ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೨೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕರ್ನಾಟಕದ ಕಲಾವಿದರು ಹಲವರ ಬಾಯಿಂದ ಕೇಳುವುದು ಅದೇ ರಾಗ ಅದೇ ಕೀರ್ತನೆ. ಪ್ರಚಲಿತ ಸಂಗೀತಸಾಹಿತ್ಯದ ವ್ಯಾಪ್ತಿಯನ್ನು ವಿಸ್ತರಿಸಬೇಕಾದ ಹೊಣೆಗಾರಿಕೆ ಕರ್ನಾಟಕ ಪದ್ದತಿಯ ವಿದ್ವಾಂಸರ ಮೇಲಿದೆ. ಹೊಸ ಕೀರ್ತನೆಗಳನ್ನು ಹಾಡುವ ಪ್ರಯತ್ನ ವನ್ನಲ್ಲದೆ ರೂಢಿಯಲ್ಲಿಲ್ಲದ ಹೊಸ ರಾಗಗಳನ್ನೂ ಹಾಡುವ ಪ್ರಯತ್ನ ವನ್ನೂ ಚೊಕ್ಕಮ್ಮನವರು ಮಾಡಿದ್ದಾರೆ. ಚೊಕ್ಕಮ್ಮನವರ ಸಂಗೀತದಲ್ಲಿ ಅವರು ಶ್ರುತಿಗೆ ಕೊಡುವ ಲಕ್ಷ ಹಾಗೂ ಸ್ವರ, ಸಾಹಿತ್ಯ ಪ್ರಯೋಗಕಾಲದಲ್ಲಿ ತೋರುವ ಸಂಯನು ಮನ ಸೆಳೆಯುತ್ತವೆ. ಮಂಜುಳವೂ ಮಧುರವೂ ಆದ ಅವರ ಧ್ವನಿ ಮಲ್ಲಿಗೆಯ ಮೊಗ್ಗೆಯಂತೆ ಅರಳುತ್ತದೆ. ಶ್ರುತಗಾನಮಭಿರಾಮಂ ಅಶ್ರುತಗಾನಮಭಿರಾಮ ತರಂ '+ ಎಂದು ಕವಿ ಹೇಳಿದಾಗ ಸಂಗೀತದ ಜೀವತತ್ವವನ್ನೇ ಸೂಚಿಸಿದ್ದಾನೆ. ಹಾಡುವವನಲ್ಲಿ ಸಂಗೀತವಿರುವಂತೆ ಕೇಳುವವನಲ್ಲಿಯೂ ಸಂಗೀತವಿರುತ್ತದೆ. ಒಂದು ಜಾಗೃತ, ಇನ್ನೊಂದು ಸುಸ್ತ, ಸ್ಪಂದನ, ಪ್ರತಿಸ್ಪಂದನ ಮೇಳವಿಸಿ: ದಾಗಲೇ ಹಾಡುಗಾರಿಕೆ ರಸಸಿದ್ಧಿಯನ್ನು ಪಡೆಯುವುದು. ಗಾಯಕ ತಾನು ಹಾಡುತ್ತಿರುವ ಸ್ವರ, ಅನುಸ್ವರಗಳಿಗೆ ಅನುರಣಿಸುವ ಶ್ರಾವಕನ ನಾದಶಕ್ತಿಗೆ ಪ್ರಚೋದನೆಯನ್ನು ಕೊಡಬೇಕು. ಈ ಪ್ರಚೋದನೆಯನ್ನುಂಟುಮಾಡುವ ಶಕ್ತಿಯಿಲ್ಲದ ಗಾಯಕನ ಸಂಗೀತ ಕೇಳಿ, ಕ್ಷಣಿಕ ಸುಖವನ್ನನುಭವಿಸಿ ಶ್ರಾವಕ ಮರೆತುಬಿಡುತ್ತಾನೆ, ಅನುರಣನ ಸಂಗೀತವನ್ನು ಉತ್ಪಾದಿಸಬಲ್ಲ ಗಾಯಕನ ಸಂಗೀತ ಅನಂತಕಾಲ ಶ್ರಾವಕನ ಚಿತ್ತಭಿತ್ತಿಯ ಮೇಲೆ ಮೂಡಿರುತ್ತದೆ. ಈ ಅಪೂರ್ವಶಕ್ತಿ ಚೊಕ್ಕಮ್ಮನವರಿಗೆ ಸಾಧಿಸಿದೆಯೆಂದು ನಾನು ಅನುಭವದಿಂದ ಕಂಡಿರುವ ವಿಷಯ. ಚೊಕ್ಕಮ್ಮನವರು ತುಲನಾತ್ಮಕ ದೃಷ್ಟಿಯಿಂದ ಹಿಂದೂಸ್ಥಾನಿ ಸಂಗೀತ ವನ್ನೂ ಅಭ್ಯಾಸಮಾಡಿದ್ದಾರೆ. ಹೆಚ್ಚಿನ ಅಭ್ಯಾಸಕ್ಕೆ ಮೈಸೂರಿನಲ್ಲಿ ಅವಕಾಶ T “Heard melodies are sweet, but those unheard Are sweeter ; therefore, ye soft pipes, play on ; Not to the sensual ear, but inore endear'd Pipe to the spirit ditties of no tune. " -KEATS, ODE ON THE GRECIAN URN