ಪುಟ:ಅರ್ಥಸಾಧನ.djvu/೧೦೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರ್ಧಸಾಧನ ತಕ್ಕ ಪೂರ್ವಾಪರಜ್ಞತೆಗೂ ಅಧೀನವಾಗಿರುವುದು. ಇಂದ್ರಿಯಗಳ ಮತ್ತು ಭೂಪರನದ ಪ್ರೇರಣೆಗೆ ಅನುಸಾರವಾಗಿ ನಿರಂತರವೂ ವ್ಯವಹಾರ ಗಳು ನಡೆಯುವುವು ಇಂದ್ರಿಯಗಳು ಸನ್ಮಾರ್ಗದಲ್ಲಿ ಪ್ರವರ್ತಿಸುವಂತೆ ಮನಸ್ಸು ಪ್ರೇರಣೆಮಾಡಿದಾಗ ಪೂರಾಪರಜ್ಞಾನವು ಅವುಗಳಿಗೆ ಸಹಕಾರಿ ಯಾಗಿರುವುದು. ಮಾಡಬಾರದ ಕೆಲಸಗಳನ್ನು ಮಾಡಿಸುವುದರಲ್ಲಿ ಇಂದ್ರಿ ಯಗಳು ಮನಸ್ಸನ್ನು ಪ್ರೇರಿಸುವಾಗ ಪೂರಾ ಪರಜ್ಞತೆಯು ಪ್ರತಿಭಟಿಸಿ, ಆ ಕೆಲಸಗಳನ್ನು ಮಾಡುವುದರಿಂದ ಉಂಟಾಗಬಹುದಾದ ಅನರ್ಥಗಳನ್ನು ಸೂಚಿಸುವುದು. ಇಂದ್ರಿಯಗಳ ಶಕ್ತಿಯ ಬಲವಾದಪಕ್ಷದಲ್ಲಿ ಪೂರಾಪರ ಜ್ಞತೆಯು ದುರ್ಬಲವಾಗಿ ಕೊನೆಗೆ ನಾಶವಾಗುವುದು ಯಾರ ಮನಸ್ಸು ಇಂದ್ರಿಯಪರವಶವಾಗಿ ಪೂರಾಪರತೆಗೆ ಅಧೀನವಾಗದೆ ಉಚ್ಚಂಗಲ ವಾಗಿ ಪರಿವರ್ತಿಸುವುದೋ ಅಂಥ ಜನರು ದುರಾರ್ಗಪ್ರವೃತ್ತರಾಗಿ ಇಹ ಪರಗಳನ್ನು ಕಳೆದುಕೊಳ್ಳುವರು. ಇಹಪರ ಸಾಧನೆಗೆ ದ್ರವ್ಯವು ಸಾಧನ ಭೂತವಾದುದು. ಆದರೆ ಧಮ್ಮದಿಂದ ಸಂಪಾದಿಸಿದ ದ್ರವ್ಯವು ಇಹಪರಗಳಿಗೆ ಸಾಧನವಾಗುವುದೇ ಹೊರತು ಅಧರದಿಂದ ಸಂಪಾದಿಸಲ್ಪಟ್ಟ ದ್ರವ್ಯವು ಎಂದಿಗೂ ಸಾಧಕವಾಗುವುದಿಲ್ಲ ಆದುದರಿಂದ ನಿರ್ದುಷ್ಟವಾದ ಇಹಪರ ಸೌಭ್ಯವನ್ನು ಅಪೇಕ್ಷಿಸತಕ್ಕವರು ಧರದಿಂದ ಅರ್ಥವನ್ನೂ ಅರ್ಥದಿಂದ ಇತರ ಪುರುಷಾರ್ಥಗಳನ್ನೂ ಸಂಪಾದಿಸಿ ಕೃತಕೃತ್ಯರಾಗಬೇಕು. ಅರ್ಥಜ್ರನೆಗೆ ಸಹಾಯಭೂತವಾದ ಬುದ್ಧಿವಾದಗಳು, 1. ಅರೋಗದೃಢಕಾಯರಾಗಿರುವುದಕ್ಕೆ ಸಹಾಯಭೂತಗಳಾದ ಆರೋಗ್ಯ ಸೂತ್ರಗಳ ನಿಬಂಧನೆಗಳನ್ನು ಅನುಸರಿಸಿ ನಡೆ. 2. ಲೋಕವ್ಯವಹಾರದ ನಡವಳಿಕೆಗೆ ಸಾಧಕವಾದ ಜ್ಞಾನವನ್ನು ಹೊಂದುವುದಕ್ಕೋಸ್ಕರ ಯಾವದಾದರೂ ಒಂದು ಭಾಷೆ ಮತ್ತು ಅಕ್ಕಾ