ವಿಷಯಕ್ಕೆ ಹೋಗು

ಪುಟ:ತೆಲಿಮಾಕಸ್ಸನ ಸಾಹಸ ಚರಿತ್ರೆ ಭಾಗ ೧.djvu/೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

14 ಕ್ಕಿಂತ ನಮಗೆ ಮರಣದಂಡನೆಯನ್ನಾದರೂ ಕೊಡು ” ಎಂದು ನಾನು ಹೇಳಿ ದನು, “ ನೀನು ಯಾರು ? ನಿನ್ನ ಪದವಿಯ ಎಂಧಾದ್ದು ? ?” ಎಂಬದಾಗಿ ಅವನು ಕೇಳಿದನು. ಇಧಾಕಾ ಸಂಸ್ಥಾನದ ಧೋರಯಾದ ಯೂಲಿಸಿಸ್ಸಿನ ಮಗನೇ ನಾನು, ನನ್ನನ್ನು ಟಿತಿಮಾರಸ್ ಎಂದು ಕರೆಯುತ್ತಾರೆ. ನನ್ನ ತಂದ ಯು ದೇಶಾಟನಕ್ಕೊಸ್ಕರ ಹೋಗಿರುವನು. ಆವನನ್ನು ಹುಡುಕಿಕೊಂಡು ನಾನು ಹೋಗುತ್ತಿರುವೆನು. ನೀನು ನಮ್ಮನ್ನು ದನಕಾಯುವುದಕ್ಕೆ ಹಾಕಿದರೆ, ನನ್ನ ಉದ್ದೇಶಕ್ಕೆ ಭಂಗವು ಬರುವುದು, ನಾನು ಯಾವಜ್ಜೆ ನವ ಜೀತಗಾರನಾ ಗುವ ಪಕ್ಷದಲ್ಲಿ, ನನಗೆ ಮರಣದಂಡನೆಯೆ ಅಭೀಷ್ಟವು. ನನ್ನ ಉದ್ದಿಷ್ಟವಾದ ಕಲನವನ್ನು ಬಿಟ್ಟು, ಈ ಸೇವಾವೃತ್ತಿಯನ್ನು ನಾನು ಮಾಡಲಾರೆನು ” ಎಂದು ಹೇಳಿದೆನು. ಇದನ್ನು ತಿಳಿದ ಕೂಡಲೆ, ಅಲ್ಲಿದ್ದ ಸಮನ್ಯ ಜನಗಳಿಗೂ ಕೋಪವು ಅತ್ಯುತ್ಕಟಾವಸ್ತೆಗೆ ಬಂದಿತು, ( ಈ ದುರಾತ್ಮನ ತಂದೆಯು ಇ೦ದ ಚಾಲ ಮಹೇಂದ್ರ ಚಾಲ ವಿದ್ಯೆಗಳಿಂದ ನಮ್ಮ ದೇಶವೆ ನಾಶವಾಯಿತು. ನಮ್ಮಲ್ಲಿ ಕೊಟ್ಟಂತರ ಜನಗಳು ನತ್ರರು ನನಗೆ ಅನಿರ್ವಚನೀಯವಾದ ಕಷ್ಟಗಳು ಉಂಟಾದವು. ಯಸ್ಸನು ಸಿಕ್ಕಿದರೆ, ಅವನನ್ನು ಕಲ್ಲುಗಾಣಕ್ಕೆ ಹಾಕಿ ಅರೆ ಯುತ್ತಿದ್ದೆವು. ಇವನು ಹುಡುಗ, ನಿರಪರಾಧಿ, ಆದಾಗ್ಯೂ ಅಪರಾಧಿಯ ಮಗನು, ಇವನಿಗೆ ಮರಣದಂಡನೆಯನ್ನು ಮಾಡಬೇಕು' ಎಂದು ಅಲ್ಲಿದ್ದ ಮಹಾಜನಗರ ಎಕವಾಕ್ಯತೆಯಿಂದ ಹೇಳಿದರು. “ ಎಲೋ ಟೆಲಿ ಮಾಕಸ್ಸನೆ...-ನಿನ್ನ ತಂದೆಯು ಬಹಳ ದೊಡ್ಡ ಪಾಪಿ. ನಮ್ಮ ದೇಶವನ್ನು ನಾಶಮಾಡಿದನು. ಮಹಾಜನಗಳೆಲ್ಲರೂ ನಿನಗೆ ಮರಣದಂ ಡನೆಯನ್ನು ವಿಧಿಸಿರುವರು. ಅದನ್ನು ನಾನು ಮಂಜೂರಾಡಿದೇನೆ. ನಿನ್ನ ಜತ ಯಲ್ಲಿ ಬಂಗಿರತಕ್ಕೆ ಈ ಮನುಷ ನಿಗೂ ಮರಣದಂಡನೆಯ ಮಾಡಲ್ಪಟ್ಟಿರು ವುದು ಎಂದು ಅಸಸ್ಟೀಸನು ಹೇಳಿದನು. ತಕ್ಷಣದಲ್ಲಿಯೆ' ಅಲ್ಲಿದ್ದ ಒಬ್ಬ ಮುದುಕನು ಅಸೆಸ್ಟೀಸನ ಬಳಿಗೆ ಬಂದು, ಸ್ವಾಮಿ- ಆಕಿಸಿಸ' ಎಂಬುವನ ಗೋರಿಯ ಬಳಿಯಲ್ಲಿ ಇವರನ್ನು ಸಂಹರಿಸ ಬೇಕು, ನಮ್ಮ ದೇಶರಕ್ಷಣೆಗೆ ದೇಹವನ್ನು ಒಪ್ಪಿಸಿದ ಮಹಾಪರಾಕ್ರಮಶಾಲಿ ಗಳಲ್ಲಿ ಅವನು ಅಗ್ರಗಣ್ಯನು, ಇವರನ್ನು ಅಲ್ಲಿ ಬಲಿಕೊಡುವುದರಿಂದ, ಆತನ ಆತ್ಮಕ್ಕೆ ಶಾಂದ..ವಾಗುವುದು ಎಂದು ಹೇಳಿದನು. ನಾವಿಬ್ಬರೂ ಆಂಕೆಸಿಸ್ ಎಂಬುವನ ಗೋರಿಯ ಬಳಿಗೆ ಕರೆದುಕೊಂಡು ಹೋಗಲ್ಪಟ್ಟವು. ಅಲ್ಲಿ ನಮ್ಮನ್ನು ಬಲಿಕೊಡುವುದಕ್ಕೆ ಸಿದ್ಧ ಮಾಡಿದರು. ಅಲ್ಲಿ