ಪುಟ:Kalyaand-asvaami.pdf/೧೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಮರ ಸುಳ್ಯದಲ್ಲಿ ಕ್ಷೋಭೆಯ ಕಿಡಿ

ಲಜ್ಜೆಯಿಂದ ರಾಮಗೌಡನ ಮುಖತುಸು ಕೆಂಪೇರಿತು. "ಸರಿ,ಸರಿ! ಎಂಥ ದಂಡನಾಯಕ? ಬರೇ ದಂಡಕ್ಕೆ! ಹುಡುಗರು ತಮಾಷೆ ಮಾಡಿದರೆ ಸುಮ್ಮನಿರಬಹುದು.ನನ್ನಷ್ಟೇ ವಯಸ್ಸಾಗಿರುವ ನೀವೂ ಹೀಗೆ ಹೇಳೋದೆ?" ಹುಸಿಮುನಿಸು ಬೇರೆ! "ಆಗಲಿ.ಇನ್ನೇನೂ ಹೆಚ್ಚು ದಿವಸ ಇಲ್ವಲ್ಲಾ.ನಾನು ಮಾಡಿದ್ದು ತಮಾಷೆಯೇ ಏನೂಂತ ಲೋಕಕ್ಕೇ ಆಗ ತಿಳಿದೀತು!" ರಾಮಗೌಡ ಎರಡೂ ಕೈಗಳನ್ನು ಮೇಲಕ್ಕೆತ್ತಿ,ಮಡಚಿ,ಬಿಡಿಸಿ ಮಾಂಸಖಂಡಗಳನ್ನು ತೋರಿಸುತ್ತಾ ಹೇಳಿದ: "ನೋಡಿ ರೈತನಾಗಿ ನೇಗಿಲು ಹಿಡಿದ ಕೈಗಳು.ಪೈರು ಹಾಳು ಮಾಡೋದಕ್ಕೆ ಕಾಡು ಹಂದಿ ಬಂದಾಗ ಯುದ್ದಕ್ಕೆ ಹೋದದ್ದುಂಟು.ಬಂದೂಕು ಹಿಡಿಯೋದು ಅಭ್ಯಾಸವಾದ್ಮೇಲೆ ಒಂದು ಪಟ್ಟೇ ಹುಲಿ ಹೊಡೆದಿದ್ದೇನೆ.ಸಾಕೋ ದಂಡನಾಯಕನ ಚರಿತ್ರೆ?" ಮಾಚಯ್ಯ ನಗುತ್ತಾ ಮಾತು ಸೇರಿಸಿದ : "ಇವರು ಹೇಳೋದು ನಂಬಬೇಡಿ ನಂಜಯ್ಯಣ್ಣ.ಅಮರಸುಳ್ಯದಲ್ಲೆಲ್ಲಾ ರಾಮಗೌಡರು ಮಹಾ ಶೂರ ಅಂತ ಪ್ರಖ್ಯಾತರಾದವರು,ರಾಮಪ್ಪಯ್ಯನನ್ನು ಹಣ್ಣು ಮಾಡೋ ಶಕ್ತಿ ಯಾರಿಗಾದರೂ ಇದ್ದರೆ ಇವರಿಗೆ ಮಾತ್ರ ಅಂತ ಜನ ತಿಳ್ಕೊಂಡವರೆ." "ಸುಮ್ನಿರಿ ನೀವು" ಎಂದ ರಾಮಗೌಡ,ಸಿಟ್ಟುಗೊಂಡವನಂತೆ. "ಸೂರ್ಯನಿಗೆ ಅಂಗೈ ಅಡ್ಡ ಹಿಡಿದೋರುಂಟೇ?" ಎನ್ನುತ್ತಾ ನಂಜಯ್ಯ ನಕ್ಕ. ನಗೆ ಮಾತಿನ ತೆರೆ,ಕೆಲ ನಿಮಿಷಗಳಲ್ಲೆ ಹಿಂದಕ್ಕೆ ಸರಿದು,ಮತ್ತೇ ಗಂಭೀರತೆ ನೆಲೆಸಿತು. ರಾಮಗೌಡನೆಂದ: "ಹಾಗಾದರೆ ನೀವೆಲ್ಲಾ ಈಸಲ ಯುಗಾದಿ ಹಬ್ಬ ಆಚರಿಸೋದು ನಮ್ಮ ಊರಿನಲ್ಲಿಯೇ." "ಅವತ್ತು ಸಾಯಂಕಾಲವೆ ನಮ್ಮ ಸೈನ್ಯದ ಮೊದಲ ಕವಾಯಿತು", ಎಂದ ಪುಟ್ಟಬಸವ.