ಪುಟ:Mysore-University-Encyclopaedia-Vol-1-Part-3.pdf/೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಆರ್ಕನಿ ದ್ವೀಪಗಳು-ಆರ್ಕಿಕ್ಲ್ಯಾಮಿಡೀ ೮೭೮ ಸಂಖ್ಯೆಯ ದಾರದ ಎಳೆಗಳನ್ನು ಉಪಯೋಗಿಸುವುದು ಸಾಧ್ಯವಾಯಿತು.ಈ ನೇಯುವ ಯಂತ್ರದ ವಿರುದ್ಧ ಆದ ಗೊಂದಲಗಳಿಂದಾಗಿ ಈತ ಲ್ಯಾಂಕಷೈರನ್ನು ತ್ಯಜಿಸಿ ನಾಟಿಂಗ್ ಹ್ಯಾಂಗೆ ಬಂದು ಸೇರಿದೆ. ಈತ ರಚಿಸಿದ ಈ ಯಂತ್ರದ ಬಗ್ಗೆ ಅನೇಕ ತೊಂದರೆಗಳನ್ನು ಅನುಭವಿಸಿ,ತಯಾರಿಕಾ ಸ್ವಾಮ್ಯದ ಬಗ್ಗೆ ಹಲವಾರು ಮೊಕದ್ದಮೆಗಳನ್ನೆದುರೆಸಿಯೂ ಶ್ರೀಮಂತನಾಗಿ ಬಾಳಿದ,

ಆರ್ಕನಿ ದ್ವೀಪಗಳು: ಸ್ಕಾಟ್ ಲೆಂಡಿನ ಉತ್ತರ ಕರಾವಳಿಗೆ 102 ಕಿಮೀ ದೂರದಲ್ಲಿವೆ

(59 ಉ.ಆ.ಮತ್ತು 3 ಪ.ಶೀ). ಇವು 90 ಕ್ಕಿಂತಲೂ ಹೆಚ್ಚು ದ್ವೀಪಗಳಿಂದ ಕೂಡಿದ ದ್ವೀಪಸ್ತೋಮ. ಇವುಗಳಲ್ಲಿ 24 ದ್ವೀಪಗಳಲ್ಲಿ ಮಾತ್ರ ಜನ ವಾಸಿಸುತ್ತಾರೆ. ಕೆಲವು ದ್ವೀಪಗಳಲ್ಲಿ ಏಕಸ್ವಾಮ್ಯಕೃಷಿಯನ್ನು ಕಾಣಬಹುದು. ಭೂಮಿ ತಗ್ಗು,ನೆಲ ಕಲ್ಲು,ಏನೂ ಬೆಳೆಯದಷ್ಟು ಬಂಜರು, ಮೀನುಗಾರಿಕೆಯೂ ಒಂದು ಉದ್ಯೋಗವಾಗಿದೆ.ಇವುಗಳಲ್ಲಿ ಪೋಮೋನ (ಮೇನ್ ಲ್ಯಾಂಡ್) ಅತಿ ದೊಡ್ಡದು.

  ಕಿರ್ ಕ್ವಾಲ್ ಹಾಗು ಸ್ಟ್ರಾಂನೆಸ್ ಮುಖ್ಯ ಪಟ್ಟಣಗಳು,ಕಿರ್ ಕ್ವಾಲನಲ್ಲಿ ಹಿಂದಿನ

ಕಾಲದ (11-12ನೆಯ ಶತಮಾನದ) ಚರ್ಚುಗಳನ್ನು ಶ್ರೀಮಂತರ ನಿವಾಸಗಳನ್ನೂ ಕಾಣಬಹುದು, ಅವುಗಳಲ್ಲಿ ಅನೇಕ ಕಟ್ಟಡಗಳು ಅವಶೇಷಗಳಾಗಿ ಉಳಿದಿವೆ,ಚರಿತ್ರಪೂರ್ವ ಕಾಲದ ಶಿಲಾ ಮತ್ತು ಕಂಚುಯುಗಳ ಅವಶೇಷಗಳೂ ಹೇರಳವಾಗಿವೆ,

