ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಫ್ರೂಗೋನಿ, ಕಾರ್ಲೊ ಇನೊಸೆನ್ಸೊ

ವಿಕಿಸೋರ್ಸ್ದಿಂದ

ಫ್ರೂಗೋನಿ, ಕಾರ್ಲೊ ಇನೊಸೆನ್ಸೊ 1692-1768. ಇಟಲಿಯ ಕವಿ. ಫ್ರಾರ್ನೀಸ್ ಮತ್ತು ಬೋರ್ಬನ್‍ಗಳಲ್ಲಿ ಆಸ್ಥಾನಕವಿಯಾಗಿದ್ದ. ಹಲವಾರು ಲಘುಗೀತೆಗಳನ್ನೂ ಐತಿಹಾಸಿಕ ಅಷ್ಟಷಟ್ಟದಿ ಪ್ರಗಾಥ ಪ್ರಶಸ್ತಿ ಕಾವ್ಯಗಳನ್ನೂ ಸಮಯಸ್ಫೂರ್ತಿಯಿಂದ ಚಮತ್ಕಾರದ ಪದ್ಯಗಳನ್ನೂ ಬರೆದು ಜನಪ್ರಿಯತೆ ಗಳಿಸಿದ. (ಎಚ್.ಕೆ.ಆರ್.)