ಪುಟ:ಅನುಭವಸಾರವು.djvu/೬೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

* ೧೪ ಸನುತಿಳಿ ನೀನಹಂ ಜಾನಾಮಿಯೆಂಬುದಳಿ | ಮಾನಕ್ಕೆ ವೇದ್ಯವೇ ದಕತ ವನೆಯನ್ನು ಮಾನಿಪುದು ತಪ್ಪಜಲದಂತೆ ! ೧೫ ಜಡವಜಡನಿಂತು ತನ್ನೊಡಲಾಗಿ ಜಾಗ್ರಾದಿ | ಬೊಡನೆಯಹಮೆಂದು ತೋರಿಸುದ್ದಿಯೊಳಹಮಿ | ದಡಗಿದೃಶ್ಯ ವಹುದೈಸೆ ! ೧೬ ಇಂತುದಿಸಿಯಡಗುತಿಹುದಂತಾಗಿ ಯಾನೆ೦ | ದೆಂತೊರೆಯಬಪ್ಪು ದಹಮನೀಪರಿಯೊಳರಿ | ಸಂತನೆಯಿಾಕ್ರಮವನಿಲ್ಲಿ H.. ೧೭ ಉತ್ತಮರು ಮೆಚ್ ಲೈವತ್ತೆಂಟು ಪದದೊಡನೆ | ಬಿತ್ತರಂಬಡೆದ ಸ ಇವೈ ದಿಂತುರಚಿ ಸತ್ತುನಾಲ್ಕನೆಯದಿದುಸಂಧಿ ! ಅಂತು ಸಂಧಿ ೪ •ಂ ಸೂತ್ರ ೧೫ ಕ್ಕಂ ತ್ರಿಪದಿ ೦೯೦ ಕ್ಕಂ ಮಂಗಳಮಸ್ತು ೫ ನೇ ಸಂಧಿ ೧ ನೇ ಸೂತ್ರ, ಪ್ರಶ್ನಿರೂಪಣ. ಅಹನಿಗಿಲ್ಲದೆ ನಿದ್ರಯೊಳಗರುಹಿ ಕೊಂಬುದೆಂ ತಹುದರಿವು ಸಂದಿಲ್ಲದಿರ್ಪುದಾಗಿನಿ ೧೪ ಮಗನೇ, ಉಷ್ಣ ಜಲಂ ಎಂಬಲ್ಲಿ ಜಲಕ್ಕೆ ಉಷ್ಣ ಗುಣವು ಸ್ವಭಾವವಲ್ಲದುದರಿಂದ ಆ ಉಷ್ಣವ ಅಗ್ನಿಯಿಂದ ಬಂದಿತೆಂದು ತಿಳಿದು ಬರುವಂತೆ ನಾನು ತಿಳಿಯುತ್ತೇನೆಂಬಲ್ಲಿ ಜಡವಾದಅಹಂಕಾರಕ್ಕೆ ಅರಿವುಸ್ವಭಾವವಲ್ಲದುದರಿಂದ ಆ ಅರಿವುಚಿತ್ತಿನ ಸಂಬಂಧದಿಂ ದ ಬಂದಿತೆಂದು ತಿಳಿದುಬರುತ್ತದೆ. ೧೫ ಅಹಂಕಾರವು ಚೇತನ, ಅಚೇತನ ಇವೆರಡು ತನ್ನ ದೇಹವಾಗಿ ಚಾಗರ, ಸ್ವಪ್ನಗ ಇಲ್ಲಿ ನಾನು ಎಂಬುವದರ ಮೂಲಕ ಕಾಣಿಸಿ, ಸುಷುಷ್ಯವಸ್ಥೆಯಲ್ಲಿ ಅಡಗುವದ ರಿಂದ ದೃಶ್ಯ ಪದಾರ್ಥವಾಗಿರುವದು. ೧೬ ಹೀಗೆ ಅಹಂಕಾರವು ಹುಟ್ಟಿ ಅಡಗುವದರಿಂದ ಅದನ್ನು ಆತ್ಮನೆಂದು ಹೇಗೆ ಹೇಳ ಬಹುದು ? ಎಲೈ ಸಾಧುವೇ, ಈ ರೀತಿಯಾಗಿ ಇಲ್ಲಿ ತಿಳಿದುಕೋ. ೧೭ ವಿದ್ವಾಂಸರು ಮೆಚ್ಚುವಂತೆ ಐವತ್ತೆಂಟು ಪದ್ಯಗಳೊಡನೆ ನಾಲ್ಕು ಸೂತ್ರಗಳಿಂದ ಈ ನಾಲ್ಕನೆಯ ಸಂಧಿಯು ರಚಿಸಲ್ಪಟ್ಟಿತು. ೫ ನೇ ಸಂಧಿ. ೧ ನೇ ಸೂತ್ರ, ಪ್ರಶ್ನನಿರೂಪಣೆ. ಅಹಂಕಾರವು ನಿದ್ರೆಯಲ್ಲಿ ಇಲ್ಲದಿರುವಾಗ ತಿಳಿದುಕೊಳ್ಳತಕ್ಕದೊ೦ದ ಇಲ್ಲದಿರುವದರಿಂದ ಹೇಗೆ ತಿಳಿಸಿಕೊಳ್ಳಲ್ಪಡುವದು ?