ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೧೦೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಚರ್ಗ, ೧೦ || ಅಯೋಧ್ಯಾಕಾಂಡವು; 1ಳು ಪ್ರಿಯಳಾಗಿದ್ದುದಲ್ಲದೆ, ಆಕೆಗೆ ಮೊದಲಿನಿಂದ ರಾಮನಲ್ಲಿಯೂ ಅಸಾಧಾರ ಣವಾದ ಪ್ರೇಮವಿದ್ದುದರಿಂದ, ಅವಳಿಗೆ ಈ ಪ್ರಿಯವೃತ್ತಾಂತವನ್ನು ತಾ 'ನಾಗಿಯೇ ಹೋಗಿ ತಿಳಿಸಬೇಕೆಂದು ನಿಶ್ಚಯಿಸಿಕೊಂಡು, ಅವಳ ಅಂತಃಪುರ ದಕಡೆಗೆ ಹೊರಟನು.ಚಂದ್ರನು, ತನ್ನನ್ನು ನುಂಗುವುದಕ್ಕಾಗಿ ನಿರೀಕ್ಷಿಸು ತಿರುವ ರಾಹುವನ್ನೊಳಗಡಗಿಸಿಕೊಂಡು, ಮೇಲೆ ಬಿಳೀಮೇಷುಗಳಿಂದ ತುಂ ಬಿದ ಆಕಾಶವನ್ನು ಪ್ರವೇಶಿಸುವಂತೆ, ದಶರಥನು ತನಗೆ ಮೃತ್ಯುಹೇತುವಾದ ಆ ಅಂತಃಪುರವನ್ನು ಪ್ರವೇಶಿಸಿದನು. ಆಹಾ! ದೈವಗತಿಯವೈಚಿತ್ರವನ್ನು ಹೇಳ ತಕ್ಕುದೇನು? ಈ ಕಾಲಕ್ಕೆ ಸರಿಯಾಗಿ ಆ ಆಂತಃಪುರದ ಸುತ್ತಲೂ, ಈತನಿಗೆ ಕಾಮೋದ್ದೀಪನವನ್ನುಂಟುಮಾಡುವಂತೆ, ಗಿಳಿಗಳು, ನವಿಲುಗಳು, ಕಂಚ ಗಳು, ಹಂಸಗಳು, ಇವೇ ಮೊದಲಾದ ಉಪವನಪಕ್ಷಿಗಳೆಲ್ಲವೂ ಕಿವಿಗಿಂಪಾದ ಸ್ವರದಿಂದ ಕೂಗಲಾರಂಭಿಸಿದುವು. ನಾಲ್ಕು ಕಡೆಗಳಿಂದಲೂ ಕರ್ಣಾ ನಂದಕರಗಳಾದ ವಾದ್ಯಧ್ವನಿಗಳು ಕೇಳಿಸುತ್ತಿದ್ದುವು. ನಾಯಿಕಾನಾಯಕರ ಪರಸ್ಪರಪ್ರೇಮವನ್ನು ಹೆಚ್ಚಿಸುವ ವಾಕ್ಚಾತುರವುಳ್ಳ ಗುಜ್ಯಾರಿಗಳು, ಗೂನಿಯರು, ಮೊದಲಾದ ಅಂತಃಪುರಪರಿಚಾರಿಕೆಯರೆಲ್ಲರೂ ಅಲ್ಲಲ್ಲಿ ಸಲ್ಲ ಪಿಸುತಿದ್ದರು. ಸಂಪಗೆ, ಚೆನ್ನ ಸುಗೆ, ಮುಂತಾದ ಮರಗಳ ಸಾಲಿನಿಂದ ಅಲಂಕರಿಸಲ್ಪಟ್ಟ ಎಲೆಮನೆಗಳೂ, ಚಿತ್ರಶಾಲೆಗಳೂ, ಅಲ್ಲಲ್ಲಿ ನೇತ್ರಾನಂದಕ ರಗಳಾಗಿದ್ದುವು. ದಂತದಿಂದಲೂ, ಬೆಳ್ಳಿಯಿಂದಲೂ ಬಂಗಾರದಿಂದಲೂ ಮಾಡಲ್ಪಟ್ಟ ಜಗುಲಿಗಳೂ, ಯಾವಾಗಲೂ ಪುಷ್ಟಫಲಭರಿತಗಳಾದ ಗಿಡ ಗಳೂ, ಜಲಸಮೃದ್ಧವಾದ ನಡೆಬಾವಿಗಳೂ, ಅಲ್ಲಲ್ಲಿ ಶೋಭಿಸುತ್ತಿದ್ದುವು. ಬೆಳ್ಳಿ ಬಂಗಾರಗಳಿಂದಲೂ, ದಂತದಿಂದಲೂ ನಿರ್ಮಿತಗಳಾದ ಆಸನಗಳು ಅಲ್ಲಲ್ಲಿ ಕಾಣುತಿದ್ದುವು. ಅಲ್ಲಲ್ಲಿ ನಾನಾವಿಧವಾದ ಅನ್ನ ಪಾನಗಳೂ,ವಿಧವಿಧ ವಾದ ಭಕ್ಷಗಳೂ ತುಂಬಿದ್ದುವು. ಸ್ತ್ರೀಯರ ದಿವ್ಯಾಭರಣಕಾಂತಿಗೆ ಳಿಂದ ಶೋಭಿಸುತ್ತಿದ್ದ ಆ ಪ್ರದೇಶವೆಲ್ಲವೂ ಸ್ವರ್ಗಲೋಕದಂತೆಯೇ ಕಾಣಿ ಸುತಿತ್ತು.ಹೀಗೆ ಸಮಸ್ತಸಂಪತ್ಸಮೃದ್ಧಿಯುಳ್ಳ ಆ ಅಂತಃಪುರವನ್ನು ದಶ ರಥರಾಜನು ಪ್ರವೇಶಿಸಿ ನೋಡಿದಾಗ,ಶಯನಸ್ಥಳದಲ್ಲಿ ಕೈಕೇಯಿಯು ಕಾಣಿ ಸಲಿಲ್ಲ. ಈತನು ಅಂತಃಪುರದ ಬಾಗಿಲಿಗೆ ಬಂದೊಡನೆಯೇ ಕಾಮೋದ್ದೀಪಕ