ಪುಟ:ಸಮತಿ ಮದನಕುಮಾರರ ಚರಿತ್ರ.djvu/೩೦೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೮ ಸುಮತಿ ಮದನಕುಮಾರರ ಚರಿತ್ರೆ [ಅಧ್ಯಾಯ -ಅಯ್ಯಾ, ನೀನು ನಮ್ಮ ತಿಂಡಿಯನ್ನು ತಿನ್ನುವುದಿಲ್ಲವಷ್ಟೆ, ಸ್ವಲ್ಪ ಹುಳಿ ಮೊಸರನ್ನಾದರೂ ತೆಗೆದುಕೊಳ್ಳುವನಾಗೈ, ಎಂದು ತರಿಸಿಕೊಟ್ಟು - ನಮ್ಮ ಆಹಾರ ನಿನಗೆ ಹ್ಯಾಗೆ ತೋರುತಿದೆ ? ಎಂದು ಕೇಳಿದನು. ಆಗ ನಾನು ನನ್ನ ಮನಸ್ಸಿನಲ್ಲಿ ಈ ಶಕರು ಇಂಥಾ ಕಾಡತಿಂಡಿಯನ್ನು ತಿಂದು ದೇಹವನ್ನು ಗಟ್ಟಿಯಾಗಿ ಮಾಡಿಕೊಂಡಿದಾರೆ. ಆದ್ದರಿಂದಲೇ ಇಷ್ಟು ಪರಾಕ್ರಮಿಗಳಾಗಿ ಯಾರೂ ಲಕ್ಷ್ಯವಿಲ್ಲದೆ ರಾಜ್ಯಗಳನ್ನೆಲ್ಲಾ ಜೈಸಿದಾರೆ, ನಮ್ಮ ದೇಶದವರಾದರೋ, ಬೇಕಾದ ಪಕ್ವಾನ್ನ ಗಳನ್ನೂ ವಾಸನೆಕಟ್ಟಿರುವ ಬಗೆ ಬಗೆ ತಿಂಡಿಗಳನ್ನೂ ಮಾಡುವುದರಲ್ಲಿಯೂ ತಿನ್ನು ವುದರಲ್ಲಿಯೂ ಬಹು ಚುರುಕರು. ಈ ಆಹಾರದಿಂದಲೇ ನಮ್ಮ ವರಿಗೆಲ್ಲಾ ಪೌರುಷ ಕಡಮೆಯಾಗಿ ಅನ್ಯರಿಗೆ ಅಧೀನರಾಗಿರುವುದು, ಹೀಗೆಂದು ಯೋಚಿಸಿ, ದೊರೆಯನ್ನು ಕುರಿತು-ಸ್ವಾಮಿ, ನೀವು ಕೇಳಿದ ಪ್ರಶ್ನೆಗೆ ನಾನು ಏನು ಉತ್ತರವನ್ನು ಹೇಳಲಿ ? ನಿಮ್ಮ ಆಹಾರವು ನಿಮ್ಮ ಪುತ್ರರಿಗೆ ಅಷ್ಟು ಆಪ್ಯಾಯನವಲ್ಲದಿದ್ದಾಗ್ಯೂ ನಿಮ್ಮ ಶತ್ರುಗಳಿಗೆ ಹೃದಯವಿದಳನವಾಗಿದೆ, ಎಂದು ಹೇಳಿದೆನು, ದೊರೆಗೆ ನನ್ನ ಮಾತಿನಲ್ಲಿ ಏನೋ ಒಂದು ಪ್ರೀತಿ ತೋರಿ, ನನ್ನಲ್ಲಿ ವಿಶೇಷ ವಾಗಿ ಮೈತ್ರಿಯನ್ನು ಇಟ್ಟು ಕೊಂಡು, ಯಾವಾಗಲೂ ಮಹತ್ಕಾರ್ಯ ಗಳನ್ನು ಕೈಕೊಳ್ಳ ಬೇಕಾದಾಗ ನನ್ನಲ್ಲಿ ಆಲೋಚನೆಯನ್ನು ಕೇಳುತ್ತಾ ನನ್ನನ್ನು ಎಡೆಬಿಡದೆ ಸವಿಾಪದಲ್ಲಿಯೇ ಇರಿಸಿಕೊಂಡಿದ್ದನು. ಈತನ ಸ್ನೇಹದಿಂದ ನಾನು ಶಕರನ್ನು ಈ ಸೀಮೆಯಿಂದ ಹಿಂದಕ್ಕೆ ಕಳುಹಿಸಿ ನಮ್ಮ ದೇಶಸ್ಥರಿಗೆ ಸ್ವಾತಂತ್ರ ದೊರೆಯುವಂತೆ ಮಾಡದಿದ್ದಾಗ್ಯೂ, ಸಮಯವರಿತು ನಾನು ಹೇಳುತಿದ್ದ ಮಂತ್ರಾಲೋಚನೆಯಿಂದ ನಮ್ಮ ದೇಶೀಯರಿಗೆ ಹಿಂಸೆ ಕಡಮೆಯಾಗಿ ಸೌಖ್ಯ ಹೆಚ್ಚಾಯಿತು. ಈ ಶಕರಾಜನ ದರ್ಪಕ್ಕೆ ಅವನಕಡೇ ಜನರೆಲ್ಲರೂ ನಡುಗುತಿದ್ದರು. ಯಾರಿಗೂ ಯಾವ ಕೆಟ್ಟಾಟಕ್ಕೂ ಆಸ್ಪದವಿರಲಿಲ್ಲ. ಈತನ ರಾಜ್ಯವು ರಾಮರಾಜ್ಯವಾಗಿತ್ತು. ಆದರೆ, ಕಾಲಗತಿಯಿಂದ ಈತನು ದೈವಾಧೀನ ನಾಗಲು, ಇವನ ದಿವಸದಲ್ಲಿ ಅಡಗಿ ನಾಯಮರಿಯ ಹಾಗೆ ಬಿದ್ದಿದ್ದ ತುಂಟ ಪಾಳಯಗಾರರೆಲ್ಲರೂ ಎದ್ದು ಕೂತುಕೊಂಡರು, ಇವರನ್ನು