ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೦

ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು

came between gods and men. On the man's side is faith, munificence, a compelling force of prayer and intenseness of will; the sacrifice in vigorates the gods to do the will of the sacrificer.
ಒಟ್ಟಿನಲ್ಲಿ ನೋಡಿದರೆ ಋಷಿಗಳ ಧರ್ಮದ ಸ್ವರೂಪವು ವ್ಯಾವಹಾರಿಕ. ಯಾತ್ವಾತ್ಮಕವಾಗಿದೆಯೆಂದು ಅನ್ನಬಹುದು. ಕಾಲಾನುರೂಪವಾಗಿ ವರ, ಆಶೀರ್ವಾದ, ಮಳೆ, ಸೂರ್ಯಪ್ರಕಾಶ, ದೀರ್ಘಾಯುಷ್ಯ, ಸಾಮರ್ಥ್ಯ, ದನಕರುಗಳ ಸಂಪತ್ತು ಲಭಿಸಬೇಕೆಂಬ ಬೇಡಿಕೆ ಇರುತ್ತಿತ್ತು. ಈ ಯಜ್ಞವಿಧಿಗಳಲ್ಲಿ ಸಾಕಷ್ಟು ಸಮಯ, ಹಣ, ಶಕ್ತಿ ವ್ಯಯವಾಗುತ್ತಿತ್ತು. ಒಳ್ಳೆಯ ಸಂಗತಿಗಳನ್ನು ಪಡೆಯುವ ಅಭಿಲಾಷೆಯನ್ನಿಟ್ಟು ಕೊಂಡು ಈ ವಿಧಿಗಳನ್ನು ಆಚರಿಸುತ್ತಿದ್ದರು. ದೇವತೆಗಳ ಹಾಗೂ ಮಾನವರ ಮಧ್ಯಸ್ಥರಾಗಿ ಯಜ್ಞ ಹಾಗೂ ಯಜ್ಞವನ್ನು ನಡೆಯಿಸಿಕೊಡುವವರು ಇರುತ್ತಿದ್ದರು. ಶ್ರದ್ಧೆ, ಔದಾರ್ಯ, ಪ್ರಾರ್ಥನೆ, ಸಾಮರ್ಥ್ಯ, ಉತ್ಕಟ ಇಚ್ಛೆ ಇವೆಲ್ಲವೂ ಮಾನವನ ಗುಣಗಳು ಯಜ್ಞಕರ್ತನ ಇಚ್ಛೆಯನ್ನು ಖಂಡಿತವಾಗಿ ದೇವರಿಂದ ಪೂರ್ತಿಗೊಳಿಸುವ ಸಾಧನವೆಂದರೆ ಯಜ್ಞ.
ಯಜ್ಞಈ ಶಬ್ದವು ಯಜ ಎಂಬ ಮೂಲಧಾತುವಿನಿಂದ ಬಂದಿದೆ. ಯಜ ಎಂದರೆ, ದೇವರ ಪೂಜೆ, ಸಹವಾಸ ಮತ್ತು ದಾನಧರ್ಮ, ತಮಗಿಂತ ಶ್ರೇಷ್ಠ ನಾದವನು ದೇವಸಮಾನನೆಂದು ಪೂಜಿಸುವುದು, ತಮ್ಮ ತಮ್ಮ ಜನರಲ್ಲಿ ಪ್ರೀತಿ ವಿಶ್ವಾಸಗಳನ್ನಿಟ್ಟುಕೊಲ್ಲುವುದು, ಅವರನ್ನು ಸಂಘಟಿಸುವುದು, ತಮಗಿಂತ ಕಿರಿಯರಿಗೆ ಹಲವು ಸಂಗತಿಗಳನ್ನು ಕೊಡುವುದು. ಯಜ್ಞಕರ್ಮವು ಸನ್ಮಾನ, ಸಂಘಟನೆ ಹಾಗೂ ದಾನಗಳನ್ನೊಳಗೊಂಡಿದೆ. ವ್ಯಕ್ತಿ ಸಾಮಾನ್ಯನು ತನ್ನ ಸ್ವಂತದ ಕರ್ತವ್ಯದ ಜೊತೆಗೆ ಸಾಮಾಜಿಕ ಕರ್ತವ್ಯಗಳನ್ನೂ ಪಾಲಿಸುವುದು ಮುಖ್ಯ ಎಂಬುದೇ ಯಜ್ಞಕರ್ಮದ ಅರ್ಥವಾಗಿದೆ. ಯಜ್ಞ ಕರ್ಮವು ತ್ಯಾಗ ಪ್ರಧಾನವಾದ ಕರ್ಮವಾಗಿದೆ. ಪ್ರಪ್ರಥಮ ವಾಗಿ ಅಸುರರು ಅದನ್ನು ಪಾಲಿಸುತ್ತಿದ್ದರು; ನಂತರದ ಕಾಲದಲ್ಲಿ ದೇವತೆಗಳು ಅದನ್ನು ಅಂಗೀಕರಿಸಿದರು. ಋಷಿಗಳು ಹಾಗೂ ಜನಸಾಮಾನ್ಯರು ಯಜ್ಞಕರ್ಮ ವನ್ನು ದೇವತೆಗಳಿಂದ ಪಡೆದುಕೊಂಡರು. ಈ ವಿಚಾರದಲ್ಲಿ ಭಿನ್ನಾಭಿಪ್ರಾಯವಿದೆ. ಯಜ್ಞಕರ್ಮದಲ್ಲಿ 'ಯಾಚನೆ' ಇರುತ್ತದೆ. 'ಯಜ್ಞ' ಎಂಬ ಶಬ್ದವು 'ಯಾಚ್' ಎಂಬ ಧಾತುವಿನಿಂದ ಬಂದಿದೆ ಎಂದು ಕೆಲವರ ಅಭಿಪ್ರಾಯವಾಗಿದೆ. 'ಅಗ್ನಿಯಲ್ಲಿ ಪ್ರಚಂಡ ಸಾಮರ್ಥ್ಯವಿದೆ' ಎಂದು ಕಂಡುಹಿಡಿದ ನಂತರ ಮಾನವಜೀವನದಲ್ಲಿ
——————
೨. ಭಾರತೀಯ ಸಂಸ್ಕೃತಿ ಕೋಶ, ಖಂಡ ೭, ಪು.೫೯೯.