      ಇಲ್ಲಿಯ ವಾಯುಗುಣ ಶೀತವಲಯದ್ದಾದರೂ ಚಳಿಗಾಲದಲ್ಲಿ ಇಲ್ಲಿಗೆ ಸಮೀಪದಲ್ಲಿ

ಹರಿಯುವ ಉತ್ತರ ಅಟ್ಲಾಂಟಿಕ್ ಡ್ರಿಫ್ಟ್ ಎಂಬ ಉಷ್ಣೋದಕ ಪ್ರವಾಹ ಮತ್ತು ಪಶ್ಚಿಮ ಮಾರುತಗಳು ಚಳಿಯನ್ನು ಬಹುಮಟ್ಟಿಗೆ ಕಡಿಮೆಮಾಡುತ್ತವೆ,ಬೇಸಗೆಯ ಅವಧಿ ಕೆಲವೇ ವಾರಗಳು : ಆದರೂ ವಾಯುಗುಣ ಹಿತಕರವಾಗಿರುತ್ತದೆ,

    ಆಕರ್ನಿ  ದ್ವೀಪಗಳು ದೊರಕುವ ಹಸುರ ಮತ್ತು ಕೆಂಪು ಮರಳು ಕಲ್ಲುಗಳು

ಕಟ್ಟಡಗಳ ಕೆಲಸಕ್ಕೆ ಅನುಕೂಲವಾಗಿವೆ,ಕೆಲವೇ ಕಡೆಗಳಲ್ಲಿ ಕಾಣಸಿಗುವ ಮರಳುಮಿಶ್ರಿತ ಮೆಕ್ಕಲುಮಣ್ಣು ಫಲವತ್ತಾದ್ದು : ಓಟ್ಸ್,ಬಾರ್ಲಿ,ಆಲೂಗಡ್ಡೆ ಮೂಖ್ಯ ಕೃಷಿ ಉತ್ಪಾದನೆಗಳು,ಪಶುಪಾಲನೆಯಿಂದ ಹಾಲು , ಮಾಂಸ,ಮೊಟ್ಟೆ ಮುಂತಾದ ಆಹಾರ ಪದಾರ್ಥಗಳು ದೊರಕುತ್ತವೆ. ಅಗಾಧಪ್ರಮಾಣದಲ್ಲಿ ಪ್ರಾಣಿಗಳ ಆಹಾರವನ್ನು ಆಮದು ಮಾಡಿಕೊಳ್ಳಬೇಕಾಗುತ್ತದೆ. ಜನಸಂಖ್ಯೆ 19,245(2001),ಕಿರ್ ಕ್ವಾಲ್ ನಲ್ಲಿ ಸುಮಾರು 44 ಸಾವಿರ ಜನರೂ ಸ್ಟ್ರಾಂನೆಸ್ ನಲ್ಲಿ ಸುಮಾರು 14 ಸಾವಿರ ಜನರೂ ಇದ್ದಾರೆ. ಉತ್ತರ ದ್ವೀಪಗಳಿಂದ ಮತ್ತು ಅಬರ್ ಡೀನ್ ನಂಥ ಮುಖ್ಯಪಟ್ಟಣಗಳಿಂದ ಕಿರ್ ಕ್ವಾಲ್ಗೆ ಕೆಲವು ನಿರ್ದಿಷ್ಟ ವೇಳೆಯಲ್ಲಿ ನೌಕಾಯಾನ ಸಂಪರ್ಕವಿದೆ. (ಎಂ.ಎಸ್.ಎಂ)

 ಆರ್ಕಲೇಅಸ್: ಪು.ಶ.ಪೂ.5ನೆಯ ಶ್ತಮಾನದಲ್ಲಿದ್ದ ಗ್ರೀಕ್ ದರ್ಶನಿಕ. ಅಥೆನ್ಸ್ ನಲ್ಲಿ ಹುಟ್ಟಿದನೆಂದು ಕೆಲವರ ಅಭಿಪ್ರಾಯ. ಅನ್ಯಾಕ್ಸಗೊರಾಸ್ ನ (ನೋಡಿ) ಶಿಷ್ಯ.

