ಪುಟ:ಪ್ರಬಂಧಮಂಜರಿ.djvu/೧೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪೪ ಪ್ರಬಂಧಮಂಜರಿ ಎರಡನೆಯ ಭಾಗ, ಯೇ ಪರಮದ್ವೇಷಿಗಳಾಗುವರು, ಅವರ ಚಿತ್ತವೃತ್ತಿಕ್ಷಣಿಕವು. ಇಪ್ಪತ್ತು ವರ್ಷಗಳಿಗೆಮುಂಚೆಯೇ ಬಹಳಅನುರಾಗವುಳ್ಳವರಾಗುವರು,ಕೋಪಬಂದರೆ ಅವರು ರೇಗುವುದಕ್ಕೆ ಮಿತಿಯೇ ಇಲ್ಲ. ಚಿರಕಾಲದಿಂದಲೂ ಇದ್ದ ಸ್ನೇಹವು ಅಲ್ಪ ಕಾರಣದಿಂದ ಹಠಾತ್ತಾಗಿ ಹೋಗಿಬಿಡುವುದುಂಟು. ಉಷ್ಣ ಭೂಮಿ ಸ್ವಲ್ಪ ಶ್ರಮಪಟ್ಟರೂ ಬೆಳೆಯಾಗುವಷ್ಟು ಹಸನಾಗಿರುವುದು. ಆದುದರಿಂದ ಜನರು ವಿಶೇಷವಾಗಿ ಕಷ್ಟ ಪಡುವುದನಾವಶ್ಯಕ. ಹೀಗೆ ಸುಲಭವಾಗಿ ಹೊಟ್ಟೆ ಪಾಡು ನಡೆವುದರಿಂದ ಜನರು ಸೋಮಾರಿಗಳಾಗುತ್ತಾರೆ. ಕೆಲಸಮಾಡುವ ಸಾಮರ್ಥ್ಯವೂ ಕೊಬ್ಯೂ ಸೆಕೆಯಿಂದ ನಾಶವಾಗಿ ಅವರ ಮೈಯುಡುಗಿ ಜಳ್ಳಾಗುವುದು. ಶೀತದೇಶಗಳಲ್ಲಿ ಪ್ರಾಣಿವರ್ಗವು ಚಳಿಯಿಂದ ಕೈಕಾಲು ಕಟ್ಟಿಕೊಂಡು, ಸ್ಥಳದಿಂದ ಸ್ಥಳಕ್ಕೆ ಚಲಿಸಲಾರದೆ, ಇದ್ದ ಕಡೆಯೇ ಇದ್ದು ಗಡಗಡನೆ ನಡು. ಗುತ್ತಾ ಯಾವ ಕೆಲಸವನ್ನೂ ಮಾಡಲಾಗದೆ, ಬೆಳೆಗಳಿಗೆಯಲ್ಲಿಯೂ ಕಡಮೆ ಯಾಗುತ್ತಾ ಬರುತ್ತದೆ. ಇಂಥದೇಶದ ಜನರಿಗೆ ಎಲ್ಲಾ ಕೆಲಸದಲ್ಲಿಯೂ ಬಲು ಉಪೇಕ್ಷೆ.ಬಲವಾದ ಪ್ರೀತಿ, ಸ್ನೇಹ, ದ್ವೇಷಗಳು ಕಂಡುಬರುವುದೇ ಇಲ್ಲ. ಜನರುಸ್ವಾರ್ಥಪರರಾಗಿರುವರು, ಬಲುಚಳಿಯು ಶಕ್ತಿಯನ್ನು ಕುಂದಿ ಸುವುದು, ಅವರಿಗೆ ಯಾವ ಕೆಲಸಮಾಡಲೂ ಉತ್ಸಾಹವೇ ಇರುವುದಿಲ್ಲ. ಪಟ್ಟ ಕಷ್ಟವು ನಿಷ್ಪಲವಾಗುವಷ್ಟು ನೆಲವು ಒರಟಾಗಿರುವುದರಿಂದ ಜನರು ಪ್ರಯತ್ನವನ್ನೇ ಮಾಡುವುದಿಲ್ಲ. ಸಮಶೀತೋಷ್ಣ ದೇಶಗಳಲ್ಲಿ ಚಳಿಯೂ ಸೆಕೆಯೂ ಸಮವಾಗಿರುವುವ. ಹಾಗೆಯೇ ಅಲ್ಲಿಯಜನರಮನೋವೃತ್ತಿಗಳುಪ್ರಬಲವಾಗಿರುವುದಿಲ್ಲ. ಎಲ್ಲಾ ವಿಷಯಗಳಲ್ಲಿಯ ಜನರು ವಿವೇಕಿಗಳಾಗಿರುವರು ಅನುರಾಗ, ಧೈರ್ಯ, ದ್ವೇಷ ಮುಂತಾದುವು ಅವರಲ್ಲಿ ಉಂಟು; ಆದರೆ ಅತ್ಯಧಿಕವಾಗಿರುವುದಿಲ್ಲ. ಸಮಶೀತೋಷ್ಣ ದೇಶಗಳಲ್ಲಿ ಕಷ್ಟ ಪಡದೆ ಬೆಳೆಯಾಗುವುದಿಲ್ಲ; ಆದರೆ ಪಟ್ಟ ಕಷ್ಟವೆಲ್ಲಾ ಸಫಲವಾಗುವುದು. ಇದರಿಂದ ಜೀವನಕ್ಕೊಸ್ಟರಶ್ರಮಪಡ. ಕುತೂಹಲಹುಟ್ಟಿ ಜನರು ಕಷ್ಟ ಪಟ್ಟು ಕೆಲಸಮಾಡುವ ಸ್ವಭಾವವುಳ್ಳವರಾಗುವುದಲ್ಲದೆ, ಚಟವಟಿಕೆಯ ಸಾಮರ್ಥ್ಯವೂ ಅವರಲ್ಲಿ ಹೆಚ್ಚುತ್ತವೆ. ಉಷ್ಣ ದೇಶಗಳಲ್ಲಿ ಕರಿಯಮೋಡಗಳ ಗುಂಪುಗಳೂ ಮಿಂಚುಗಳ ಹೊಳಪುಗಳೂ ಭಯಂಕರವಾದ ಗುಡುಗುಗಳ ಆರ್ಭಟವೂ ಆಕಾಶದಲ್ಲಿ ತುಂಬಿ