ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೩೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Sof ಸರ್ಗ: ೪೮. ಅಯೋಧ್ಯಾಕಾಂಡವು. ++ ಪುರಜನರ ದುಃಖವು, w ಆ ಪುರವಾಸಿಗಳೆಲ್ಲರೂ ಹೀಗೆ ರಾಮನನ್ನು ಕಾಣದೆ ಮಹಾವ್ಯಸನದಿಂದ ಪೀಡಿತರಾಗಿ, ಕಣ್ಣೀರನ್ನು ಸುರಿಸುತ್ತಾ,ಆಗಾಗಮೂರ್ಛಬಿಳುತ್ತಾ, ಹಿಂ ತಿರುಗಿ ಪಟ್ಟಣಕ್ಕೆ ಬಂದುಸೇರಿದರು. ತಮ್ಮ ಪ್ರಾಣವೇ ಉತ್ಸಾಂತವಾ ಗಿ ಹೋದಂತೆ ಶಕ್ತಿಗುಂದಿದವರಾಗಿ ತಮ್ಮ ತಮ್ಮ ಮನೆಯನ್ನೂ ಸೇರಿದರು. ಅಲ್ಲಿಯೂ ಹೆಂಡಿರುಮಕ್ಕಳೊಡಗೂಡಿ ಕಣ್ಣೀರುಬಿಟ್ಟು, ಅಳುವುದಕ್ಕಾರಂಭಿಸಿ ದರು. ತಮ್ಮ ತಮ್ಮ ಸ್ನೇಹಿತರನ್ನು ನೋಡಿದರೂ ಅವರ ಮನಸ್ಸಿನಲ್ಲಿ ಸಂ ತೋಷವುಂಟಾಗಲಿಲ್ಲ. ಎಷ್ಟೆ ಅಪೂಶ್ವಪದಾರ್ಥಗಳನ್ನು ಮುಂದೆ ತಂದಿಟ್ಟ, ರೂ ಆದರಿಸುತ್ತಿರಲಿಲ್ಲ. ವರಕರು ತಮ್ಮ ತಮ್ಮ ವಿಕ್ರಯಪದಾರ್ಥಗಳೊಂ ದನ್ನೂ ತೆರೆದಿಡಲಿಲ್ಲ. ಅಲ್ಲಿ ಅಗ್ನಿ ಹೋತ್ರಾದಿ ಪುಣ್ಯಕಾರಗಳೊಂದೂ ನಡೆಯಲಿಲ್ಲ. ಗೃಹಸ್ಥರು ಮನೆಯಲ್ಲಿ ಅಡಿಗೆಯನ್ನೇ ಮಾಡಲಿಲ್ಲ. ಅಮೂಲ್ಯ ವಾದ ವಸ್ತುಗಳನ್ನು ಕಳೆದುಕೊಂಡವರು, ಆ ಪದಾರ್ಥವು ಪುನಃ ಲಭಿಸಿದ ರೂ ಸಂತೋಷಿಸುತ್ತಿರಲಿಲ್ಲ. ವಿಶೇಷವಾದ ಆಕಸ್ಮಿಕಧನಪ್ರಾಪ್ತಿಯುಂಟಾ ದರೂ ಅದರಿಂದ ಸಂತೋಷಿಸುತ್ತಿರಲಿಲ್ಲ. ಸಿಯರು ಬಹುಕಾಲದಿಂದ ಮಕ್ಕಳಿಲ್ಲದಿದ್ದು ಒಂದು ಗಂಡುಮಗುವನ್ನು ಪಡೆದರೂ ಸಂತೋ ಷಹೊಂದಲಿಲ್ಲ. ಮನೆಮನೆಗಳಲ್ಲಿಯೂ ಹೆಂಗಸರು ದುಃಖದಿಂದ ಗೋಳಿ 'ಡುತ್ತ, ರಾಮನಿಂದ ವಂಚಿತರಾಗಿ ಹಿಂತಿರುಗಿ ಬಂದ ತಮ್ಮ ಪತಿಗಳನ್ನು ನೋಡಿ, ಅಂಕುಶದಿಂದ ಆನೆಯನ್ನು ಚುಚ್ಚುವಂತೆ, ಮರಭೇದಕವಾದ ಮಾ ತುಗಳನ್ನಾಡಿ ಹೀಗಳೆಯುತ್ತ, ಅವರನ್ನು ಕುರಿತು(ರಾಮನನ್ನು ಕಳೆದುಕೊಂ ಡು ಬಂದಮೇಲೆ ನಿಮಗೆ ಈ ಮನೆಗಳೇಕೆ? ಈ ಪತ್ನಿ ಯರೇಕೆ?ಈ ಹಣವೇಕೆ? ಈಮಕ್ಕಳೇಕೆ? ಅಥವಾ ಈ ಸುಖಗಳೇಕೆ? ಲೋಕದಲ್ಲಿ ಲಕ್ಷ್ಮಣನೊಬ್ಬನೇ ಧನ್ಯನು. ಆತನೊಬ್ಬನೇ ಸತ್ಪುರುಷನು, ಅರಣ್ಯದಲ್ಲಿ ಸೀತಾಸಮೇತನಾದ ರಾಮನನ್ನು ಉಪಚರಿಸುತ್ತಿರುವ ಭಾಗ್ಯವನ್ನು ಪಡೆದವನು ಆ ಲಕ್ಷಣನೊ ಬ್ಬನೇ ಅಲ್ಲವೆ? ರಾಮನು ಕಾಡಿನಲ್ಲಿ ಯಾವ ನದಿಗಳಲ್ಲಿ ಸ್ನಾನಮಾಡುವನೋ, ಯಾವ ತಾವರೆಕೊಳಗಲ್ಲಿ ವಿಹರಿಸುವನೋ, ಯಾವ ಸರೋವರಗಳಲ್ಲಿ ಕ್ರೀಡಿಸುವನೋ, ಅವುಗಳೇ ಪುಣ್ಯಮಾಡಿದುವುಗಳು. ಅಂದವಾದ ವೃಕ್ಷ