ಪುಟ:ಅರೇಬಿಯನ್ ನೈಟ್ಸ್ ಕತೆಗಳು.djvu/೫೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

kov ಯವನ ಯಾಮಿನೀ ವಿನೋದ ಎಂಬ, ದ್ರವ್ಯವನ್ನು ಸಂಪಾದಿಸಿ, ಬಳಿಕ ರೂಪರೇಖಾಲಾವಣ್ಯ ಚಾತುರ್ ಗಾಂಭೀರ ಗುಣಗಣ ಪರಂಪರಾಯುಕ್ತಳಾದ ನಿನ್ನ ಮಗಳನ್ನು ನನಗೆ ಕೊಟ್ಟು ವಿವಾಹ ಮಾಡಿಕೊಡಬೇಕೆಂದು ಪ್ರಧಾನಮಂತ್ರಿ ಕಾಗದನ್ನು ಬರೆವನು, ಅದರಲ್ಲಿ ಬಹುಮಾತುಗಳನ್ನು ವಿವರಿಸಿಬರೆಯದೆ ಮದುವೆಯಾದರಾತ್ರಿಯ ನಿನಗೆ ಒಂದುಸಾವಿರ ಮೊಹರಿಗಳನ್ನು ಕೊಡುವೆನೆಂದು ಬುವನು. ಆತ ನಂದಿಗೂ, ಅದಕಪ್ಪದಿರಲಾರನು. ಹಾಗೆ ಒಪ್ಪದೆಂದರೆ, ನಾನು ಬಲಾತ್ಕಾರದಿಂದ ಆತನಮಗಳನ್ನು ಮದುವೆ ಮಾಡಿಕೊಳ್ಳುವುದೇ ಸರಿ ! ಹೀಗೆ ಮಂತ್ರಿಯಮಗಳನ್ನು ಮದುವೆಮಾಡಿಕೊಂಡವಳೆ, ಮಾನಕ್ಕೆ ತಕ್ಕಂತೆ ಉತ್ತಮವಾದ ಜರತಾರಿ ಬಟ್ಟೆಗಳನ್ನೂ, ಅಪರಂಜಿಯ ತಟ್ಟಿ ಗಳನ್ನು, ವಜ ಕಂಪುಗಳನ್ನು ಕಟ್ಟಿ ಬಿಗಿದಿರುವ ಪಾತ್ರಗಳನ್ನು ತರಿಸಿ, ನಾಲ್ಕು, ಐದುಜನ ಕಾಮರರನ್ನು ತನ್ನ ಹೆಂಡತಿಯ ಚಾಕರಿಗಾಗಿ ಎಂದು ನಿಯಮಿಸಿಕೊಳ್ಳುವೆನು. ನಂತರ ನಾನು ಆ ಸೇವಕರಿಂದ ಪರಿವೃತನಾಗಿ ಉತ್ತಮವಾದ ಅಲಂಕಾರಭೂಷಿತನಾಗಿ, ಆಕೆಯಮೇಲೆ ಕುಳಿತು ಮಂತ್ರಿ ಯಮನೆಗೆ ಹೋಗುವನು. ಆತನು ನನಗೆ ಆಗ ತಾವು ಗೌರವವಾಗಿ ಮರ್ಯಾದೆಮಾಡಿ, ಪ್ರತ್ಯುತಾನವಂ ಕೊಟ್ಟು, ತನ್ನ ಬಳಿಯ ಕುಳ್ಳಿರಿಸಿಕೊಳ್ಳುವನು. ಬಳಿಕ ನನ್ನ ಬಾಕರರು ಮೊಹರಿಗಳನ್ನು ತುಂಬಿದ ಚೀಲಗಳನ್ನು ತಂದು, ನನ್ನ ಬಳಿಯಲ್ಲಿರುವರು, ನಾನು ಅದನ್ನು ತಗದು ಪ್ರಧಾನ ಮಂತಿಯ ಕೈಗೆ ಕೊಟ್ಟು ಇಗೊ ನಿನ್ನ ಮಗಳ ಮದುವೆಯ ದಿನ ಕೊಡುತ್ತೇನೆಂದು ಹೇಳಿದ, ಹಣಕ್ಕಿಂತಲೂ, ಒಂದುಸಾವಿರ ಮಹರಿಗಳು ಕಚಗಿರುವುದು. ಇದನ್ನು ಇತರ ಖರ್ಚಿಗೆ ಉಪಯೋಗಿಸಿಕೊಳ ಒಹುದು ಎಂದು ಹೇಳುವನು. ಅದನ್ನು ಆತನು ಅಂಗೀಕರಿಸದೆ ಇರಲಾರು. ನಾನು ಮೊದಲಿನಂತ ವೈಭವದಿಂದ ಮನೆಯನ್ನು ಸೇರಲು, ತಂದೆಯ ರ್ದ ನಕ್ಕಾಗಿ ಹೋಗಿದ್ದ, ನನಗೆ ನನ್ನ ಹೆಂಡತಿಯು ವಂದನಾಪತ್ರವನ್ನು ಕಳು ಹಿಸುವಳು. ನಾನು ಅದನ್ನು ತಂದ ಚಾರಕನಿಗೆ ಬಹುಮಾನವಾಗಿ ಕಳು ಹಿಸುವನು. ನನ್ನ ಹೆಂಡತಿಯು, ನನ್ನ ಆಜ್ಞಾನುಸಾರವಾಗಿ ನಡೆದುಕೊ ಳ್ಳುವಂತೆ ಎಚ್ಚರಿಕೆಯಿಂದ ನೋಡಿಕೊಳ್ಳುವೆನು. ರಾತ್ರಿ ಕಾಲದಲ್ಲಿ ನಾನು