ಪುಟ:ಅರ್ಥಸಾಧನ.djvu/೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೫ಳ ಅರ್ಧಸಾಧನ ಇಹ ಪರ ಸಾಧನೆಗಳಿಗೆ ಅನುಕೂಲವಾಗುವಹಾಗೆ ಉಪಯೋಗಿಸಿ ಉಬ್ಬ ರಾಗದೆ ಯಶಸ್ಸನ್ನು ಸಂಪಾದಿಸುವುದು ಶ್ರೇಯಸ್ಕರವಾದುದು. ಮಿ ತ ವ ಯ . ಸ್ವಕುಟುಂಬವಿರೋಧೀನ ಬುದ್ದಿರ್ಮಾ ವ್ಯಯಮಾಚರೇತ್ | ದರಿದ್ರಾತಿ ದಿನೈಃ ಸ್ವಲ್ಪ ಕುಬೇರೋಪ್ಯ ಮಿತಾಯಾತ್ || ಜನರು ಪದಾರ್ಥಗಳನ್ನು ಕೊಂಡುಕೊಳ್ಳುವಾಗ ರೂಪಾಯಿಗಳ ನ್ನಾಗಲಿ ಚಿಲ್ಲರೆ ನಾಣ್ಯಗಳನ್ನಾಗಲಿ ಉಪಯೋಗಿಸುವರು. ಹೀಗುಪಯೋ ಗಿಸುವುದರಲ್ಲಿ ಹೆಚ್ಚಾಗಿ ಕೊಂಡುಕೊಳ್ಳುವಾಗ ರೂಪಾಯಿಗಳನ್ನೂ ಸ್ವಲ್ಪ ವಾಗಿ ಕೊಂಡುಕೊಳ್ಳುವಾಗ ಜಿಲ್ಲರೆ ದುಡ್ಡುಗಳನ್ನೂ ಉಪಯೋಗಿಸು ತಾರೆ. ಆದರೆ ಜನಗಳು ಜಿಲ್ಲರೆದುಡುಗಳನ್ನು ಧೋರಣೆಯಾಗಿ ವೆಚ್ಚ ಮಾ ಡುವಹಾಗೆ ರೂಪಾಯಿಗಳನ್ನು ವೆಚ್ಚ ಮಾಡುವುದಕ್ಕೆ ಹಿಂಜರಿಯುವರು. ಹೇಗಂದರೆ:- ರೂಪಾಯಿಗಳನ್ನು ಮುರಿಸಿಕೊಂಡು ಪೇಟೆಗಾಗಲೀ, ಮಾರ್ಕ ಟ್ಟಿಗಾಗಲೀ ಹೋದರೆ ಮೊದಲು ಆವಶ್ಯಕವಾದ ಪದಾರ್ಥಗಳನ್ನು ತೆಗೆದು ಕೊಳ್ಳುವರು. ಆಮೇಲೆ ಆವಶ್ಯಕವಲ್ಲದ ಹಣ್ಣು ತಿಂಡಿ ಮೊದಲಾದುವುಗ ಳನ್ನು ತೆಗೆದುಕೊಳ್ಳುವುದಕ್ಕೆ ಕೈಲಿರುವ ಚಿಲ್ಲರೇ ದುಡ್ಡುಗಳನ್ನು ಸ್ವಲ್ಪ ಸ್ವಲ್ಪವಾಗಿ ವೆಚ್ಚ ಮಾಡುವರು ರೂಪಾಯನ್ನು ಮುರಿಸದೆ ಕೈಲಿಟ್ಟು ಕೊಂಡಿ ದ್ದರೆ, ಆಗಲೇ ಆವಶ್ಯಕವಾಗಿ ತೆಗೆದುಕೊಳ್ಳಬೇಕಾದ ಪದಾರ್ಥಗಳು ವಿಶೇ ಪವಾಗಿದ್ದರೂ “ ರೂಪಾಯನ್ನು ಮುರಿಸಿಬಿಟ್ಟರೆ ಸಿಕ್ಕಿದಹಾಗೆ ವೆಚ್ಚವಾಗಿ ಈ ದಿವಸವೇ ಇದರಲ್ಲಿ ಬಂದು ಕಾಸೂ ನಿಲ್ಲದಹಾಗಾಗುತ್ತದೆ; ಇದನ್ನು ಈ ದಿನ ತೆಗೆದುಕೊಳ್ಳುವುದಕ್ಕೆ ಬದುಲಾಗಿ ನಾಳ ತೆಗೆದುಕೊಳ್ಳೋಣ' ಎಂದು ಹೊರಟುಹೋಗುವರು ಒಂದುವೇಳೆ ಮನೆಯಲ್ಲಿ ಯಾವುದಾದರೂ ಚಿಲ್ಲರೇ