ಸಾಕ್ರಟೀಸ್ ಗೆ ಗುರುವಾಗಿದ್ದನೆಂದು ಅನೇಕರ ಅಭಿಪ್ರಾಯ, ಒಟ್ಟಿನಲ್ಲಿ ಅನ್ಯಾಕ್ಸಗೊರಾಸ್ ನ ದಾರ್ಶನಿಕ ಮಾರ್ಗವನ್ನೇ ಅನುಸರಿಸಿದ. ಆದರೆ ವಿಶ್ವಶಾಸ್ತ್ರದಲ್ಲಿ (ಕಾಸ್ಮಾಲಜಿ) ಹಿಂದಿನ ಅಯೋನಿಯನ್ನರ ಅಭಿಪ್ರಾಯಗಳನ್ನು ಅನುಮೋದಿಸಿದ, ಅನ್ಯಾಕ್ಸಹೊರಾಸ್ ಪ್ರತಿಪಾದಿಸಿದ ಮನಸ್ಸು ಮತ್ತು ವಾಯು ಮಂದವಾದಾಗ ಚಳಿ,ವಿರಳವಾದಾಗ ಉಷ್ಣತೆ ಅಥವಾ ನೀರು ಮತ್ತು ಅಗ್ನಿ ಉಂಟಾಗುತ್ತವೆ, ಒಂದು ನಿಷ್ಯ್ರಿಯ,ಇನ್ನೊಂದು ಸಕ್ರಿಯ.ಈ ಪೃಥ್ವಿ ಮತ್ತು ಆಕಾಶಸ್ಥ ಕಾಯಗಳು ಅಗ್ನಿ ನೇರು ಸೇರಿ ಉತ್ಪನ್ನವಾಗಿವೆ, ಇದರಿಂದ ಮನುಷ್ಯನ ಮತ್ತು ಇತರ ಪ್ರಾಣಿಗಳ ಉತ್ಪತ್ತಿ. ಮನುಷ್ಯ ನೀತಿಪ್ರಜ್ನೆ ಮತ್ತು ಕಲಾಭಿಜ್ನತೆ ಹೊಂದಿರುವುದರಿಂದ ಇತರ ಪ್ರಾಣಿಗಳಿಂದ ಭಿನ್ನನಾಗಿದ್ದಾನೆ,ಇದು ಇವನ ತತ್ತ್ವದ ಸಾರ.

