ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೨೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೬೬೪ ಶ್ರೀಮದ್ಭಾಗವತವು [ಅಧ್ಯಾ. 40, ಸ್ತ್ರೀ ಬಾಲ ವೃದ್ಧರೆಲ್ಲರೂ, ಇಲ್ಲಿಂದ ಹೊರಟು, ಶಂಶೋದ್ಧಾರವೆಂಬ ಸ್ಥ ಳಕ್ಕೆ ಹೋಗಿ ಸೇರಲಿ ! ನಾವೂ ಪ್ರಭಾಸತೀರಕ್ಕೆ ಹೋಗುವೆವು. ಅಲ್ಲಿ ಸರಸ್ವತೀನದಿಯು ಪಶ್ಚಿಮಾಭಿಮುಖವಾಗಿ ಪ್ರವಹಿಸಿ, ಅಲ್ಲಿಂದ ಮುಂದೆ ಸಮುದ್ರವನ್ನು ಸೇರುವ ಸಂಗಮಸ್ಥಳವಿರುವುದು. ಅಲ್ಲಿ ನಾವು ಸ್ನಾನ ಮಾಡಿ ಶುದ್ಧರಾಗಿ, ಉಪವಾಸವಿದ್ದು, ನಮ್ಮ ನಮ್ಮ ಇಷ್ಟದೇವತೆಗಳನ್ನು ಅಭಿಷೇಕದಿಂದಲೂ, ಗಂಧಪುಷ್ಟಾಕ್ಷತೆಗಳೇ ಮೊದಲಾದ ಪೂಜೋಪಕರ ಣಗಳಿಂದಲೂ ಆರಾಧಿಸುವೆವು. ಮತ್ತು ಆಕಾಲದಲ್ಲಿ ಬ್ರಾಹ್ಮಣೋತ್ತಮ ರಿಗೆ, ನೋವುಗಳನ್ನೂ , ಭೂಮಿಯನ್ನೂ, ವಸ್ತ್ರಗಳನ್ನೂ, ಭೂರದಕ್ಷಿಣೆಗೆ ಳನ್ನೂ, ಗಜಾಶ್ವರಥಗಳನ್ನೂ , ಗೃಹಗಳನ್ನೂ ದಾನಮಾಡಿ, ಅವರನ್ನು ಯಥೋಚಿತವಾಗಿ ಸತ್ಕರಿಸಿ, ಅವರಿಂದ ಶಾಂತಿಕರಗಳನ್ನೂ ನಡೆಸುವೆವು. ಇದರಿಂದ ನಮಗೆ ಅನಿಷ್ಟ ನಿವಾರಣವಾಗಿ, ಶ್ರೇಯಸ್ಸುಂಟಾಗುವುದು ಗೋವುಗಳನ್ನೂ, ಬ್ರಾಹ್ಮಣರನ್ನೂ , ದೇವತೆಗಳನ್ನೂ ಆರಾಧಿಸುವುದು, ಯಾವಾಗಲೂ ಅಭ್ಯುದಯಕರವು.” ಎಂದನು. - ಯದುವೃದ್ಯರೆಲ್ಲರೂ ಕೃಷ್ಣನ ಮಾತಿಗೆ ಅನುಮೋದಿಸಿ, ಆಗಲೇ ಪ್ರಯಾಣಸನ್ನದ್ಧರಾದರು. ಮೊದಲು ನಾವೆಗಳಿಂದ ಸಮುದ್ರವನ್ನು ದಾಟಿ, ಅಲ್ಲಿಂದ ಮುಂದೆ ರಥವನ್ನೇರಿ, ಪ್ರಭಾಸತೀರವನ್ನು ಸೇರಿದರು. ಅಲ್ಲಿ ಆ ಯಾದವರೆಲ್ಲರೂ ಶ್ರೀಕೃಷ್ಟಾಜ್ಞೆಯಂತೆ ತಮ್ಮ ಶ್ರೇಯಸ್ಸಿಗಾಗಿ ಪೂಜಾರಿಕರಗಳನ್ನು ನಡೆಸಿದರು. ಏನು ಮಾಡಿದರೇನು? ಆ ಕರಗಳೆಲ್ಲವೂ ಮುಗಿದಮೇಲೆ, ಅವರಿಗೆ ವಿನಾಶಕಾಲಕ್ಕೆ ತಕ್ಕಂತೆ ದೈವಪ್ರೇರಣೆಯಿಂದ ವಿಪರೀತಬುದ್ದಿಯೇ ಹುಟ್ಟಿತು. ಎಲ್ಲರೂ ಸಂತೋಷದಿಂದ ಗುಂಪುಗೂಡಿ, ಮಹಾಮದಕರವಾದ ಮೈರೇಯವೆಂಬ ಮದ್ಯವನ್ನು ಪಾನಮಾಡಿದರು. ಆ ಮದ್ಯಪಾನದಿಂದ ಎಲ್ಲರಿಗೂ ಬುದ್ಧಿಭ್ರಂಶವುಂಟಾಯಿತು. ಆ ಯಾ ದವರೆಲ್ಲರೂ ಸಹಜವಾಗಿಯೇ ವೀರೊತ್ಸಾಹವುಳ್ಳವರು. ಇದರಮೇಲೆ ಮದ್ಯಪಾನದಿಂದ ಅವರಿಗೆ ಮೇಲೆಮೇಲೆ ಉತ್ಸಾಹವೂ, ಹಟವೂ ಹೆಚ್ಚು ಇಬಂದಿತು. ಶ್ರೀಕೃಷ್ಣನ ಮಾಯೆಯಿಂದ ಮೊದಲೇ ಮೋಹಿತರಾಗಿ ಈ ಆಯಾದವರೆಲ್ಲರೂ, ಮದ್ಯಮದದಿಂದ ಮತ್ತೇರಿ ಮೈತಿಳಿಯದಿದ್ದಾಗ,