ಪುಟ:Praantabhaashhe-Rashhtrabhaashhe.pdf/೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಗಳ ಶಕ್ತಿಯ ಅಪವ್ಯಯವಾಗುವದು, ವಿಕಾಸಶಕ್ತಿ ಕುಂಠಿತವಾಗುವದು ಎಂದು
ಸ್ಪಷ್ಟವಾಗಿ ಹೇಳಿರುವರು. ನಮ್ಮ ಮಿದುಳಿನಲ್ಲಿ ಸ್ಪೂರ್ತಿಯಿಂದ ಮಿಂಚಿನಂತೆ
ಹೊಳೆಯುವ ಹೊಸ ವಿಚಾರಗಳು ನಮ್ಮ ಅಂತಃಕರಣದಲ್ಲಿ ಪ್ರಸಂಗವಶಾತ್
ಉಕ್ಕಿ ಬರುವ ಭಾವನೆಗಳು ನಮ್ಮ ಸ್ವಭಾಷೆಯಲ್ಲಿಯೆ ಬರಬಲ್ಲವು. ಎಚ್.
ಎನ್. ಬೋಫರ್ ಎಂಬ ಪ್ರಸಿದ್ದ ಇಂಗ್ಲೀಷ ಲೇಖಕನು ಇದೇ ಮಾತನ್ನು
ಹೇಳುವಾಗ, 'ನಮ್ಮ ಭಾವನೆಗಳನ್ನು ನಿಜವಾಗಿ ಒಂದೇ ಒಂದು ಭಾಷೆಯಲ್ಲಿ
ಚನ್ನಾಗಿ ಚಿತ್ರಿಸಬಲ್ಲೆವು, ಅದೆಂದರೆ ಸ್ವಭಾಷೆ, ಒಂದೇ ಭಾಷೆಯ
ಸೂಕ್ಷ್ಮಗರ್ಭಿತಾರ್ಥ, ಸೂಚಿತಾರ್ಥ, ಮುಂತಾದವುಗಳು ನಮಗೆ ಪೂರ್ಣವಾಗಿ
ತಿಳಿಯಬಲ್ಲವು. ಆ ಭಾಷೆಯೆಂದರೆ ನಮ್ಮ ಮಾತೃಭಾಷೆ, ತಾಯಿಯ ತೊಡೆ
ಯಲ್ಲಿರುವಾಗ ತೊದಲುತ್ತ ಕಲಿತ ಭಾಷೆಯದು. ಅದು ನಮ್ಮ ಪ್ರಾರ್ಥನೆಯ
ಭಾಷೆ, ದೇವರಿಗೆ ಮೊರೆಯಿಡುವ ಭಾಷೆ. ನಮ್ಮ ಸುಖದುಃಖದ ಪ್ರಥಮ
ಅಭಿವ್ಯಕ್ತಿಯು, ನಮ್ಮ ಭಾವನೆಗಳ ಪ್ರಥಮ ಸ್ಪೋಟವು ನಮ್ಮ ತಾಯ್ತು?
ಯಲ್ಲಿಯೆ ಆಯಿತು, ಆ ಭಾಷೆ ಬಿಟ್ಟು ಇನ್ನಾವುದನ್ನಾದರೂ ಬೋಧ ಭಾಷೆ
ಮಾಡಲೆತ್ನಿಸುವುದೆಂದರೆ ವಿದ್ಯಾರ್ಥಿಗಳನ್ನು ಹೈರಾಣಮಾಡಿದಂತೆ. ಇಷ್ಟೇ
ಅಲ್ಲ ಅವರ ಮನಸಿನ ಸ್ವತಂತ್ರ ಹರಿದಾಟವನ್ನೆ ತಡೆದಂತೆ,' ಎಂದಿದ್ದಾನೆ.
ಈ ಎಲ್ಲ ಮಾತುಗಳನ್ನು ಪರಿಶೀಲಿಸಿದರೆ ಪ್ರಾ೦ತಿಕ ಭಾಷೆಗಳನ್ನು ದುರಕ್ಷಿಸ
ವದು ಎಂಥ ಘೋರ ಅಪರಾಧವಿರುವದೆಂಬುದು ವ್ಯಕ್ತವಾಗುವದು.
ಹಿಂದುಸ್ತಾನದಲ್ಲಿಯ ಹಲವೊಂದು ಪ್ರಾಂತಿಕ ಭಾಷೆಗಳು ಈ ಕ್ಷಣಕ್ಕೆ
ಸಾಕಷ್ಟು ಪುಷ್ಟವಿರಲಿಕ್ಕಿಲ್ಲ. ಹಾಗಿದ್ದ ಕ್ಷಣಕ್ಕೆ ನಾವು ಪರಕೀಯವಾದ
ಇಂಗ್ಲೀಷ ಭಾಷೆಯನ್ನಪ್ಪಿಕೊಳ್ಳಲು ಹೋಗುವದು ತಪ್ಪು. ಮನೆಯವಳು
ಮಾಡುವ ಅಡಿಗೆಗೆ ತಡವಿದ್ದರೆ ನಾವು ಸ್ವಲ್ಪ ಸಮಾಧಾನದಿಂದ ತಡೆಯ
ಬೇಕು ಹೊರತು ನಂಬರ ಮನೆಗೆ ಊಟಕ್ಕೆ ಹೋಗುವದು ಸಮಂಜಸವಾಗ
ಲಾರದು. ನಮ್ಮಲ್ಲಿಯ ಪ್ರಾಂತೀಯ ಭಾಷೆಗಳೆಲ್ಲ ಪ್ರಗತಿಶೀಲವೂ ಜೀವಂ
ತವೂ ಇರುವವು. ನಿಜವಾಗಿ ನೋಡಿದರೆ ಜನರ ಬಾಯೊಳಗೆ ಇರುವ ಪ್ರತಿ
ಯೊಂದು ಭಾಷೆಯು ಒಂದು ಜೀವಂತ ವಸ್ತು ಎಂದು ನಾವು ಭಾವಿಸಲು
ಅಡ್ಡಿ ಇಲ್ಲ. ಆಯಾ ಜನರು ಎಷ್ಟು ಚಟುವಟಿಕೆಯುಳ್ಳವರೂ, ಜೀವಂತರೊ,