 ಆರ್ಕಾಟ್: ತಮಿಳುನಾಡಿನಲ್ಲಿರುವ ವೆಲ್ಲೂರ್ ನಗರದ (ಉ.ಆ.12 55' ಪೂ.ರೇ. 79 24') ಚೆನ್ನೈ ನಗರದಿಂದ ನೈಖತ್ಯಕ್ಕೆ 56 ಕಿಮಿ, ದೂರದಲ್ಲಿದೆ,ಜನಸಂಖ್ಯೆ 45205( 1991). ಇಡೀ ವರ್ಷ ಒಣ ಹವೆ.ಮಳೆ 75 ರಿಂದ 90 ಸೇಂಮೀ, ಮುಖ್ಯ ಬೆಳೆ ಬತ್ತ, ಹಿಂದೆ ಔದ್ಯೋಗಿಕ ಮತ್ತು ವಾಣಿಜ್ಯ ಕೇಂದ್ರವಾಗಿತ್ತು, 18ನೆಯ ಶತಮಾನದ ಮಧ್ಯಭಾಗದಲ್ಲಿ ನಿಂಹಾಸನಕ್ಕೆ ಎರಡು ಗುಂಪುಗಳ ನಡುವೆ ನಡೆದ ಆಂತರಿಕ ಯುದ್ದದಲ್ಲಿ ಒಂದು ಗುಂಪನ್ನು ಬ್ರಿಟಿಷರೂ ಇನ್ನೊಂದನ್ನು ಫ್ರೆಂಚರೂ ಬೆಂಬಲಿಸಿದರು. 1751ರಲ್ಲಿ ರಾಬರ್ಟ್ ಕ್ಲೈವ್ ಇದನ್ನು ಮುತ್ತಿ ವಶಪಡಿಸಿಕೊಂಡ.1758ರಲ್ಲಿ ಫ್ರೆಂಚರ ವಶವಾಯಿತು, ಆದರೆ 1760ರಲ್ಲಿ ಬ್ರಿಟಿಷರು ಪುನಃ ಪಡೆದುಕೊಂಡರು,  1780 ರಲ್ಲಿ ಹೈದರ್ ಆಲಿಯ ಕೈಗೆ ಬಂತು,1801 ರಲ್ಲಿ ಬ್ರಿಟಿಷರು ಆರ್ಕಾಟನ್ನೊಳಗೊಂಡ ಸಂಪೂರ್ಣ ಕರ್ನಾಟಕವನ್ನು ವಶಪದಿಸಿಕೊಂಡರು,
  ಆರ್ಕಾಟ್ ಮುತ್ತಿಗೆ: ಮೊಗಲರ ಆಳ್ವಿಕೆಯ ಕೊನೆಗಾಲದಲ್ಲಿ ಮರಾಠರು ಪ್ರಬಲರಾಗಿ ದಕ್ಷಿಣಭಾರತ ಮೊಗಲ್ ಆಡಳಿತದಿಂದ ಸ್ವತಂತ್ರವಾಯಿತು,ಹೈದರಾಬಾದಿನ ನಿಜಾಮನೂ ಆರ್ಕಾಟಿನ ನವಾಬನೂ ಸ್ವತಂತ್ರರಾದದು.1710ರಲ್ಲಿ ಸಾದುತ್ತುಲ್ಲಾಖಾನ್ ಸ್ವತಂತ್ರನಾಗಿ  ಆರ್ಕಾಟ್ ಮತ್ತು ತಂಜಾವೂರು ಪ್ರದೇಶಗಳಲ್ಲಿ ತನ್ನ ಅಧಿಕಾರವನ್ನು ಸ್ಥಾಪಿಸಿ ಆರ್ಕಾಟ್ ನವಾಬೀ ಮನೆತನವನ್ನು ಸ್ಥಾಪಿಸಿದ.ಈತ 1742ರಲ್ಲಿ ಮತನಹೊಂದಿದ. ಆ ಕಾಲದಲ್ಲೇ ಮರಾಠರ ಪ್ರಾಬಲ್ಯ ವಿಶೇಷವಾಗಿತ್ತು,1743-1749ರ ವರೆಗೆ ಅನ್ವರುದ್ದೀನ್ ನವಾಬನಾಗಿದ್ದ . ಈತನ ಅನಂತರ ಆರ್ಕಾಟ್ ಮುತ್ತಿಗೆ 1751ರಲ್ಲಿ ನಡೆಯಿತು.
