ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

viji ಮುನ್ನುಡಿ ದೃಷ್ಟಿಯಿಂದಲ್ಲ; ರಾಷ್ಟ್ರ ಪ್ರಗತಿಯ ದೃಷ್ಟಿಯಿಂದ ಮಾನವ ಜೀವನಕ್ಕೆ ಅತ್ಯವಶ್ಯಕವಾದ ಗಾಳಿ, ಬೆಳಕು, ನೀರನ್ನು ಸ್ವಾಧೀನಪಡಿಸಿಕೊಂಡು ಅವುಗಳ ಮೇಲೆ ಸರ್ವಸ್ವಾಮ್ಯವನ್ನು ಸ್ಥಾಪಿಸುವ ಹಕ್ಕು ಹೇಗೆ ಯಾರಿಗೂ ಇಲ್ಲವೋ ಹಾಗೆ ಸಾಹಿತ್ಯ, ಕಲೆಯ ಮೇಲೆ ಸ್ವಾಮ್ಯ ಸ್ಥಾಪಿಸುವ ಅಧಿಕಾರ ಯಾರಿಗೂ ಇಲ್ಲ. ನಾಲ್ಕು ಜನ ಅರಿತು ನುರಿತವರಿಗೆ ಮಾತ್ರ ಅರ್ಥವಾಗುವ ಕಲೆ ಸರ್ವೋತ್ಯಷ್ಟವಾದುದೆಂದು ಭಾವಿಸುವುದು ತಪ್ಪು, ರಸಸ್ಯಂದಿಯಾದ ಉತ್ತಮಕಲೆ ಎಲ್ಲರ ಮ ನ ಸ್ಸಿ ನಲ್ಲಿ ಯೂ ಒಂದೇ ಬಗೆಯ ಭಾವ ತರಂಗಗಳನ್ನೇಳಿಸಬೇಕು. ಕಲಾವಿದನ ಕ್ರಿಯಾಸಿದ್ದಿ ಯನ್ನು ರಸಿಕ ನೇರವಾಗಿ ಅನುಭವಿಸುವಂತಿರಬೇಕು. ಬುದ್ದಿ ಯ ಬಲಕ್ಕೆ ರಸಾನುಭವವನ್ನು ಅಧೀನ ಮಾಡುವುದರಿಂದ ಕಲೆಯ ಮಟ್ಟ ಕೆಳಗಿಳಿಯುತ್ತದೆ.? ರಸಾನುಭವ ಉದಾತ್ತ ಜೀವನದ ಕಡೆ ಮಾನವನನ್ನು ಒಯ್ದು ಅವನಿಗೆ ಪ್ರಕೃತಿಯ ಅನಂತ ರಹಸ್ಯಗಳ ಪರಿಚಯಮಾಡಿಕೊಡುತ್ತದೆ. ಈ ರಹಸ್ಯ ಭೇದನೆಯಿಂದ ಮಾನವನಿಗೆ ತನ್ನ ಸುಪ್ತಚೈತನ್ಯದ ಅರಿವಾಗುತ್ತದೆ. ಕಲೆ ಮಾಡುವ ಎಲ್ಲ ಕೆಲಸಗಳಿಗಿಂತ ಹಿರಿಯದಾದುದು, ಮಾನವನಿಗೆ ಸ್ವಸ್ವರೂಪ ದರ್ಶನ' ಮಾಡಿಸುವ ಕೆಲಸ, - ಭಾರತ ಈ ಕೆಲಸವನ್ನು ತಕ್ಕಮಟ್ಟಿಗೆ ನಿರ್ವಹಿಸಿತು. ಭಾರತದಲ್ಲಿ - - -

  • "I cannot believe that beauty is the appanage of a set and I am inclined to think that a manifestation of art that has a meaning only to persons who have undergone a peculiar training is as inconsiderable as the set to which it appeals. An art is only great and significant if it is one that all may enjoy. The art of a clique is but a plaything. I do not know why distinctions are made between ancient art and modern art. There is nothing but art. Art is living. To attempt to give an object of art life by dwelling on its historical, cultural, or archælogical associations is senseless. It does not matter whether a stalue was hown by an archaic Greek or a modern Frenchman. Its only: importance is that it should give us here and now the æsthetic thrill and this æsthetic thrill should move us to works. If it is anything more than a self-indulgence