ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅಧ್ಯಾ, ೨|| ಪ್ರಥಮಸ್ಕಂಥವು. ಎಂದು ಕೂಗುತ್ತಿರಲು, ಆ ಶುಕನ ಜ್ಞಾನಸಂಬಂಧದಿಂದ ಆ ಕಾಡಿನಲ್ಲಿದ್ದ ಮರಗಿಡುಗಳೆಲ್ಲವೂ ತಾವೇ ಶುಕಸ್ವರೂಪಗಳಾದಂತೆ «ಇದೋ ! ಇಲ್ಲಿರುವೆ ನು” ಎಂದು ಪ್ರತಿಧ್ವನಿಯನ್ನು ಕೊಟ್ಟು ವೊ, ಹೀಗೆ ಜ್ಞಾನವ್ಯಾಪ್ತಿಯಿಂದ ಸಮಸ್ತಭೂತಗಳ ಹೃದಯದಲ್ಲಿಯ ಪ್ರಕಾಶಿಸುತ್ತಿರುವ ಆ ಮಹರ್ಷಿಯ ನ್ನು ನಮಸ್ಕರಿಸುವೆನು. ಯಾವ ಮುಸಿಶ್ರೇಷ್ಠನು, ಸತ್ವವೇದಸಾರಭೂ ತವಾಗಿಯೂ, ಪುರಾಣಗಳಲ್ಲಿ ಅದ್ವಿತೀಯವಾಗಿಯೂ, ಸ್ವಾತ್ಮ ಪರಮಾತ್ಮತ ತ್ಯವನ್ನು ಪ್ರಕಾಶಪಡಿಸುವವಿಷಯದಲ್ಲಿ ದೀಪಪ್ರಾಯವಾಗಿಯೂ, ಸಂ ಸಾರನಿವೃತ್ತಿಯಲ್ಲಿ ಆಪೇಕ್ಷ ಯಲ್ಲದವರಿಗೂಕೂಡ, ಆ ವಿಧವಾದ ಅಜ್ಞಾನವ ನ್ನು ನೀಗಿಸಿ, ಮೋಕ್ಷಾಪೇಕ್ಷೆಯನ್ನು ಹುಟ್ಟಿಸತಕ್ಕುದಾಗಿಯೂ ಇರುವ ಶ್ರೀ ಭಾಗವತವೆಂಬ ಪುರಾಣದ ರಹಸ್ಯವನ್ನು ಮೊದಲು ತನ್ನ ನಿಜಾನುಭವಕ್ಕೆ ತಂದುಕೊಂಡು, ಆಮೇಲೆ ಲೋಕೊಜೀವನಾರ್ಥವಾಗಿ ಅದನ್ನು ದಯೆ ಯಿಂದ ಪ್ರಕಾಶಗೊಳಿಸಿದನೋ, ಅಂತಹ ವ್ಯಾಸಪುತ್ರನಾದ ಶುಕಮುನಿಯ ನ್ನು ಮರೆಹುಗುವೆನು.*ಭಗವದಂಶದಿಂದವತರಿಸಿ,ಬದರಿಕಾಶ್ರಮದಲ್ಲಿ ಲೋಕ

  • ಇಲ್ಲಿ ನಾರಾಯಣಂ ನಮಸ್ಕೃತ್ಯ ನರಂಚೈವ ನರೋತ್ತಮಂ। ದೇವೀಂ ಸರ ಸ್ವತೀಂ ವ್ಯಾಸಂ ತತೋ ಜಯಮುದೀರಯೇತ್...” ಎಂದು ಮೂಲವು ಈ ಶೋಕಾರ್ಥ ವನ್ನು ಚೆನ್ನಾಗಿ ಪದ್ಯಾಲೋಚಿಸಿದರೆ, ಇದರಲ್ಲಿ ವಾಚ್ಯವಾಗಿ ಹೇಳಿರುವಂತೆ ನರನಾರಾ ಯರು. ಸರಸ್ವತಿ, ವ್ಯಾಸರು; ಇವರು ಮಾತ್ರವೇ ಅಲ್ಲದೆ, ಈ ಭಾಗವತಗ್ರಂಥಕ್ಕೆ ಪ್ರವರ್ತಕರಾದ ಇನ್ನೂ ಕೆಲವುಮಂದಿ ಆಚಾರರನ್ನು ನಮಸ್ಕರಿಸಬೇಕೆಂಬ ಅರ್ಥವೂ ಸೂಚಿತವಾಗುವುದು, ಇಲ್ಲಿನ ಗುರುಪರಂಪರಾಕ್ರಮವೇನಂದರೆ, ಮೊದಲು ವಿಷ್ಣು ವಿನ ನಾಲ್ಕನೆಯ ವ್ಯೂಹವಾದ ಅನಿರುದ್ಧನು, ತನ್ನನಾಭಿಕಮಲದಲ್ಲಿ ಹುಟ್ಟಿದ ಚತು ರ್ಮುಖಬ್ರಹ್ಮನಿಗೆ ಭಾಗವತಚತುಶೋಕಿಯನ್ನು ಪದೇಶಿಸಿದನು, ಆ ಚತುರ್ಮುಖ ನಿಂದ ನಾರದನಿಗೂ, ನಾರದನಿಂದ ವ್ಯಾಸನಿಗೂ ಇದೇ ಚತುಶೈಕಿಯು ಕ್ರಮಪ್ಪಾ ಪ್ರವಾಗಿ ಬಂದಿತು. ಆಮೇಲೆ ವ್ಯಾಸನು ಅದರ ಆಧಾರದಮೇಲೆ ಈ ಗ್ರಂಥವನ್ನು ರಚಿ ಸಿ, ತನ್ನ ಪ್ರತನಾದ ಶುಕಮುನಿಗೆ ಉಪದೇಶಿಸಿದನು. ಶುಕಮುನಿಯಿಂದ ಸೋತಾದಿಗಳಿಗೆ ಉಪದೇಶವಾಯಿತು. ಅದುದರಿಂದ ಇಲ್ಲಿ ಸೂತನು, ತನಗೆ ಈ ಗ್ರಂಥವನ್ನು ಪದೇಶಿಸಿದ ಶುಕಮುನಿಯನ್ನು ನಮಸ್ಕರಿಸಿ, ಅದರಿಂದಾಚೆಗೆ ಕ್ರಮವಾಗಿ ವ್ಯಾಸನಾರದಾದಿಗಳನ್ನು ಸ್ವತಿಸಬೇಕಾಗಿರುವುದು, ನರನಾರಾಣೆಯರಿಬ್ಬರೂ ಅನಿರುದ್ಧನಿಗೆ ಕಾರಣಭೂತನಾದ