 ಅದೇ ಕಾಲದಲ್ಲಿ ಹೈದರಾಬಾದಿನ ನಿಜಾಮ ಮರನಹೊಂದಿದ,ಅಧಿಕಾರಕ್ಕಾಗಿ ಮಗನಾದ ನಾಸಿರ್ ಜಂಗನಿಗೂ ಮೊಮ್ಮಗನಾದ ಮುಸಾಫರ್ ಜಂಗನಿಗೂ ಕದನವೇರ್ಪಟ್ಟಿತು, ಚಂದಾಸಾಹೇಬ ಫ್ರೆಂಚರ ಸಹಾಯದಿಂದ  ಆರ್ಕಾಟಿನ ನವಾಬನಾದ ಅನ್ವರುದ್ದೀನನನ್ನು ಕೊಂದುಹಾಕಿದ, ಮುಸಾಫರ್ ಜಂಗ್,ಚಂದಾಸಹೇಬ ಮತ್ತು  ಫ್ರೆಂಚರು ಒಂದಾದರು.ಅನ್ವರುದ್ದೀನನ ಮಗನಾದ ಮಹಮ್ಮದಾಲ್ ನಾಸಿರ್ ಜಂಗ್ ಹಾಗೂ ಇಂಗ್ಲಿಷರು ಪ್ರತಿಪಕ್ಷವನ್ನು ಹೂಡಿದರು,ಫ್ರೆಂಚರು  ಮತ್ತು ಚದಾಸಾಹೇಬ ಒಂದಾಗಿ ಮಹಮ್ಮದಾಲಿಯನ್ನು ನಿರ್ನಾಮಮಾಡಲು ತಿರುಚಿರಾಪಳ್ಳಿಯನ್ನು ಮುತ್ತಿದರು,ಆ ಸಮಯದಲ್ಲಿ ಶತ್ರುಪಕ್ಷದವರ ಗಮನ ಸೆಳೆದು ಅವರ ಬಲವನ್ನು ಕುಗ್ಗಿಸಲು ಕ್ಲೈವ್ ನ ನೇತೃತ್ವದಲ್ಲಿ ಇಂಗ್ಲಿಷ್ ಸೈನ್ಯ  ಆರ್ಕಾಟಿಗೆ ಧಾವಿಸಿದ.ಇಂಗ್ಲಿಷರು ಆರ್ಕಾಟನ್ನು ವಶಪಡಿಸಿಕೊಂಡ ಸುದ್ದಿ ತಿಳಿದ ಚಂದಾಸಾಹೇಬ ತಿರುಚನಾಪಳ್ಳಿಯಿಂದ ಅರ್ಧಭಾಗ ಸೈನ್ಯವನ್ನು ಆರ್ಕಾಟಿನತ್ತ ಕಳುಹಿಸಿದ,ಸೈನ್ಯ ಸೋತುಹೋಯಿತಲ್ಲದೆ ಚಮ್ದಾಸಾಹೇಬ ಕೊಲೆಯಾದ,ಹೈದರಾಬಾದಿನ ಸಿಂಹಾಸನಕ್ಕಾಗಿ ಕಾದಾಡುತ್ತಿದ್ದ ನಾಸಿರ್ಜಂಗ್ ಹಾಗೂ ಮುಸಾಫರ್ ಜಂಗರೂ ಕ್ರಮೇಣ ಕೊಲೆಯಾದರು,ಬ್ರಿಟಿಷರ ನೆರವಿನಿಂದ ಮಹಮ್ಮದಾಲಿ  ಆರ್ಕಾಟಿನ ನವಾಬನಾದ,ಯುದ್ದ 1754ರಲ್ಲಿ ಇಂಗ್ಲಿಷ್ ಮತ್ತು ಫ್ರೆಂಚರಿಗೆ ಪರಸ್ಪರ ಒಪ್ಪಂದದಲ್ಲಿ ಬಹಳ ಮಹತ್ತರವಾದವು, ಮೊದಲನೆಯದಾಗಿ ದೇಶೀಯ ರಾಜರು ದುಬಲಗೊಂಡು ಕ್ರಮೇಣ ಇಂಗ್ಲಿಷರ ಆಜ್ನಾನುವರ್ತಿಗಳಾಗುತ್ತ ಬ್ಂದರು,ಎರಡನೆಯದಾಗಿ ಡೂಪ್ಲೆಯ ಪತನವೂ ಕ್ಲೈವನ ಏಳ್ಗೆಯೂ ಪ್ರಾರಂಭವಾದುವು,ಕೊನೆಯದಾಗಿ ಫ್ರೆಂಚರ ಪ್ರಾಬಲ್ಯ ಕುಂದಿ ಇಂಗ್ಲಿಷರ ಬಲಸಂವರ್ಧನೆಯಾಯಿತು,                     (ಜಿ.ಆರ್.ಆರ್.)

