ಪುಟ:ವತ್ಸರಾಜನ ಕಥೆ.djvu/೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨ - ಕರ್ಣ ಟಕ ಕಾವ್ಯಕಲಾನಿಧಿ - ಕೇಳಿ, ಇಲ್ಲಿರುವ ಊಳಿಗದ ಪೆಣ್ಣುಗಳು ನೋಡಿದವರ ಕಣ್ಮನಗಳನ್ನು ಕೈ ಸೂರೆಯಂ ತೆಗೆದುಕೊಳ್ಳುವರು. ಈ ರಾಯನು ನಮ್ಮ ವತ್ಸ ರಾಜೇಂದ್ರನಿಗೆ ಮಾವನಾಗಿರು ವುದೇ ಯುಕ್ತವಾಗಿ ತೋರುವುದೆಂದು ತನ್ನ ಮನದಲ್ಲಿ ಯೋಚಿಸುತ್ತಾ ಬರಲು, ದ್ವಾರಪಾಲಕಿಯು ಮುಂಬಾಗವನ್ನು ಸೇರಿ,- ಎಲೈ ರಾಜೇಂದ್ರನೇ ! ಕೌಶಾಂ ಬೀನಗರಿಯ ಚಾರನು ಬಂದಿರುವನು ಎಂದು ಬಿನ್ನಿಸಲು; ಕಮಲಾವಳಿಯು ಒತ್ತಿ ನಲ್ಲಿರುವ ಸರಿಗೆಯ ತೆರೆಯ ಮರೆಯನ್ನು ಸೇರಲು; ರಾಯನು ಪುರೋಭಾಗದಲ್ಲಿರುವ ಚಾರನಂ ಕುರಿತು ಎಲ್ಲೆ ಚಾರನೇ, ನಿಮ್ಮ ವತ್ಸ ರಾಜನು ಪತ್ನಿ ಯಾದ ವಾಸವದ ತಾದೇವಿಯಿಂದೊಡಗೂಡಿ ಸುಖದಲ್ಲಿರುವನೆ ? ಮಂತ್ರಿಯಾದ ಯಯೌಗಂಧರಾಯ ಣನು ರಾಜಕಾರ್ಯದಲ್ಲಿ ನಿರತನಾಗಿ ಪ್ರಜೆಗಳಿಗೆ ಸಮ್ಮತನಾಗಿ ಚತುರೋಪಾಯಗ ಇಲ್ಲಿ ಕುಶಲನಾಗಿರುವನೆ ? ರುಮಣ್ಯ೦ತನೆಂಬ ಸೇನಾಪತಿಯು ವೈರಿಗಳಂ ಜಯಿಸು ವುದರಲ್ಲಿ ಸಮರ್ಥ ನಾಗಿ ಐಶ್ವರ್ಯದಲ್ಲಿಯ ತನ್ನ ದೇಹಸೌಖ್ಯದಲ್ಲಿಯೂ ಸಹ ಪ್ರೀತಿಯುಳ್ಳವನಲ್ಲದೇ ಇರುವನೆ ? ವಾಸವದತ್ತಾ ದೇವಿಯು ಹಿತವಾದ ಕಾರವಂ ಗೆಯ್ಯುತ್ತ ತನ್ನ ಪತಿಗೆ ಸಮ್ಮತಳಾಗಿರುವಳೆ ? ದೇಶದಲ್ಲಿ ಕಾಲಕಾಲಕ್ಕೆ ಆಗುವಂಥ ಮಳೆಗಳಿಂದ ವೃದ್ದಿಯಂ ಪೊಂದಿದ ಬೆಳೆಗಳ ಸಂಪತ್ತಿನಿಂದ ಪ್ರಜೆಗಳೆಲ್ಲರೂ ಯುಕ್ತ ರಾಗಿ, ಸಂತಾನಗಳಿಂದ ಸಂಗತರಾಗಿ, ರಾಯನ ಅಭಿವೃದ್ಧಿಯನ್ನು