹುಲ್ಲನ್ನು ಹಾಕಿ ಒಂದು ಕರಟದಲ್ಲಿ ಸ್ವಲ್ಪ ಅನ್ನ ನನ್ನೂ ಇನ್ನೊ೦ದು ಕರಟದಲ್ಲಿ ನೀರನ್ನೂ ಇರಿಸಿ, ಅದರ ಮೇಲೆ ತೆಳ್ಳಗಿರುವ ಬಟ್ಟೆ ಯನ್ನು ಮುಚ್ಚಿದನು. ತರುವಾಯ ರಾಮಜೋಯಿಸನೂ .ಸುಮತಿಯೂ ಊಟಕ್ಕೆ ಹೊರಟು ಹೋದರು. ಇತ್ತ ಮದನ ಕುಮಾರನಿಗೆ ಅವನ ಕೋರಿಕೆಯಂತೆ ನಡೆಯದೇ ಹೋದ್ದರಿಂದ ಬಹುವಾಗಿ ಅಸಮಾಧಾನವಾಯಿತು ; ಹಗಲೆಲ್ಲಾ ಅಲ್ಲಿ ಇಲ್ಲಿ ಸುತ್ತಾಡುತಾ ಇದ್ದನು. ಕಡೆಗೆ ಜೋಯಿಸರ ಹಿಂದೆಯೇ ಮನೆಗೆ ಬಂದನು. ಬಹಳ ಹಸಿವಾಗಿತ್ತು, ಎಲ್ಲರ ಸಂಗಡ ತಾನೂ ಊಟಕ್ಕೆ ಸಿದ್ದ ಮಾಡಿಕೊಂಡನು. ರಾಮಜೋಯಿಸನು ಇದನ್ನು ಕಂಡು-ರಾಜ ಕುಮಾರರೆ, ತಾವು ಊಟಕ್ಕೆ ಸಿದ್ದವಾಗಕೂಡದು, ತಮಗೆ ಇಲ್ಲಿ ಎಡೆ ಮಾಡಿ ಬಡಿಸುವವರು ಯಾರೂ ಇಲ್ಲ, ಮೈ ಬಗ್ಗಿ ಕೆಲಸಮಾಡುವುದಕ್ಕೆ ತಾವು ರಾಜಕುಮಾರರು, ತಮ್ಮ ಪದವಿ ಅತಿ ದೊಡ್ಡದು, ನಮ ಗೇನೋ ಹಾಗಲ್ಲ, ನಾವು ರಟ್ಟೆ ಮುರಿಯ ಗೆಯ್ಯತಕ್ಕವರು. ಆದರೆ ಕೆಲಸಕ್ಕೆ ಪಾಲುಮಾರತಕ್ಕವರಿಗೋಸ್ಕರ ಗೆಯ್ಯಲು ನಮಗೆ ಇಷ್ಟವಿಲ್ಲ, ಎಂದು ಹೇಳಿದನು. - ಈ ಮಾತನ್ನು ಕೇಳಿ ಮದನನು ಒಂದು ಮೂಲೇ ಹತ್ತಿರಕ್ಕೆ ಹೋಗಿ ಎರಡು ಕೈಗಳಲ್ಲಿಯೂ ತನ್ನ ಮುಖವನ್ನು ಮುಚ್ಚಿಕೊಂಡು