ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೨೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

94oV ಜ ಶ್ರೀಮದ್ಭಾಗವತವು [ಅಧ್ಯಾ, ೨೩ ಯೋಗಿಸುವುದರಿಂದ, ಆ ಕರ ಫಲವನ್ನು ಅನುಭವಿಸುವುದಕ್ಕಾಗಿ ತಿರುಗಿ ಮತ್ತೊಮ್ಮೆ ಜನ್ಮವನ್ನೆ ತಬಹುದು.ಈಗಲೋ ನಾಳೆಯೋ ಮೃತ್ಯುವಿನ ಬಾ ಯಿಗೆ ತುತ್ತಾಗಬೇಕಾದ ಮನುಷ್ಯನಿಗೆ, ಈ ಸ್ವಲ್ಪ ಕಾಲದ ಕಾಮಾದಿಗಳಿಂದ ಅಗಬೇಕಾದುದೇನು ? ಆದುದರಿಂದ ಧನವೆಂಬುದನ್ನು ದೂರದಲ್ಲಿ ತ್ಯಜಿಸು ವುದೇ ಮನುಷ್ಯನಿಗೆ ಸರೂವಿಧದಿಂದಲೂ ಶ್ರೇಯಸ್ಕರವು, ಮುಖ್ಯವಾಗಿ ಭಗವಂತನು ಈಗ ನನ್ನಲ್ಲಿ ಪ್ರಸನ್ನ ನಾದುದರಿಂದಲೇ,ನನಗೆ ಈ ಸ್ಥಿತಿಯುಂ ಟಾಗಿರಬೇಕು. ಅದರಿಂದಲ್ಲವೇ ನನಗೆ ಸಂಸಾರಸಾಗರವನ್ನು ದಾಟಿಸತಕ್ಕ ನಾ ವೆಯಂತೆ ಈ ನಿರೋದವು ಹುಟ್ಟಿತು. ನಾನು ಹಿಂದಿನಂತೆ ಐಶ್ವದ್ಯಮದ ಹಿಂದಿದ್ದರೆ,ನನಗೆ ಈಬುದ್ದಿಯು ಹುಟ್ಟುತ್ತಿತ್ತೇನು?ಇನ್ನು ನನಗೆ ಉಳಿದಿರುವ ಅಲ್ಪ ಸ್ವಲ್ಪ ಆಯುಶ್ವೇಷದಲ್ಲಿಯಾದರೂ ನಾನು ನನ್ನ ಶರೀರವನ್ನು ತಪ ಸ್ಸಿನಿಂದ ದಂಡಿಸಿ ಶೋಷಿಸುವೆನು. ಇನ್ನಾದರೂ ನಾನು ನಿರತಿಶಯಪುರು ಷಾರವೆನಿಸಿಕೊಂಡ ಪರಮಾತ್ಮನಲ್ಲಿ ನಿಶ್ಚಲವಾದ ಭಕ್ತಿಯನ್ನಿಟ್ಟು, ಎಚ್ಚ ರಿಕಯಿಂದಿದ್ದರೆ, ದೇವತೆಗಳು ನನ್ನಲ್ಲಿ ಪ್ರಸನ್ನರಾಗಿ ನನ್ನನ್ನು ದರಿಸಬಹುದು. « ಈ ಅಂತ್ಯಕಾಲದಲ್ಲಿ ಆ ಪ್ರಯತ್ನವು ಸಾಧ್ಯವೆ?” ಎಂದು ಶಂಕಿಸಬೇಕಾಗಿ ಲ್ಲ. ಖಟ್ವಾಂಗನೆಂಬವನು ಒಂದು ಮುಹೂರ್ತಕಾಲಮಾತ್ರದಲ್ಲಿ ಬ್ರಹ್ಮ ಲೋಕವನ್ನೇ ಸಾಧಿಸಲಿಲ್ಲವೆ?” ಎಂದು ನಿಶ್ಚಯಿಸಿದನು. ಉದ್ದವಾ ! ಆ ಅವಂತಿದೇಶದ ಬ್ರಾಹ್ಮಣನು ಹೀಗೆಂದು ಮನಸ್ಸಿ ನಲ್ಲಿ ನಿರ್ಧರಿಸಿಕೊಂಡು, ತನ್ನ ಹೃದಯದಲ್ಲಿ ಬಹುಕಾಲದಿಂದ ದುರ್ಭೇದ್ಯಗೆ ಳಾಗಿದ್ದ ರಾಗದ್ವೇಷಾದಿಗಳೆಂಬ ಹೃದಯಗ್ರಂಥಿಗಳನ್ನು ನೀಗಿ, ನಿಷ್ಕಲ್ಮಷ ನಾಗಿ, ಪ್ರಾಣೇಂದ್ರಿಯಗಳನ್ನು ನಿಗ್ರಹಿಸಿ, ಭಿಕ್ಷಾನ್ಯವಾಗಿ ಅಲ್ಲಲ್ಲಿ ನಗರಗ ಇನ್ನೂ , ಗ್ರಾಮಗಳನ್ನೂ ಪ್ರವೇಶಿಸುತ್ತ, ನಿಂತಲ್ಲಿ ನಿಲ್ಲದೆ, ಯಾವುದರಲ್ಲಿ ಯೂ ಆಸಕ್ತಿಯನ್ನಿಡದೆ, ತಾನು ಇಂತವನೆಂದು ಯಾರಿಗೂ ತಿಳಿಯದಂತೆ ಭೂಮಿಯನ್ನು ಸಂಚರಿಸುತ್ತಿದ್ದನು. ಹಿಂದೆ ಧನಮದದಿಂದ ಗರಿಷ್ಟನಾಗಿ ಈ ಆ ಬ್ರಾಹ್ಮಣನೇ ಈಗ ಮುದುಕನಾಗಿ, ಅವಧೂತವೇಷದಿಂದ ಭಿಕ್ಷ ಗಾಗಿ ಸುತ್ತುತ್ತಿರುವುದನ್ನು ನೋಡಿ, ಕೆಲವು ದುಷ್ಟರು, ಅವನನ್ನು ಗುರು ಶುಹಿಡಿದು, ನಾನಾವಿಧಕುಚೇಷ್ಟೆಗಳಿಂದ ಪೀಡಿಸತೊಡಗಿದರು. ಕೆಲವರು