ಪುಟ:Ekaan'gini.pdf/೧೮೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಏಕಾ೦ಗಿನಿ ೧೮೩ ಅಧ್ಯಕ್ಷರ ಹೆ೦ಡತಿಯೆ೦ದರು: “ಏನೂ ಪರವಾಗಿಲ್ಲ. ಕುಸುಮಾ ಹೇಳಿದ ಮಾತೇ ನಮಗೆ ಪ್ರಮಾಣ ಪತ್ರ. ಇದೇನು ಕಾರ್ಖಾನೆಯೆ? ಬ್ಯಾ೦ಕೆ? ನಮ್ಮ ಮಗೂ ಹೆಸರಲ್ಲಿ ಕಟ್ಟಿಸಿದ ಶಿಶು ವಿಹಾರ, ಚೆನಾಗಿ ನಡಕೊ೦ಡು ಹೋಗ್ವೇಕು ಅನ್ನೋದೇ ನಮ? ಉದ್ದೇಶ.” ಹೆ೦ಡತಿಯ ಭಾಷಣದ ಬಳಿಕ ಗ೦ಡ ಕೆಲಸದ ಸರಿಚಯ ಮಾಡಿ ಕೊಟ್ಟರು. ಹುಡುಗರ ದಾಖಲೆ, ಲೆಕ್ಕಾಚಾರ, ಪತ್ರವ್ಯವಹಾರ ಇತ್ಯಾದಿ. “ನಾವು ವೇತನದ ಕಾರ್ಯದರ್ಶಿ ನೇಮಿಸ್ತಿರೋದು ಇದೇ ಮೊದಲು... ಕೆಲಸದಲ್ಲಿ ನಿಮಗೇನು ಕಷ್ಟ ತೋರಿದರು ತಿಳಿಸಿ, ನಾನಿದೇನೆ. ಗೌರವ ಕಾರ್ಯಡರ್ಶಿನಿ ನಮ್ಮ ಸೊಸೆಯೇ. ಆಕೆ ಸಹಾಯ ಮಾಡ್ತಾಳೆ. ನಾಳೆ ಸ೦ಸ್ಥೆ ದೊಡ್ಡದಾದಾಗ ವೇತನ ಜಾಸ್ತಿ ಮಾಡ್ರೀವಿ.” “ಆಗಲಿ, ಆಗಲಿ,” ಎಂದಳು ಸುನಂದಾ. “ನೇಮಕದ ಪತ್ರ ಸೋಮವಾರ ಕಳಿಸ್ಕೊಡ್ತೀನಿ. ఇದು ತಿ೦ಗಳ ಕೋನೇ ಶನಿವಾರ ಮು೦ದಿನ ತಿ೦ಗಳು ಮೋದಲ್ನೇ ತಾರೀಕಿನಿ೦ದಲೇ ಬ೦ದ್ಬಿಡಿ, ಆಗ್ದೆ?” “ಹಾಗೇ ಆಗಲಿ." ಅಡುಗೆಯವಳಿಗೆ ಕಾಫಿ ತರಹೇಳಿ ಅಧ್ಯಕ್ಷರ ಹೆಂಡತಿಯೆಂದರು: “ಹನ್ನೊಂದು ಗಂಟೆ ಅಂತ ಬರೆದಿದೆಯಾದರೂ ಹನ್ನೆರಡರ ಹೊತ್ತಿಗೆ ನೀವು ಬಂದರೆ ಸಾಕು. ಮನೆಯವರಿಗೆಲ್ಲಾ ಅಡುಗೆ ಮಾಡಿಟ್ಟು ಊಟ ಮುಗಿಸಿ ಬರಬೇಕಾಗುತ್ತೆ, ಆಲ್ವೆ?" “ಆಗಲಮ್ಮ, ಹನ್ನೊಂದು ಫೆಂಟೆ ಹೊತ್ತಿಗೆಲ್ಲಾ ಮನೆಯಿಂದ ಹೊರ ಡ್ತೀನಿ.” ಮನೆಯವರಿಗೆಲ್ಲಾ ಅಡುಗೆ..ಗಂಡ ಯಾರು? ಏನು ಕೆಲಸ? ಎಂದೆಲ್ಲ ಅವರು ಯಾಕೆ ಕೇಳಲಿಲ್ಲ? ಯಾಕೆ? ಈ ಕುಸುಮಾ ಅವರಿಗೆ ತನ್ನ ವಿಷಯ ವನ್ನೆಲ್ಲ ತಿಳಿಸಿರುವಳೋ ಏನೋ...ಇದೊಳ್ಳೆಯ ಸಂಕಟ...ಆಕೆಯನ್ನೆ ಕೇಳಬೇಕು... ... ಸುನಂದಾ ಉತ್ಸಾಹದಿಂದಲೆ ಮನೆಗೆ ಬಂದಳು ಹಿ೦ದೆ ಕಾಲೇಜಿಗೆ ಹೋಗಿ ಹೆಸರು ನೋಂದಾಯಿಸಿ ಮೊದಲ ದಿನ ತರಗತಿಯಲ್ಲಿ ಕುಳಿತು ಬಂದಿ