ಪುಟ:ಪ್ರಬಂಧಮಂಜರಿ.djvu/೧೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೩೪ ಪ್ರಬಂಧಮಂಜರಿ-ಎರಡನೆಯ ಭಾಗ ಗುಟ್ಟುವುದುಂಟಷ್ಟೆ. ಆಯಾ ವೇಳೆಗಳಲ್ಲಿ ಕೆಲಸಮಾಡುತ್ತ ಬಂದರೆ, ಎಲ್ಲ ಕೆಲ. ಸಗಳಿಗೂ ಬೇಕಾದಷ್ಟು ಹೊತ್ತು ಸಿಕ್ಕುವುದರಲ್ಲಿ ಸಂಶಯವಿಲ್ಲ. ನಾವು ಮಾಡಬೇಕಾದ ಕೆಲಸಗಳನ್ನು ಒಂದುಕಡೆ ಬರೆದಿಟ್ಟು ಕೊಂಡು, ಅವನ್ನು ಆಯಾ ಹೊತ್ತಿನಲ್ಲಿಯೇ ಮಾಡುತ್ತ ಬಂದರೆನಮ್ಮ ಕರ್ತವ್ಯಗಳನ್ನು ಸರಿಯ ಗಿ ನೆರವೇರಿಸುವುದಕ್ಕೂ, ಜ್ಞಾನಸಂಪಾದನೆಗೂ ಬೇಕಾದಷ್ಟು ಕಾಲಸಿಕ್ಕುವುದು ಸಕಾಲದಲ್ಲಿ ಕೆಲಸಮಾಡುವ ಗುಣವು ಇಂಗ್ಲಿಷ್ ಜನರಲ್ಲಿ ತುಂಬಿರುವುದನ್ನು ನಾವು ಕಣ್ಣಾರನೋ ಡುತ್ತಿದ್ದೇವೆ. ಇದರ ಬಲದಿಂದಲೇ ಅವರು ಅಪರಿಮಿತವಾದ ಕೆಲಸಗಳನ್ನು ಸಾಧಿಸಲು ಸಮರ್ಥರಾಗಿ ಇಷ್ಟು ಏಳಿಗೆಗೆ ಬಂದಿರುವರು. ಈ ಗುಣದ ಎರಡನೆಯ ಉಪಯೋಗವೇನೆಂದರೆ:- ಇದರಿಂದ ಮ. ರ್ಯಾದೆಯುಂಟಾಗುವುದು, ಮಾಡಬೇಕೆಂದು ಗೊತ್ತು ಮಾಡಿಕೊಂಡಿರುವ ಕೆಲಸವನ್ನು ತಕ್ಕ ಸಮಯದಲ್ಲಿ ಮಾಡದಿರುವುದುನಮಗೆ ಆ ಕೆಲಸ ಮುಖ್ಯ - ವಲ್ಲವೆಂಬುದನ್ನು ತೋರಿಸುತ್ತದೆ. ಸ್ನೇಹಿತರನ್ನು ನಮಗಾಗಿ ಕಾಯಿಸಿದರೆ, ಅವರನ್ನು ನಾವು ತಿರಸ್ಕರಿಸಿದಂತಾಗುವುದು. ಹೀಗೆ ಕಾಯಿಸು ವುದರಿಂದ Cಇತರರು ಕಾದುಬಿದ್ದಿದ್ದರೆ ಇರಲಿ; ನಾವು ಅವರಿಗೋಸ್ಕರ ತೊಂದರೆಹಚ್ಚಿ ಕೊಳ್ಳಲೇಕೆ? ಎಂದು ಹೇಳಿದಂತಾಗುವುದು. ಇದು ಸ್ವಾರ್ಥಪರತೆಯನ್ನೂ ಗರ್ವವನ್ನೂ ತೋರಿ ಪಿತ್ತದೆ ಮಾಡಬೇಕಾದುದನ್ನು ಕ್ಸ್ ಪ್ರಕಾಲದಲ್ಲಿಮಾ. ಡುವುದರಿಂದ ನಮಗೆ ಏನು ತೊಂದರೆಯಾದರೂ ಚಿಂತೆಯಲ್ಲ. ಪರರ ಸೌಖ್ಯ ಆನುಕೂಲ್ಯ ಇವುಗಳನ್ನು ನೋಡುವುದು ನಮ್ಮ ಮೊದಲನೆಯ ಕೆಲಸ. ಹೀಗೆ ನಿಬಂಧನೆಯ ಪ್ರಕಾರ ಹೊತ್ತು ಹೊತ್ತಿಗೆ ಎಲ್ಲರೂ ಕೆಲಸಗಳನ್ನು . ಮಾಡುತ್ತಾ ಬಂದರೆ, ಕಾರ್ಯಸಾಧನೆಯೂ ಪರಸ್ಪರಮರ್ಯಾದೆಯೂ, ಆನುಕೂಲ್ಯವೂ ಉಂಟಾಗುವುವು. 45. ಪುಸ್ತಕಗಳು. ಈ ಕಾಲದಲ್ಲಿ ಜನರು ಅನುಭವಿಸುತ್ತಿರುವ ಸೌಕಯ್ಯ ಗಳಲ್ಲಿ ಓದುವುದಕ್ಕಿರುವ ಪುಸ್ತಕಸೌಕರ್ಯವು ಬಹಳ ಅದ್ಭುತವಾದುದು. ಪುಸ್ತಕಗಳಿಂದಜನರಿಗಾಗಿರುವ ಉಪಕಾರವನ್ನು ಎಷ್ಟು ವರ್ಣಿಸಿದರೂ ತೀರದು. ಪುಸ್ತಕಗಳು ದೊಡ್ಡ ಉಪಾಧ್ಯಾಯರು.ಪಾಠಶಾಲೆಗಳಲ್ಲಿರುವಉಪಾಧ್ಯಾಯರು ಕ್ಸ್ಪಕಾಲದಲ್ಲಿ ಮಾತ್ರ ಪಾಠಹೇಳುವರು. ಪುಸ್ತಕಗಳೆಂಬ ಉಪಾಧ್ಯಾಯರು