ಬಯಸುತ್ತ, ಇತರ ಬಾಧೆಗಳಿಲ್ಲದೆ ಇರುವರೆ ? ಪರಿಜನ ಪುರಜನರೆಲ್ಲರೂ ತಮ್ಮ ಇಷ್ಟ ಪ್ರಾಪ್ತಿ ಗಳಿ೦ದ ಸಂತುಷ್ಟರಾಗಿರುವರೆ ? ” ಎಂದು ಬೆಸಗೊಳ್ಳಲಾಮಾಧವನೆಂಬ ಚಾ ರನು- ಎಲೈ ಸ್ವಾಮಿಯೇ, ಎಲ್ಲರೂ ಸಂತೋಷಯುಕ್ತರಾಗಿ ಸ್ವಾಮಿಭಕ್ತಿಯಿಂದ ಇರುವರು. ನೀವು ಅಪ್ಪಣೆಯನ್ನಿತ್ತ ಒಂದು ವಾಕ್ಯಕ್ಕೆ ಮಾತ್ರ ನಾನು ಪ್ರತ್ಯುತ್ತರ ವನ್ನು ಬಯಸುವುದಕ್ಕೆ ಯೋಗ್ಯನಾಗಲಾರೆನು ?” ಎಂದು ನುಡಿಯಲಾವಾಕ್ಯವು ಕೇಳು ರಾಯನೂ ಕಮಲಾವಳೀದೇವಿಯೂ ಸಹ ಅಂತರಂಗದಲ್ಲಿ ಮಹತ್ತರವಾದ ಕಳವಳವಂ ಪೊಂದುತ್ತಿರಲು, ಪುರೋಹಿತನು-ನಾನು ವಾಸವದತ್ತೆಯ ವಿಚಾರವನ್ನು ಚೆನ್ನಾಗಿ ತಿಳಿಯದೆ ಇದ್ದರೂ ಮಂತ್ರಿಯ ಪತ್ರದಿಂದ ವ್ಯಸನವಂ ಪೊಂದುತ್ತಲಿದ್ದ ಈ ರಾಜದಂಪತಿಗಳಿಗೆ ಸಂತೋಷವಂ ಪುಷ್ಟಿಸುವುದಕ್ಕೋಸುಗ ಎನ್ನ ಬುದ್ಧಿಯಿಂದ ನಾನಾಪ ಕಾರವಾದ ವಾಕ್ಯಗಳನ್ನು ಕಲ್ಪಿಸಿ ಪೇಳಿದುದಲ್ಲದೆ ಚಾರನನ್ನು ಕರೆದು ವಿಚಾರಿಸಿದಲ್ಲಿ ಸಮಸ್ಯವಾದ ಸಂದೇಹವೂ ಪರಿಹಾರವಾಗುವುದೆಂದು ನುಡಿದಿರುವೆನು.' ಈ ಚಾರನಾದರೋ ಬಲವಾದ ಸಂದೇಹದಿಂದೊಡಗೂಡಿದ ವಾಕ್ಯವನ್ನು ನುಡಿಯು ತಿರುವನು. ಮುಂದೆ ಇನ್ನೇನು ನುಡಿಯುತ್ತಿರುವನೋ, ನಾನು ಹೇಳಿದ ವಾಕ್ಯವು ಎಲ್ಲಿ ಅಪದ್ಧವಾಗುವುದೋ, ತಿಳಿಯೆನು-ಎಂದು ಯೋಚಿಸುತ್ತಿರಲು, ಮಂತ್ರಿಯು(ಎಲೈ, ಚಾರನೇ, ನೀನು ಯಾವ ವಾಕ್ಯಕ್ಕೆ ಪ್ರತ್ಯುತ್ತರವನ್ನು ಹೇಳುವುದಕ್ಕೆ ಶಕ್ತಿ ಯಿಲ್ಲವೆಂದು ಬಿನ್ನೈಸಿರುವೆ. ಆ ವಾಕ್ಯವು ಯಾವದು ನುಡಿ ? " ಎಂದು ಹೇಳಲಾ