ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೧೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

86 ಮಹಾಭಾರತ [ಆದಿಪರ್ವ ದೇವನಂಗದ ಮಂಚ ಶ್ರೀವಧುಬಾಹು ತಲೆದಿಂಬು 1 | ದೀವಿಗೆಗಳವು ಶೇಪ್ರಫಣಮಣಿ ಸಾವಿರಂಗಳ ಕೃಪ ಕಾಂತಿಯ ದೇವನಂಗಕೆ ಕೌಸ್ತುಭಾವಳರುಚಿಯಲಂಕಾರ || ಅಲ್ಲಿ ಹರಿಯಿರೆ ಶೇಪ್ರಶಯನದಿ ವಲ್ಲಭೆಯ ತೊಡೆಗಳಲಿ ಪಾದವ ಫುಲ್ಲನಾಭನು ನೀಡಿ ನಿದ್ರಾಗನೆಯ ಮೇಳದಲಿ । ಜಯವಿಜಯರಿಗೆ ಸನಕಾದಿಗಳ ಶಾಸ. ಅಲ್ಲಿ ಯಿರುತಿರೆ ಬ್ರಹ್ಮಪುತ್ರರು ನಿಲ್ಲದಾಗಲು ಕ್ಷೀರಸಾಗರ ಕೆಲ್ಲ ಬರುತಿರೆ ಜಯವಿಜಯರು ಚಾಚಿ ಬಾಗಿಲನು | & ನಿಲುಕಿ ಹೋಂಗಂಬಿಯಲಿ ಭೂಸುರ ಬಳಗವನು ನೂಕಲಿಕೆ ಕೊಟ್ಟರು ನಳಿನಸಂಭವಸುತರು ಜಯವಿಜಯರಿಗೆ ಶಾಪವನು | ಎಲೆಲೆ ದ್ಯಾರ್ಬಾಹಿಕರೆ ತಮ್ಮನು ನಳಿನನಾಭನ ಕಾಣಲೀಸರೆ ಬಕೆನುತ ನೀವಿನ್ನು ದೈತ್ಯರ ಕುಲದಿ ಜನಿಸುವುದು | ೬ ಅವರು ಬೆದರಿಯೇ ಹರಿಗೆ ಬಿನ್ನಹ ಭವನವಳಯಕೆ ಹೋಗಿ ನುಡಿಯಲು ಭುವನರಕ್ಷಕನೆಂದನಕಟಾ ನೀವು ಮರುಳಾಗಿ | ಭವಗೆ ಸರಿ ಸನಕಾದಿಮುನಿಗಳು ನವಗೆ ಮತ್ತವರಧಿಕಪ್ರಿಯತಮ ರವರ ಕರಕರೆ ಯೆಂದು ಲಕ್ಷ್ಮಿಯ ಕೈಯ್ಯ ಕರೆಸಿದನು | 1 ತಲೆಗಿ೦ಖು, ಕ ಖ ಗ ಘ.