ಪುಟ:ಸಮತಿ ಮದನಕುಮಾರರ ಚರಿತ್ರ.djvu/೧೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೨] ಸುಮತಿ ಮದನಕುಮಾರರ ಚರಿತ್ರೆ ೧t೧ ಜೀವನಕ್ಕೆ ಸಾಕೆ ? ನಮ್ಮ ಅಮ್ಮಯ್ಯ ಒಂದು ದಿನ ಮುಡಿದುಕೊಳ್ಳುವ ಹೂವಿಗೆ ಇದರ ಮೂರರಷ್ಟು ಕೊಡುತ್ತಾರಲ್ಲಾ ! ರೈತ-ಬುದ್ದಿ, ತಾವು ದೊಡ್ಡವರು, ದೊಡ್ಡವರ ಮಾತನ್ನು ಆಡುತೀರಿ, ನಾವು ಬಡವರು, ಕೂಲಿ ಕಂಬಳಮಾಡಿಕೊಂಡು ದೇವರು ಕೊಟ್ಟದ್ದರಲ್ಲಿ ತೃಪ್ತರಾಗಿದ್ದೇವೆ. ಮದನ ದೇವರು ನಿಮಗೆ ಯಾವ ಮಹದೈಶ್ವರವನ್ನು ಕೊಟ್ಟ ದ್ದಕ್ಕೆ ನೀವು ತೃಪ್ತರಾಗಿರಬೇಕು. ರೈತ-ಬುದ್ಧಿ, ನಮಗಿರುವುದೆಲ್ಲಾ ದೇವರು ಕೊಟ್ಟದ್ದೇ, ಹೊದಿ ಯುವುದಕ್ಕೆ ಅಷ್ಟು ಬಟ್ಟೆ ಇದೆ, ಬಿಸಿಲಿಗೂ ಮಳೆಗೂ ಮರೆಯಾಗಿ ಒಂದು ಮನೆ ಇದೆ. ಒ೦ದೇರು ಆರಂಬವಿದೆ. ಒಂದು ಹೋಲವಿದೆ. ಇಷ್ಟು ಸಾಕು. ಇದೂ ಇಲ್ಲದೆ ಇರುವವರಿಗಿಂತಲೂ ನಾವು ಉತ್ತಮರಲ್ಲವೆ ? ಎಂದನು. ಆಗ ಆ ರೈತ ಆಡಿದಮಾತನ್ನು ಕೇಳಿ, ಮದನನು ಆ ಬಡವನ ಒಳ್ಳೆತನಕ್ಕೆ ಆಶ್ಚರ್ಯಪಟ್ಟನು. ಅಷ್ಟರಲ್ಲೇ ಮನೇಗರತಿಯು ಸುಮತಿ ಮದನ ಇಬ್ಬರಿಗೂ ಒಂದೊಂದು ಪಾವು ಹಾಲನ್ನೂ, ಇನ್ನೂ ಅಷ್ಟು ಜೋಳದ ಅರಳನ್ನೂ, ಸ್ವಲ್ಪ ಬೆಲ್ಲವನ್ನೂ, ನಾಲೈದು ಬಾಳೇಹಣ್ಣನ್ನೂ ತಂದು ಇಟ್ಟು, ಹಸಿದು ಇರಬೇಡಿ, ಇದನ್ನು ತಿನ್ನಿ, ಎಂದು ಹೇಳಿದಳು. ಬಹಳವಾಗಿ ಓಡಾಡಿ ಹಸಿದು ಆಯಾಸಪಟ್ಟಿದ್ದ ಇಬ್ಬರು ಹುಡುಗರಿಗೂ ಆ ಬಡವೆ ತಂದ ತಿಂಡಿಯೇ ಬಹು ರುಚಿಯಾಗಿತ್ತು, ಇವರು ಅದನ್ನು ಮೆದ್ದರು. ಈ ಮಧ್ಯೆ ಆ ರೈತನು ಹೋಗಿ, ರಾಮಜೋಯಿಸನಿಗೆ ಈ ಇಬ್ಬರು ಹುಡುಗರೂ ಸೌಖ್ಯವಾಗಿದಾರೆ ಎಂದು ತಿಳಿಸಿದನು. ಇವರನ್ನು ಹುಡುಕಿಕೊಂಡು ಬರುತಿದ್ದ ಜೋಯಿಸನು ಅರ್ಧದಾರಿಯಲ್ಲಿಯೇ ಈ ಸಮಾಚಾರವನ್ನು ಕೇಳಿ, ಆ ರೈತನ ಸಂಗಡಲೇ ಬಂದನು. ಸುಮತಿ ಮದನ, ಇಬ್ಬರೂ, ಗುರುಗಳು ಬರುವುದನ್ನು ಕೇಳಿ ಎದ್ದು ಹೋಗಿ, ಅವರನ್ನು ಎದುರುಗೊಂಡು ಅವರಿಗೆ ನಮಸ್ಕಾರಮಾಡಿ ದರು, ತರುವಾಯ, ತಾವು ಮಳೆಗೆ ಸಿಕ್ಕಿದ್ದೇ ಮೊದಲಾಗಿ ಆ ದಿನ ತಮಗೆ ಸಂಭವಿಸಿದ್ದ ಕಷ್ಟಗಳನ್ನೆಲ್ಲಾ ಹೇಳಿದರು. ಜೋಯಿಸನು 11