ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೨೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೮ ಶ್ರೀಮದ್ಭಾಗವತವು ಅಧ್ಯಾ. ೨೭, ಹೋಮವನ್ನು ಮಾಡಿ, ಅದರ ಫಲದಿಂದ ತಾನೂ ಆ ಊರತಿಯ ಲೋಕವ ನ್ನು ಸೇರಿ,ಬಹುಕಾಲದವರೆಗೆ ಅಲ್ಲಿ ಅವಳೊಡನೆ ರಮಿಸುತ್ತಿದ್ದನು. ಆಮೇಲೆ ಅವನಿಗೆ ಕ್ರಮಕ್ರಮವಾಗಿ ಆ ಮೋಹವು ತಗ್ಗುತ್ತ ಬಂದು, ಕೊನೆಗೆ ತನ್ನ ಹಿಂದಿನ ಸ್ಥಿತಿಯನ್ನು ಕುರಿತು ಪಶ್ಚಾತ್ತಾಪವೂ, ವಿಷಯಸುಖ ಗಳು ಅನರಹೇತುವೆಂಬ ವಿವೇಕಜ್ಞಾನವೂ, ಅದರಿಂದ ಮನಸ್ಸಿನಲ್ಲಿ ವೈ ರಾಗ್ಯವೂ ಜನಿಸಿತು. ಆಗ ಅವನು ಈ ಗಾಥೆಯನ್ನು ಹೇಳುವನು. (ಆಹಾ! ಕಾಮಾತುರದಿಂದ ಬುದ್ಧಿಗೆಟ್ಟ ನನಗೆ, ಇದೆಂತಹ ಮೋಹವು ಆವರಿಸಿತು ! ಆ ಊಧ್ವತಿಯ ತೋಳುಗಳಿಂದ ಆಲಿಂಗಿಸಲ್ಪಟ್ಟು, ಸುಖಾನುಭವದಲ್ಲಿದ್ದ ನಾನು, ಇದುವರೆಗೆ ನನ್ನ ಆಯುರ್ಭಾಗಗಳು ವ್ಯರವಾಗಿ ಕಳೆದು ಹೋ ದುದನ್ನೂ ತಿಳಿಯದೆ ಹೋದೆನು. ಸ್ತ್ರೀ ಮೋಹದಿಂದ ನನ್ನ ವಿವೇಕ ವೆಲ್ಲವೂ ಕೆಟ್ಟಿತು. ಅವಳೊಡನೆ ಸುಖಿಸುತ್ತಿದ್ದ ನನಗೆ, ಸೂ‌ನ ಉದ ಯಾಸ್ತಮಯಗಳೂ ತಿಳಿಯದಂತಿದ್ದುವು. ಹೀಗೆಯೇ ನನಗೆ ಎ ವರ್ಷಗಳ ಹಗಲುರಾತ್ರಿಗಳು ಕಳೆದು ಹೋದುವಲ್ಲವೇ? ಅಯ್ಯೋ! ನನ್ನ ಸ್ಥಿತಿಯೇನು? ನಾನು ಮಾಡಿದ ಕಾರವೇನು? ಚಕ್ರವರ್ತಿಯೆಂದೂ, ರಾಜರಲ್ಲಿ ಶಿಖಾಮಣಿಯೆಂದೂ,ಜನರೆಲ್ಲರೂ ನನ್ನನ್ನು ಕೊಂಡಾಡುತಿದ್ದರು. ಈ ಸ್ಥಿತಿಯಲ್ಲಿರುವಾಗಲೂ ನಾನು ಮೋಹಾಕುಲನಾಗಿ ಒಬ್ಬ ಹೆಂಗಸಿಗೆ ಆಟದ ಬೊಂಬೆಯಂತಾದೆನವ್ವಾ ? ಆಹಾ ! ಇದೇನು ನನ್ನ ಮೋಹವು ? ಸಾರಭ ಇಮಪದವಿಯಲ್ಲಿರುವ ನಾನು, ನನ್ನ ರಾಜೋಪಭೋಗಗಳನ್ನೂ ತೃಣಕ್ಕೆ ಸಮಾನವಾಗಿ ಭಾವಿಸಿ, ಅವೆಲ್ಲವನ್ನೂ ತೊರೆದು, ಮೈಮೇಲೆ ಬ ಟೈಯೂ ಇಲ್ಲದೆ, ಆ ಸ್ತ್ರೀಯನ್ನು ಹಿಂಬಾಲಿಸಿ, ಹುಚ್ಚನಂತೆ ವಿಲಪಿಸುತ್ತ ಹೋದೆನಲ್ಲಾ! ನನ್ನಂತೆ ಹೀಗೆ, ತನ್ನನ್ನು ನಿರಾಕರಿಸಿ ಹೋಗುವ ಸಿಯನ್ನು ಬಿಡಲಾರದೆ ಹಿಂಬಾಲಿಸಿ ಹೋಗುವವನನ್ನು ಕತ್ತೆಗೆ ರಂತೆಯೇ ಭಾವಿಸಬೇಕು. ಹೆಣ್ಣು ಕತ್ತೆಗಳು ಹಿಂಗಾಲುಗಳಿಂದ ಒದೆಯು ತಿದ್ದರೂ ಅವುಗಳನ್ನು ಬಿಡದೆ ಹಿಂಬಾಲಿಸುವುದು ಕತ್ತೆಗಳ ಸ್ವಭಾವವಲ್ಲವೆ? ಇಂತಹ ಅಲ್ಪಬುದ್ಧಿಯುಳ್ಳವರಿಗೆ, ಗೌರವವಾಗಲಿ, ತೇಜಸ್ಸಾಗಲಿ, ಪ್ರಭು ತ್ವವಾಗಲಿ ನಿಲ್ಲುವುದೆಂದರೇನು ? ಯಾವನ ಮನಸ್ಸು ಹೀಗೆ ಸ್ತ್ರೀವಶ್ಯವಾ