ಪುಟ:ಪ್ರಬಂಧಮಂಜರಿ.djvu/೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವಾಕ್ಯವೃಂದ ೧೫ (c) ಸಮತೆ, (The Balanced Structure) ವಾಕ್ಯದ ಬೇರೆ ಬೇರೆ ಭಾಗಗಳು ಪರಸ್ಪರ ತೂಕಮಾಡಿದಂತೆ ಅನುಗ್ರಪವಾದ ಪದಗಳಿಂದ ಕೂಡಿರುವುದು ಸಮ ತೆಯೆನಿಸುವುದು. ಇದು ಏಕೀಭಾವ, ಶಬ್ದ ಕ್ರಮಗಳಂತೆ ಎಲ್ಲಾ ವಾಕ್ಯಗಳಲ್ಲಿಯೂ ಇರುವುದಿಲ್ಲ. ಎಲ್ಲಿ ಎರಡು ವಸ್ತುಗಳಿಗಿರುವ ತಾರತಮ್ಯವನ್ನು ಚೆನ್ನಾಗಿ ತೋರಿಸಬೇಕೋ ಅಲ್ಲಿ ಇದು ಉಚಿತವು, ಸಮತೆಯಿಂದ ವಾಕ್ಯಗಳಿಗೆ ಒಂದು ವಿಧವಾದಗಾಂಭೀರ್ಯ ಬರುವುದು. ಸಮತೆಯುಳ್ಳ ವಾಕ್ಯಗಳನ್ನು ಸುಲಭವಾಗಿ ನೆನಪಿಟ್ಟುಕೊಳ್ಳಬಹುದು. ಅವು ಲಾಲಿತ್ಯದಿಂದ ಕೂಡಿ ಕಿವಿಗಿಂಪಾಗಿಯೂ ಇರು ವುವು. ಉದಾ. (4ಎಲ್ಲಿ ಮಕರಂದವಿರುವುದೋ, ಅಲ್ಲಿ ಜೇನುಹುಳುಗಳಿರುವುವು. ” 4 ಅರಸನು ಶೂರನಾಗಿಯೂ ಸಾಹಸಿಯಾಗಿಯೂ ಇದ್ದಲ್ಲಿ, ಹಗೆಗಳ ಕಾಟವಿಲ್ಲದೆ ದೇಶವು - ಸುರಕ್ಷಿತವಾಗಿರುವುದು ; ಅವನು ಹೇಡಿಯಾಗಿಯೂ ಇದ್ದಲ್ಲಿ, ಶತ್ರುಗಳ ಬಾಧೆ. ಯಿಂದ ದೇಶವು ಹಾಳಾಗುವುದು, ” ಸಮತೆಯು ಗಾದೆಗಳಲ್ಲಿ ವಿಶೇಷವಾಗಿದೆ. ಉದಾ:- ಅತ್ತೆಗೊಂದು ಕಾಲ, ಸೊಸೆಗೊಂದು ಕಾಲ, ” «« ಕಾಡು ಹೋಗೆನ್ನುವುದು, ಊರು ಬಾ ಎನ್ನುವುದು" 14 ಮರದ ಕಾಲು ಬೆಂಕಿಗಾಗದು, ಮಣ್ಣ ಕಾಲು ನೀರಿಗಾಗದು,” 11 ಆಡಿ ತೋರಿದರೆ ಅರವತ್ತು ಗುಣ, ಮಾಡಿ ತೋರಿದರೆ ಮುನ್ನೂರು ಗುಣ” 46ಸಾಸಿವೆ ತೋರದ ಸಂಕಟಕ್ಕೆ, ಗುಟ್ಟದ ತೋರದ ಗೋಳಾಟವೇ?” ನಾಕಬೃಂದ, (Paragraph,) ಒಂದೇ ಉದ್ದೇಶವುಳ್ಳ ವಾಕ್ಯಗಳ ಗುಂಪಿಗೆ ವಾಕ್ಯವೃಂದವೆಂದು ಹೆಸರು. ಒಂದೇ ವಿಷಯವನ್ನು ಕುರಿತ ಅನೇಕ ವಾಕ್ಯವೃಂದಗಳೇ ಪ್ರಬಂಧ ವೆನಿಸುವುದು. ಪ್ರತಿಯೊಂದು ವಾಕ್ಯವೃಂದವೂ ಪ್ರಬಂಧವಿಷಯದ ಒಂದೊಂದು ಮುಖ್ಯಾಭಿಪ್ರಾಯವನ್ನೂ ಅದಕ್ಕೆ ಸಂಬಂಧಪಟ್ಟ ಅಭಿಪ್ರಾಯಗಳನ್ನೂ ಒಳಗೊಂಡಿರುವುದು,