ಆರ್ಕಿಕ್ಲ್ಯಾಮಿಡೀ :ದ್ವಿದಳ ಸಸ್ಯಗಳ ಗುಂಪಿನ ಒಂದು ವಿಶಾಲ ಶಾಖೆ,ಜರ್ಮನಿ ಸಸ್ಯವಿಜ್ನಾನಿ ಎಂಗ್ಲರ್ ಎಂಬವನ ಪ್ರಕಾರ ಎಂಬ್ರಿಯೋಫೈಟಾ ಸೈಫೊನೋಗ್ಯಾಮ ಎಂಬ ಬೀಜಯುಕ್ತ ಸಸ್ಯ ವಿಭಾಗಕ್ಕೂ ಆಂಜಿಯೋಸ್ಪರ್ಮ್ ಎಂಬ ಆಚ್ಛಾದಿತ ಬೇಜಯುಕ್ತ ಫ್ರೆಂಚರೂಉಪವಿಭಾಗಕ್ಕೂ ಸೇರಿದೆ.ಈ ಪಂಗಡದ ಪುಷ್ಪಗಳಲ್ಲಿ ದಲಗಲು ಬಿಡಿಯಾಗಿವೆ,ಈ ಉಪ ತರಗತಿಗೆ ಸಮನಾದ ಮತ್ತೊಂದು ಉಪತರಗತಿ ಮೆಟಕ್ಲ್ಯಾಮೈಡೀ ಗುಂಪಿನಲ್ಲಿ 33 ವರ್ಗಗಳೂ 201 ಕುಟುಂಬಗಳೂ ಸೇರಿವೆ,ಈ ಸುಮುದಾಯದಲ್ಲಿ ಮೂಲರೂಪದ ಆಚ್ಛಾದಿತ ಬೀಜಯುಕ್ತ ಫ್ರೆಂಚರೂ ಸೇರಿಸಲಾಗಿದೆ, ಅವುಗಳಲ್ಲಿ ಮರಗಳೇ ಹೆಚ್ಚು:ವಿಕಾಸವಾದವುಗಳಲ್ಲಿ ಪುಷ್ಪಾಂಗಗಳು ಸುರುಳಿ ಕ್ರಮದಲ್ಲಿಯೂ ಮೇಲ್ತರದ ಕುಲಗಳಲ್ಲಿ ವೃತ್ತಕ್ರಮದಲ್ಲಿಯೂ ಜೋಡಿಸಿವೆ.ಆದಿಕುಲಗಳಲ್ಲಿ ಪುಷ್ಪಾಂಗಗಳ ಅನಿರ್ದಿಷ್ಟವಾಗಿಯೂ ಮುಂದುವರಿದ ಕುಲಗಳಲ್ಲಿ ನಿರ್ದಿಷ್ಟವಾಗಿಯೂ ಇವೆ,ಪುಷ್ಪಗಳು ಆವರಣರಹಿತವಾಗಿಯೊ ಏಕಾವರಣಸಹಿತವಾಗಿಯೊ ಅಥವಾ ದ್ವಯಾವರಣಸಹಿತವಾಗಿಯೊ ಇರುತ್ತವೆ;ಕೆಲವು ಕುಲಗಳಲ್ಲಿ ದಲರಹಿತವಾಗಿರುತ್ತವೆ,ಆದಿ ಕುಲಗಳಲ್ಲಿ ಉಚ್ಚ ಸ್ಥಿತಿಯ ಅಂಡಾಶಯ,ಬಹಳ ಮುಂದುವರಿದ ಕುಲಗಳಲ್ಲಿ ಅಧೋಸ್ಥಿತಿಯ ಅಂಡಾಶಯ ಇರುವುದು,ಈ ಕೆಳಗೆ ಆರ್ಕಿಕ್ಲ್ಯಾಮಿಡೀಯಲ್ಲಿ ಕಂಡುಬರುವ ವರ್ಗಗಳ ಅಥವಾ ವರ್ಗಸಮೂಹಗಳ ಮುಖ್ಯ ಗುಣವಿಶೇಷಗಳನ್ನು ತಿಳಿಸಲಾಗಿದೆ.

