ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೦೮ ಶ್ರೀಮದ್ರಾಮಾಯಕ. |ಸರ್ಗ ೪, ದ್ವಾರಪಾಲಕರು ಈ ವಿಷಯವನ್ನು ರಾಮನಿಗೆ ತಿಳಿಸಿದರು. ಸುಮಂತ್ರನು ಪುನಃ ತನ್ನಲ್ಲಿಗೆ ಬರಲುಕಾರಣವೇನಿರಬಹುದೆಂದು ರಾಮನು ಮನಸ್ಸಿನಲ್ಲಿಯೇ ಸ್ವಲ್ಪಹೊತ್ತು ಶಂಕಿಸುತ್ತಿದ್ದು, ಕೊನೆಗೆ ಆತನನ್ನು ಕರೆತರುವಂತೆ ದ್ವಾರ ಪಾಲಕರಿಗೆ ಹೇಳಿ, ಆತನನ್ನು ಬರಮಾಡಿಕೊಂಡು ಎಲೈ ಮಂತ್ರಿ ಶ್ರೇಷ್ಠರ್ತೆ ಪುನಃ ನೀನು ಇಲ್ಲಿಗೆ ಬರಲು ಕಾರಣವೇನು? ವಿವರವಾಗಿ ತಿಳಿಸು” ಎಂದನು. ಸುಮಂತ್ರನು ನಗುತ್ತ, ವತ್ಸ ರಾಮಾ!ದಶರಥನು ತಿರುಗಿ ನಿನ್ನನ್ನು ನೋಡ ಬೇಕೆಂದು ಅಪೇಕ್ಷಿಸುವನು. ರಾಜಾಜ್ಞೆಯನ್ನು ನಾನು ತಿಳಿಸಿರುವೆನು. ಇದರ ಮೇಲೆ ಅಲ್ಲಿ ಹೋಗುವುದೂ, ಅಥವಾ ಬಿಡುವುದೂ, ನಿನ್ನ ಇಷ್ಟಕ್ಕೆ ಅಧೀನ ವಾಗಿರುವುದು” ಎಂದನು. ಸುಮಂತ್ರನು ಹೀಗೆ ಹೇಳಿದುದನ್ನು ಕೇಳಿ, ರಾಮ ನು,ಒಡನೆಯೇ ತಂದೆಯನ್ನು ನೋಡುವುದಕ್ಕಾಗಿ ಪಟ್ಟಣಕ್ಕೆ ಹೊರಟನು. ದಶರಥನು, ರಾಮನು ಬಂದಿರುವ ಅಂಶವನ್ನು ದ್ವಾರಪಾಲಕರಿಂದ ಕೇಳಿ. ತಾನು ಉದ್ದೇಶಿಸಿದ್ದ ಶುಭವಾರ್ತೆಯನ್ನು ಹೇಳುವುದಕ್ಕಾಗಿ ಆತನನ್ನು ಒಳ ಮನೆಗೆ ಕರೆತರಿಸಿದನು.ರಾಮನು ತಂದೆಯ ಒಳಮನೆಯನ್ನು ಪ್ರವೇಶಿಸುತ್ತ, ದೂರದಿಂದಲೇ ಅವನಿಗೆ ಕೈಮುಗಿದು ನಮಸ್ಕರಿಸಿದನು. ಹಾಗೆ ಪ್ರಣಾಮ ಮಾಡುತಿದ್ದ ರಾಮನನ್ನು ದಶರಥನು ಕೈಹಿಡಿದು ಮೇಲಕ್ಕೆಬ್ಬಿಸಿ, ಆತನನ್ನು ಪ್ರೀತಿಯಿಂದಾಲಿಂಗಿಸಿ, ಆಸನವನ್ನು ಕೊಟ್ಟು ಕುಳ್ಳಿರಿಸಿ ಒಂದಾನೊಂದು ಮಾತನ್ನು ಹೇಳುವನು. 'ವತ್ನ ರಾಮಾ ! ನಾನು ಬಹುಕಾಲದವರೆಗೆ ಬದುಕಿ ಮುದುಕನಾಗಿರುವೆನು, ಬೇಕಾದ ಭೋಗಗಳೆಲ್ಲವನ್ನೂ ಅನುಭವಿ ಸಿದುದಾಯಿತು. ವಿಶೇಷವಾದ ಅನ್ನ ದಾನಗಳಿಂದಲೂ, ಭೂರದಕ್ಷಿಣೆಗಳಿಂದ ಊ, ಅನೇಕ ಬ್ರಾಹ್ಮಣರನ್ನು ತೃಪ್ತಿಪಡಿಸಿ, ನೂರಾರು ಯಾಗಗಳನ್ನು ಮಾ ಡಿದೆನು. ಲೋಕದಲ್ಲಿ ಎಣೆಯಿಲ್ಲದ ಕಲ್ಯಾಣಗುಣಗಳಿಂದ ಕೂಡಿದ ನೀನು ನನಗೆ ಪುತ್ರರತ್ತ ವಾಗಿ ಜನಿಸಿರುವೆ. ನಾನು ಇದುವರೆಗೆ ಅನೇಕದಾನಗಳನ್ನು ಮಾಡಿದೆನು. ಅನೇಕ ಯಜ್ಞಗಳನ್ನು ನಡೆಸಿರುವೆನು. ಸಮಸ್ತ ವೇದಾಧ್ಯ ಯನಗಳನ್ನೂ ಮಾಡಿರುವೆನು. ಇದುವರೆಗೆ ನಾನು ಶಾಸ್ತ್ರವಿರುದ್ಯಗಳಲ್ಲದ ಸುಖಗಳೆಲ್ಲವನ್ನೂ ಅನುಭವಿಸಿದುದಾಯಿತು. ಯಾಗಕಾರಿಗಳಿಂದ ದೇವತೆ ಗಳ ಋಣವನ್ನೂ, ಅಧ್ಯಯನಗಳಿಂದ ಋಷಿಗಳಿಗೆ ಸಲ್ಲಿಸಬೇಕಾದ ಋಣವ