ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೪೧೮ ಶ್ರೀಮದ್ಭಾಗವತವು [ಅಧ್ಯಾ, ೨ ಪ್ರಕೃತಿಪರಿಣಾಮರೂಪವಾದ ದೇಹವನ್ನು ಆತ್ಮವೆಂದು ಭ್ರಮಿಸುವುದ ರಿಂದಲೇ, ಮನುಷ್ಯನ ಬುದ್ಧಿಗೆ ನಾನಾವಿಧವಾದ ಭಯವು ತಲೆದೋರು ವುದು. ಅಂತವನು ಆ ಭಗವಂತನ ಪಾದಾರವಿಂದಗಳನ್ನು ದೃಢವಾಗಿ ಉಪಾಸಿಸುತ್ತಿದ್ದರೆ, ಬೇರೆಯಾವ ಭಯಕ್ಕೂ ಕಾರಣವಿಲ್ಲ ! ಕೊನೆಗೆ ಆ ಉಪಾಸನೆಯೇ ಮೋಕ್ಷಸಾಧಕವಾಗುವುದು. ಅತ್ಮ ಪರಮಾತ್ಮ ಸ್ವರೂಪ ವನ್ನು ತಿಳಿಯಲಾರದ ಆಜ್ಞರಿಗಾಗಿಯೇ, ಭಗವಂತನು ಪಾಂಚರಾತ್ರಾದಿ ಗಳ ಮೂಲಕವಾಗಿ, ತನ್ನ ಕಥಾಶ್ರವಣ, ಕೀರ್ತನ, ಸ್ಮರಣಗಳೇ ಮೊದ ಲಾದ ಕೆಲವು ಉಪಾಯಗಳನ್ನು ತಾನೇ ತೋರಿಸಿರುವನು. ಇವುಗಳೇ ಭಾಗವತಧರಗಳೆನಿಸುವುವು. ಮನುಷ್ಯನು ಈ ಉಪಾಯಗಳನ್ನು ಚೆ ನ್ನಾಗಿ ಅನುಸರಿಸುತಿದ್ದ ಪಕ್ಷದಲ್ಲಿ, ಅವನಿಗೆ ಯಾವಾಗಲೂ ಯಾವ ಭಯವೂ ಇರದು. ಬೇರೆ ಉಪಾಯಾಂತರಗಳಲ್ಲಿ ಪ್ರಮಾದವು ಸಂಭ ವಿಸಬಹುದು. ಅವುಗಳಿಗೆ ನಾನಾತರದ ವಿಸ್ಸು ಗಳೂ ಪ್ರಾಪ್ತವಾ ಗುವುದುಂಟು. ಈ ಭಾಗವತಧರವೆಂಬ ಸನ್ಮಾರ್ಗದಲ್ಲಿ, ಕಣ್ಣು ಮುಚ್ಚಿ ಕೊಂಡು ಓಡಿದರೂ ಕಾಲೆಡವಿ ಬಿಳಲಾರನು. ಬೇರೆ ಉಪಾಯಗಳಲ್ಲಿ ಸೈ ಲ್ಪವಾಗಿ ತಪ್ಪಿ ನಡೆದರೂ ಪ್ರಮಾದವುಂಟು. ಮನುಷ್ಯನು ತನ್ನ ಪ್ರಾಕೃತ ಸ್ವಭಾವಕ್ಕೆ ಕಟ್ಟುಬಿದ್ದು, ಮನೋವಾಕ್ಕಾಯಗಳೆಂಬ ತ್ರಿಕರಣಗಳಿಂದಾ ಗಲಿ, ಬೇರೆ ಇಂದ್ರಿಯಗಳಿಂದಾಗಲಿ, ಬುದ್ಧಿಯಿಂದಾಗಲಿ, ಶಾಸ್ತ್ರ ನಿಷಿದ್ಧ ವಲ್ಲದ ಯಾವಯಾವ ಲೌಕಿಕವೈದಿಕಕರಗಳನ್ನು ನಡೆಸುವನೋ, ಅವೆಲ್ಲವನ್ನೂ ಪರಾತ್ಪರನಾದ ಶ್ರೀಮನ್ನಾರಾಯಣನಿಗೇ ಅರ್ಪಿತವೆಂಬ ಬುದ್ದಿಯಿಂದ ನಡೆಸಬೇಕು. ಕೆಲವು ಮಂದಬುದ್ದಿಯುಳ್ಳವರು, ಈ ಜಗತ್ತಿ ನಲ್ಲಿರುವ ವಸ್ತುಗಳನ್ನು ಬ್ರಹ್ಮಾತ್ಮಕವಲ್ಲವೆಂದೂ,ಅವು ಸ್ವತಂತ್ರಗಳೆಂದೂ ಭ್ರಮಿಸುವರು. ಈ ತಪ್ಪುತಿಳುವಳಿಕೆಯುಳ್ಳವನೇ ಭಗವಂತನಲ್ಲಿ ವಿಮುಖ ನೆನಿಸುವನು. ಸ್ವತಂತ್ರಾಭಿಮಾನವೇ ಮನುಷ್ಯನಿಗೆ ಭಯಕಾರಣವು. ಈ ಆಜ್ಞಾನದಿಂದ ಮನುಷ್ಯನ ಬುದ್ಧಿಯು ತಲೆಕೆಳಗಾಗಿ, ದೇಹವೇ ಆ ಇವೆಂಬ ಭ್ರಮವೂ ಹುಟ್ಟುವುದು. ಇವೆಲ್ಲವೂ ಭಗವಂತನ ಮಾಯೆಯಾದ ಪ್ರಕೃತಿಯಿಂದಲೇ ಜನಿಸುವುವು. ಆದುದರಿಂದ ಮನುಷ್ಯನು ಆ ಮಾಯೆ