 ವರ್ಗಗಳು 1 ರಿಂದ 14:(ವರ್ಟಿಸಿಲೇಟಿ,ಪೈಪರೇಲೀಸ್,ಹೈಡ್ರೊಸ್ಟಾಕಿಯೇಲೀಸ್,ಸ್ಯಾಲಿಕೇಲೀಸ್,ಗ್ಯಾರಿಯೇಲೀಸ್,ಬೆಲನಾಪ್ಸಿಡೇಲೀಸ್,ಮಿರಿಕೇಲೀಸ್,ಲೈಟ್ನೆರಿಯೇಲೀಸ್,ಜೂಗ್ಲಾಂಡೇಲೀಸ್,ಜೂಲಯನೇಲೀಸ್,ಬ್ಯಾಟಿಡೇಲೀಸ್,ಫ್ಯಾಗೇಲೀಸ್,ಆರ್ಟಿಕೇಲೀಸ್ ಮತ್ತು ಪೋಡಾಸ್ಟಿಮೇಲೀಸ್- 20 ಕುಟುಂಬಗಳು).ಈ ಸಮೂಹದ ವರ್ಗಗಳನ್ನು ಆದಿತೂಪದ ಅಥವಾ ಕೀಳ್ತೆರದ (ಪ್ರಿಮಿಟಿವ್) ವರ್ಗಗಳೆಂದು ಪರಿಗಣಿಸಲಾಗಿದೆ,ಈ ವರ್ಗಗಳಲ್ಲಿ ಸಾಮಾನ್ಯವಾಗಿ ಮರಗಳೇ ಹೆಚ್ಚು.(ಉದಾ:ಓಕ್,ಬೀಚ್,ವಾಲ್ ನಟ್,ನೀರಂಜಿಮರ ಇತ್ಯಾದಿ).ಹಿಂದೆ ಈ ಸಮೂಹವನ್ನು ಅಮೆಂಟಿಫೆರಿ (ಕುಚ್ಚುತೆನೆ ಸಸ್ಯಗಳು) ಎಂದು ಕೆರೆಯಲಾಗುತ್ತಿತ್ತು,ಪುಷ್ಪಗಳ ನಗ್ನ ಪುಷ್ಪಾವರಣ ಕ್ಷೀಣಪತ್ರದ ತರಹದ್ದು. ಪುಷ್ಪಾಂಗಗಳ ಸಂಖ್ಯೆ ಸಾಮಾನ್ಯವಾಗಿ ಅನಿರ್ದಿಷ್ಟ ಪರಾಗಸ್ಪಾರ್ಶ ಗಾಳಿಯಿಂದ ನಡೆಯುವುದು,ಈ ವರ್ಗಗಳಿಗೂ ಇತರ ವರ್ಗಗಳಿಗೂ ಇರುವ ಸಂಬಂಧ ಇನ್ನೂ ಸ್ಪಷ್ಟವಾಗಿಲ್ಲ.

ವರ್ಗಗಳು 15 ರಿಂದ 20 :(ಪ್ರೋಟಿಯೇಲೀಸ್,ಸ್ಯಾಂಟಲೇಲೀಸ್,ಆರಿಸ್ಟೊಲೋಕಿಯೇಲೀಸ್,ಬೆಲೆನೋಫೊರೇಲೀಸ್,ಪಾಲಿಗೊನೇಲೀಸ್ ಮತ್ತು ಸೆಂಟ್ರೋಸ್ಪರ್ಮಿ- 23 ಕುಟುಂಬಗಳು). ಈ ವರ್ಗಸಮೂಹ ಸ್ಥೂಲವಾಗಿ ನೋಡಿದರೆ