ಪುಟ:ರಾಣಾ ರಾಜಾಸಿಂಹ.djvu/೧೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ShhhhhhAnn Ar hn 1nAn Ann AAAAAAAAAAAAAAAAAAAAAAAAAAAAA ೧೪ಳ ಉಣಾ ರಾಜಸಿಂಹ ಪ್ರಕರಣ NAWAAA ಯಮಾರ್ಗದಿಂದ ನಡೆಯಿತು. ಎರಡನೆಯಭಾಗವು ರಾಜಸಿಂಹನ ಕೈಯಲ್ಲಿ ಸಿಕ್ಕಿತು ಈ ಭಾಗದಲ್ಲಿ ಬಾದಶಹನ ಜನಾನಖಾನೆಯಿತ್ತು. ಆ ಒನಾನಖಾನೆಯ ಎದುರಿಗೆ ರಾಜಸಿಂಹನು ಬಂದು ನಿಂತಕೂಡಲೆ ಕೋಲಾಹಲವುಂಟಾಯಿತು, ಇಲ್ಲಿ ರಾಣಾನಿಗೆ ಯುದ್ಧ ಮಾಡುವ ಅವ ಶ್ಯಕತೆಯು ಬೀಳಲಿಲ್ಲ. ಸ್ತ್ರೀಯರ ರಕ್ಷಣಕ್ಕಿದ್ದವರು ತಮ್ಮ ಕತ್ತಿಗ ಳನ್ನು ಎತ್ತಲೊಲ್ಲರು. ಯಾಕಂದರೆ ಶತ್ರುಗಳನ್ನು ಹೊಡೆಯಲಿಕ್ಕೆ ಹೋದರೆ ಹಿಂದಿನ ಸ್ತ್ರೀಯರಿಗೆ ತಗಲುವಂತೆ ದಟ್ಟಣೆಯಾಗಿತ್ತು, ಆದ್ರೆ ರಿಂದ ರಾಜಸಿಂಹನು ಸುಲಭವಾಗಿಯೆ ಅವರೆಲ್ಲರನ್ನು ಬಂದಿಯನ್ನಾಗಿ ಮಾಡಿದನು ಯಾವತ್ತು ಸ್ತ್ರೀಯರು ದಾಸದಾಸಿಗಳು ರಾಜಸಿಂಹನ ಕೈದಿಗಳಾದರು. - ರಾಜಸಿಂಹನು ಜಯಸಿಂಹನನ್ನು ವಿಶೇಷವಾಗಿ ಪ್ರೀತಿಸುತ್ತಿದ್ದನು ಅದರಿಂದ ಆತನು ಯಾವಾಗಲು ರಾಣಾನ ಸಂಗಡಲೆ ಇರುತ್ತಿದ್ದನು ಆತನು ರಾಣಾನಿಗೆ ಕೈಜೋಡಿಸಿ ಮಹಾರಾಜಾಧಿರಾಜಾ, ಈಸಮು ದಾಯವನ್ನು ತಕ್ಕೊಂಡು ಏನು ಮಾಡಬೇಕೆನ್ನು ವಿರಿ? ವಿನಾಕಾರಣ, “ತಿನ್ನುವದಕ್ಕೆ ಶೂರ, ಭೂಮಿಗೆಭಾರ ಅದರೊಳಗೂ ಇವು ಸುಕು ಮಾರ ರತ್ನ ಗಳು, ಅಪ್ಪಣೆಯಾದರೆ ಉದೇಪುರಕ್ಕೆ ಕಳಿಸುತ್ತೇನೆ. ರಾಜಸಿಂಹ-ಇವರೆಲ್ಲರನ್ನೂ ಉದೇಪುರಕ್ಕೆ ಕಳಿಸುವ ಕಾರಣ ಎಲ್ಲ ಉದೇಪುರದಲ್ಲಿ ಇವರೆಲ್ಲರಿಗೆ ಕೂಳಿಲ್ಲ, ಉದೇಪುರದ ಬೇಗಮ್ಮ ಳನ್ನು ಮಾತ್ರ ಚಂಚಲಕುಮಾರಿಯ ಕಡೆಗೆ ಕಳಿಸು. ಯಾಕಂದರೆ ಅವಳ ವಿಷಯಕ್ಕೆ ಚಂಚಲೆಯು ಬಹಳ ಹೇಳಿರುತ್ತಾಳೆ. ಉಳಿದ ಯಾವತ್ತು ಔರಂಗಜೇಬನ ಧನವನ್ನು ಆತನಿಗೆ ತಿರುಗಿಕೊಡು-” ಜಯಸಿಂಹ_ ಆದರೆ ಲೂಟಿಯೊಳಗಿನ ಕೆಲವುಭಾಗನ್ನು ಶಿಪಾಯರಿಗೆ ಕೊಡಬೇಕಾಗಿದೆ.' ರಾಜಸಿಂಹ-(ನಗುತ್ತ)-( ಅವಶ್ಯಕತೆ ಇದ್ದವರು ತೆಗೆದುಕೊ ಕೃಲಿ, ಆದರೆ ಈ ಮುಸಲ್ಮಾನಸ್ತ್ರೀಯರನ್ನು ಹಿಂದುಜನರು ಮುಟ್ಟಬಾರ ದುವೆ ?!