ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೧೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೪೨ ಶ್ರೀಮದ್ಭಾಗವತವು (ಆಥ್ಯಾ. ೧೭. ಸಿದ್ದರು. ಆಮೇಲೆ ತ್ರೇತಾಯುಗಾರಂಭಗಲ್ಲಿ, ನನ್ನ ಹೃದಯಸ್ಥಿತವಾ ಗಿದ್ದ ಪ್ರಣವದಿಂದ, ಋಗ್ಯಜುಸ್ಸಾಮಗಳೆಂಬ ಮೂರು ವಿಭಾಗವುಳ್ಳ ತ್ರ ಯಿಯು ಎಂದರೆ, ವೇದವಿದ್ಯೆಯು ಹೊರಬಿದ್ದಿತು. ಆ ತ್ರಯವಿದ್ಯೆಯಿಂದ, ಋಗ್ಯಜುಸ್ಸಾಮಮಂತ್ರಪೂರಕಗಳಾದ ಯಜ್ಞಗಳು ಏರ್ಪಟ್ಟುವು. ಉ ದೇವಾ ! ನಾನೇ ಆ ಯಜ್ಞಸ್ವರೂಪನೆಂದು ತಿಳಿ ! ಇದರಿಂದ, ಪ್ರೇತಾ ಯುಗವು ಆರಂಭಿಸಿದುದುಮೊದಲು, ಯಜ್ಞಾದಿಕರಗಳೂ, ಅವುಗಳಿಗೆ ವಿಧಾಯಕಗಳಾದ ವೇದಶಾಖೆಗಳೂ, ಬ್ರಾಹ್ಮಣಾದಿವರ್ಣಭೇದಗಳೂ, ಆ ಶ್ರಮಭೇದಗಳೂ ಏರ್ಪಟ್ಟುದಾಗಿ ತಿಳಿಯಬೇಕು. ಇನ್ನು ಆ ವರ್ಣಾಶ್ರಮ ವಿಭೇದಗಳನ್ನೂ ತಿಳಿಸುವೆನು ಕೇಳು. ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ ರೆಂಬ ನಾಲ್ಕು ವರ್ಣಗಳೂ ಕ್ರಮವಾಗಿ, ವಿರಾಟ್ಟುರುಷನೆನಿಸಿದ ಅನಿರುದ್ಧ ನಿಂದ ಹುಟ್ಟಿದ ಚತುರುಖನ, ಮುಖ, ತೋಳು, ತೊಡೆ, ಕಾಲುಗಳೆಂಬ ಅವಯವಗಳಿಂದ ಹುಟ್ಟಿದುವು. ಅವರವರ ಧರಗಳೇ ಆಯಾ ವರ್ಣಗಳನ್ನು ತಿಳಿಸತಕ್ಕ ಲಕ್ಷಣಗಳಾಗಿರುವುವು. ಹೀಗೆಯೇ ಆಶ್ರಮಗಳಲ್ಲಿಯೂ ಕೂಡ, ಚತುರುವಿನ ಜನನದಿಂದ ಗೃಹಸ್ಥಾಶ್ರಮವೂ, ಅವನ ಹೃದಯದಿಂದ ಬ್ರಹ್ಮಚಯ್ಯವೂ, ವಕ್ಷಸ್ಥಲದಿಂದ ವಾನಪ್ರಸ್ಥವೂ, ತಿರಸ್ಸಿನಿಂದ ಸನ್ಯಾಸಾ ಶ್ರಮವೂ ಏರ್ಪಟ್ಟಿತು. ಮೇಲೆ ಹೇಳಿದ ವರ್ಣಗಳ ಮತ್ತು ಆಶ್ರಮಗಳ ಸ್ವಭಾವಗಳು, ಅವು ಹುಟ್ಟಿದ ಸ್ಥಾನಗುಣಗಳಿಗೆ ತಕ್ಕಂತೆ ಉತ್ಕರ್ಷಪಕ ರ್ಷವನ್ನು ಹೊಂದಿರುವುವು. ಆಯಾ ವರ್ಣಾಶ್ರಮಗಳನ್ನನುಸರಿಸತಕ್ಕ ವರ ಸ್ವಭಾವವೂ ಅದಕ್ಕೆ ತಕ್ಕಂತೆಯೇ ಉತ್ಕರ್ಷಾಪಕರ್ಷವನ್ನು ಹೊಂದಿ ರುವುವು. ಎಂದರೆ, ಬ್ರಾಹ್ಮಣಾದಿವರ್ಣಗಳು ಕ್ರಮವಾಗಿ ಚತುರಖನ ಬಾಯಿ, ತೋಳು, ತೊಡೆ, ಕಾಲುಗಳೆಂಬ ಕೆಳಕೆಳಗಿನ ಅವಯವಗಳಲ್ಲಿ ಹುಟ್ಟಿರುವುದರಿಂದ ಒಂದಕ್ಕೊಂದು ಕೀಳಾಗಿರುವುದು. ಗೃಹಸ್ಯ, ಬ್ರ ಹ್ಮಚಯ್ಯ, ವಾನಪ್ರಸ್ಥ,ಸನ್ಯಾಸಗಳೆಂಬ ನಾಲ್ಕಾಶ್ರಮಗಳೂ ಕ್ರಮವಾಗಿ, ಜಫುನ, ಹೃದಯ, ವಕ್ಷಸ್ಸು, ತಿರಸ್ಸು ಎಂಬೀ ಮೇಲುಮೇಲಿನ ಆವಯ ವಗಳಲ್ಲಿ ಹುಟ್ಟಿದುದರಿಂದ ಒಂದಕ್ಕೊಂದು ಉತ್ಕೃಷ್ಟವೆನಿಸಿರುವುದು.