ಪುಟ:Ekaan'gini.pdf/೧೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೨೬

                                              ಏಕಾಂಗಿನಿ

"ಅಪ್ಪಾ" ಕೃಷ್ಣ್ಣಪ್ಪನವರು ಮಗಳ ಕಡೆಗೆ ಮುಖ ತಿರುಗಿನಿದರು. "ಏನು ಸುನಂದ?" "ನೀವೆಲ್ಲಾ ಸ್ನ್ನಾನ ಮುಗಿಸ್ಕೊಂಡ್ಬಿಡಿ,ಆಗದಾ?" "ಆಗಲಮ್ಮ" "ಬಾ, ಏಳು ಹಾಗಾದರೆ." ಕೃಷ್ಣಪ್ಪನವರೆದ್ದು ಮಗಳನ್ನು ಹಿಂಬಾಲಿಸಿದರು. ......ಸಾವಿನ ಮನೆ ಮಲ್ಲನೆ ಮೈಲಿಗೆ ಕಳೆಯಿತು. ......ಮಧ್ನಾಹ್ನ, ಕಳೆದು ಬಹಳ ಹೊತ್ತಾದ ಮೇಲೆ ಸುನಂದೆಯ ಅವಸರದ ಅಡುಗೆಯನ್ನು ಉಣ್ಣಲು ಅವರೆಲ್ಲ ಕುಳೆತರು. ಇತರರು ಯಾರೂ ನೋಡದೇ ಇದ್ದ ಕೊಠಡಿಯತ್ತ ಮಗು ಸರಸ್ವತಿ ದಿಟ್ಟಸುತ್ತಿದ್ದಳು.ಅದು ಎಷ್ಟೋ ದಿನಗಳಿಂದ ಅಜ್ಜಿ ಮಲಗಿರುತ್ತಿದ್ದ ಜಾಗ. ಅಲ್ಲಿ ಹಾಸಿಗೆ ಇರಲಿಲ್ಲ. ಅಲ್ಲಿಂದ ಯಾವ ನರಳಟವೂ ಕೇಳಿಬರುತ್ತಿರಲಿಲ್ಲ. ಸರಸ್ವತಿಗೆ ಇದು ವಿಚಿತ್ರವೆನಿಸಿತು,ಬಹಳ ಭಯವಾ ಯಿತು. ಇದನ್ನು ಗಮನಿಸಿದ ಸುನಂದಾ ಮಗಳ ಲಕ್ಷ್ಯವನ್ನು ಏನೇನೋ ಮತು ಗಳನ್ನಾಡಿ ತನ್ನೆಡೆಗೆ ಸೆಳೆಯಲು ಯತ್ನಿಸಿದಳು, ಆ ಯತ್ನವೊಂದಕ್ಕೂ ಮರುಳಾಗದೆ ಸರಸ್ವತಿ ಅಂದಳು: "ಅಜ್ಜಿ!ಅಜ್ಜಿ ಇಲ್ಲ!" ಉಣ್ಣುತಿದ್ದವರಿಗೆ ಗಂಟಲಲ್ಲೇ ಸಿಲುಕಿತು ಅನ್ನದ ಅಗಳು. ......ಊಟವಾದೊಡನೆಯೇ ನಿದ್ದೆ ಕೃಷ್ಣಪ್ಪನವರ ಮೇಲೆ ಬಲೆ ಬೀಸಿತು. ಎಷ್ಟೋ ರಾತ್ರಿಗಳಿಂದ ಹೆಚ್ಚು ಕಡಮೆ ಎಚ್ಚರವಾಗಿಯೇ ಇರುತ್ತಿದ್ದ ಅವರು, ಬರಿಯ ಚಾಪೆಯ ಮೆಲೆ ತೋಳನ್ನೆ ದಿಂಬಾಗಿ ಮಾಡಿಕೊಂಡು ನಿದ್ದೆ ಹೋದರು. ರಾತ್ರೆಯೆಲ್ಲ ರೈಲು ಪ್ರಯಾಣ ಮಾಡಿದ್ದ ವೆಂಕಟರಾಮಯ್ಯನಿಗೂ ವಿಜಯಳಿಗೂ ಲಘು ನಿದ್ದೆ ಬಂತು. ಸುನಂದೆ ಮಾತ್ರ ಎಚ್ಚರವಾಗಿಯೇ ಇದ್ದು ಆದಷ್ಟು ಸದ್ದಿಲ್ಲದೆ,ಅಡುಗೆ ಮನೆಯನ್ನು ಸ್ವಚ್ಛಗೊಳಿಸುವ ಮುಸುರೆ ಬೆಳ ಗುವ ಕೆಲಸ ನೆಡೆಸಿದಳು