ಪುಟ:Ekaan'gini.pdf/೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬೮ ಏಕಾಂಗಿನಿ

“ಏನಾಗ್ಬೇಕಾಗಿದೆ ನನ್ನಿಂದ.” ರಾಮಕೃಷ್ಣಯ್ಯನೆಂದರು: "ಇಲ್ಲಿ ನೀವಿರೋದು ತಿಳೀತು.ಹೀಗೇ ನೋಡ್ಕೋಂಡು ಹೋಗೋಣಾಂತ ಬಂದ್ವಿ." ರಾಮಕೃಷ್ಣಯ್ಯ ಕೊರಿಯೊಳಕ್ಕ ಬಂದು ಅಂದರು: "ನೀವು ಮುