ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೨೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರ್ಗ. ೩೦.] ಅಯೋಧ್ಯಾಕಾಂಡವು. Yಈ ಪ್ರಾಯಪಡುವನು? ಪುರುಷವೇಷವನ್ನು ಹಾಕಿಕೊಂಡು ಬಂದ ಯಾವ ಒಬ್ಬ ಹೆಂಗಸು, ತನ್ನ ಮಗಳಾದ ನನ್ನನ್ನು ಕೈಹಿಡಿದು ಮದಿವೆಮಾಡಿಕೊಂಡು ಹೋದಳೆಂದೇ ತಿಳಿದುಕೊಳ್ಳುವನೇಹೊರತು, ನೀನೊಬ್ಬ ಗಂಡಸೆಂದೇ ಎಣಿ ಸಲಾರನಲ್ಲವೇ? ಹೀಗೆ ನಿನ್ನಂತಹ ಅಳಿಯನು ಸಿಕ್ಕಿದಮೇಲೆ ಆತನ ಮನಸ್ಸಿನಲ್ಲಿ ಏನಭಿಪ್ರಾಯವುಂಟಾಗಬಹುದು?ಅಯ್ಯೋ!*ಈ ಲೋಕವೆಲ್ಲವೂ ನಿನ್ನಲ್ಲಿಯಾ ವುದೋ ಒಂದು ದಿವ್ಯತೇಜಸ್ಸಿರುವುದೆಂದು ಭ್ರಮೆಗೊಂಡಿರುವುದು. ಹಾಗಿ ದ್ದರೆ ಸೂ‌ನ ತೇಜಸ್ಸಿನಂತೆ ಹೊರಕ್ಕೆ ಕಾಣಿಸದಿರುವುದೆ? ಎಷ್ಟೆಆಕಾರಗ ಇನ್ನು ಮಾಡಿಯಾದರೂ ಕೈಹಿಡಿದ ಹೆಂಡತಿಯನ್ನು ಚೆನ್ನಾಗಿ ಪೊಷಿಸಬೇ ಕೆಂದು ಮನುವಚನವಿಲ್ಲವೆ? ಹೀಗಿರುವಾಗ ನನ್ನನ್ನು ಕರೆದುಕೊಂಡುಹೋಗು ವುದೇ ಆಕಾರವೆಂದೆಣಿಸಿ ನೀನು ವ್ಯಸನಪಡುತ್ತಿರುವೆಯಾ ? ವಿರಾಗ್ರೇಸರನೆ ನಿಸಿಕೊಂಡು, ಕಾಲಾಗ್ನಿಗೆ ಸಮವಾದ ಕೋಪವುಳ್ಳ ನಿನಗೆ, ಅಂಜಿಕೆಯೆಂಬು ದು ಹೇಗುಂಟಾಯಿತು ? ಮತ್ತೊಬ್ಬರನ್ನು ಮನಸ್ಸಿನಲ್ಲಿಯೂ ಎಣಿಸದೆ, ನಿ ನ್ನೊಬ್ಬನನ್ನೇ ನಂಬಿ, ಅನಾಥೆಯಾಗಿರುವ ನನ್ನನ್ನು ಏಕಾಕಿನಿಯಾಗಿರುವಂತೆ ಇಲ್ಲಿಬಿಟ್ಟು ಹೋಗಬೇಕೆಂದೆಣಿಸಿರುವುದಕ್ಕೆ ಕಾರಣವೇನೋ ತಿಳಿಯಲಿಲ್ಲ !

  • ಇದಕ್ಕೆ ಅವೃತಂ ಬತ ಲೋಕೊಯಮಜ್ಞಾನಾದ್ಯ ವಕ್ಷತಿ| ತೇಜೋ ನಾಸ್ತಿಪರಂ ರಾಮೇ ತಪಶೀವ ದಿವಾಕರೇ ॥”ಎಂಬುದು ಮೂಲವು. ಇದರ ಏಶೇಷಾರವೇ ನೆಂದರೆ:-(ಅಯಂ ಲೋಕ:) ಈ ಲೋಕವ್ರ (ಯತ್)ನಿನ್ನಲ್ಲಿ ದಿವ್ಯ ತೇಜಸ್ಸಿರುವುದೆಂಬ ಯಾವ ಮಾತನ್ನು, (ನಕ್ಷತಿ) ಹೇಳುವುದೋ, ಅದು, (ಅಜ್ಞಾನಾತ್) ಅವರ ಅಜ್ಞಾ ನದಿಂದ, ಅನೃತಂಬತ (ಅಬದ್ಧವಲ್ಲವೆ) ತಪತಿ ದಿವಾಕರೇ ಇವ ಜ್ವಲಿಸುತ್ತಿರುವ ಸೂರ ನಲ್ಲಿರುವಂತೆ, “ರಾಮನಲ್ಲಿ ಅತಿಶಯವಾದ ತೇಜಸ್ಸಿವು” ಎಂದು ಸೀತೆಯು ರಾಮನಲ್ಲಿ ದಿವತೇಜಸಿರುವುದೆಂದು ಜನಗಳಾಡುವ ಮಾತನ್ನು ತಾನೇ ನಿರಸನಮಾಡಿ ಅದಿಲ್ಲವೆಂದು ನಿರ್ಧರಿಸಿದುದಾಗಿ ಗ್ರಹಿಸಬೇಕು. ಅಥವಾ, (ಅಯಂ ಲೋಕಃ) ಈ ಲೋಕವು, (ತಪು ದಿವಾಕರ ಇವ ರಾಮೇ ಪರಂ ತೇಜೋ ನಾಸ್ತಿ) ಜ್ವಲಿಸುತ್ತಿರುವ ಸೂರನಲ್ಲಿರುವಂತ ದಿವ್ಯತೇಜಸ್ಸು ರಾಮನಲ್ಲಿದ್ದವು, ಎಂದು(

ಯತಿ) ಹೇಳುವುದು ಯಾವದುಂಟೋ ಅದು, (ಅನೃತ೦) ಅಬದ್ದವು, ಅವನಲ್ಲಿ ಇದ್ದೇ ಇರುತ್ತದೆಂದು ಭಾವವು. ಇದರಿಂದ ಸೀತೆಯು ಲೋಕವಾರ್ತೆಯನ್ನೂ ನಿರಾಕರಿಸಿ ರಾಮನಲ್ಲಿ ತೇಜಸ್ಸಿರುವುದೆಂದು ಖ್ಯಾತಿ ಸಿದಂತಾಯಿತು. ಹೀಗೆ ಎರಡುವಿಧವಾದ ಅರವೂ ಇಲ್ಲಿ ಸೂಚಿತವಾಗುವುದು,