ಅಂಗಡಿಯ ಬೀದಿಯಲ್ಲಿ ಕೊಂಗಿತಿ ಕುಳಿತು ಭಂಗವ ಮಾರುತಿಪ್ಪಳು ನೋಡಾ. ಆಕೆಗೆ ಹರಿಗೆಯ ಪಂಗನೆಂಬವ ಗಂಡನಾಗಿಪ್ಪನು ನೋಡಾ. ಅಂಗಡಿಯ ಬೀದಿಯ ಮುಚ್ಚಿ ಕೊಂಗಿತಿಯ ಕೋಡ ಮುರಿದು ಹರಿಗೆಯ ಪಂಗನ ಕೊಂದಲ್ಲದೆ ಲಿಂಗವ ಕಾಣಬಾರದು ಕಾಣಾ ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.