ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರ್ಗ, ೪ ) ಕಿಷಿಂಧಾಕಾಂಡವು. ೧೩೬೩ ರಾಮನ ಮಹಾಮಹಿಮೆಯನ್ನೂ, ಆತನು ದಶರಥಪ್ರತ್ರನೆಂಬುದನ್ನೂ ತಿಳಿಸ ಲಾರಂಭಿಸಿಎಲೈ ಕವಿಶ್ರೇಷ್ಠನೆ' ದಶರಥನೆಂಬ ರಾಜನೊಬ್ಬನಿದ್ದನು ಆವ ನು ಮಹಾತೇಜಸ್ವಿಯೆನಿಸಿಕೊಂಡು,ಧರ್ಮಪರಾಯಣನಾಗಿ, ಯಾವಾಗಲೂ ಧದಿಂದ ಚತುರ್ವಣ್ರಗಳನ್ನೂ ಪಾಲಿಸುತಿದ್ದನು ಈ ಲೋಕದಲ್ಲಿ ಅವ ನನ್ನು ದ್ವೇಷಿಸುತಿದ್ದವರೊಬ್ಬರಾದರೂ ಇಲ್ಲ ಅವನೂ ಯಾರನ್ನೂ ದ್ವೇ ಷಿಸುತ್ತಿರಲಿಲ್ಲ ಸಮಸ್ತಭೂತಗಳಲ್ಲಿಯೂ ಬ್ರಹ್ಮದೇವನಂತೆ ಅವನು ಮೇ ಲೈಯನ್ನು ಹೊಂದಿದನು ಬಹುದಕ್ಷಿಣೆಗಳುಳ್ಳ ಅಗ್ನಿ ಪ್ರೊಮಾದಿ ಯಾಗಗಳನ್ನು ಅನೇಕವಾಗಿ ನಡೆಸಿದವನು ಆ ಮಹಾತ್ಮನ ಜೈಷ್‌ ಪುತ್ರನೇ ಈತನು ಇವನನ್ನು ಜನರೆಲ್ಲರೂ ರಾಮನೆಂದು ಕರೆಯುವರು ಈತನು ಸರ್ವ ಭೂತಶರಣ್ಯನೆಂಬ ಖ್ಯಾತಿಯನ್ನು ಹೊಂದಿರುವನು ತಂದೆಯಾಜ್ಞೆಯನ್ನು ಮೀರದೆ ನಡೆಯುವುದೇ ಇವನಿಗೊಂದು ಮಹಾವ್ರತವು ಇವನು ಮಹಾವೀ ರನು ಆ ದಶರಥನ ಪುತ್ರರಲ್ಲಿ ಈತನೇ ಬಹಳ ಗುಣವಂತನು ಇವನಲ್ಲಿ ಸಮ ಸ್ವರಾಜಲಕ್ಷಣಗಳೂ ತುಂಬಿರುವುವು ಈತನೇ ಆ ರಾಜನಿಗೆ ಹಿರಿಯಮಗನಾ ದುದರಿಂದ ರಾಜ್ಯಾರ್ಹನಾಗಿರುವನು ಆದರೆ ಯಾವುದೋ ಕಾರಣಾಂ ತರದಿಂದ ರಾಜ್ಯಭಂಶವನ್ನು ಹೊಂದಿ ವನವಾಸವನ್ನು ಮಾಡುವುದಕ್ಕೆ ನನ್ನೊಡನೆ ಇಲ್ಲಿಗೆ ಬಂದಿರುವನು ಮತ್ತು ಸಂಜೆಯಲ್ಲಿ ಸೂರ್ಯಪ್ರಭೆ ಯು ಮಹಾತೇಜಸ್ವಿಯಾದ ಸೂರನನ್ನೇ ಬಿಡದೆ ಹಿಂಬಾಲಿಸಿ ಹೋಗುವಂ ತೆ, ಈತನ ಪತ್ನಿ ಯಾದ ಸೀತೆಯು, ಇವನು ರಾಜ್ಯಭ್ರಷ್ಟನಾಗಿ ಬಂದಾಗ ಲೂ ಬಿಡದೆ, ಜಿತೇಂದ್ರಿಯನಾದ ಇವನನ್ನೇ ಹಿಂಬಾಲಿಸಿ ಬಂದುಬಿಟ್ಟಳು * ನಾನು ಇವನ ತಮ್ಮನು ನನಗೆ ಲಕ್ಷ್ಮಣನೆಂದು ಹೆಸರು ನನ್ನಣ್ಣನಾದ

  • ಇಲ್ಲಿ ಅಹಮಸ್ಯಾವರೋ ಭಾತಾ ಗುರ್ದಾಸ್ಯ ಮುಪಾಗತಃ | ಕೃತ ಜ್ಞಸ್ಯ ಬಹುಜ್ಞಸ್ಯ ಲಕ್ಷಣೋನಾಮ ನಾಮತ:” ಎಂದು ಮೂಲವು ಇಲ್ಲಿ ಪೂರಾ ರಕ್ಕೆ “ಅವನ ಅಭಿಪ್ರಾಯದಿಂದ ನಾನು ಅವನಿಗೆ ತಮ್ಮ ನೆನಿಸಿದ್ದರೂ, ನನ್ನ ಅಭಿಪ್ರಾ ಯದಿಂದ ನಾನು ಅವನಿಗೆ ದಾಸನು'ಎಂದು ಭಾವವು ಆದರೆ ಲಕ್ಷ್ಮಣನು ಹಿಂದೆ ರವಾನ” ಇತ್ಯಾದಿವಾಕ್ಯಗಳಿಂದ, ತನಗೆ ರಾಮನಲ್ಲಿ ದಾಸ್ಯವೇ ಸ್ವರೂಪಸಿದ್ಧವಾದು ದೆಂದು ಹೇಳಿರುವಾಗ, ಇಲ್ಲಿ “ ಗುಣೈರ್ದಾಜ್ಯಮುಪಾಗತ” ಆನನ ಗುಣಗಳನ್ನು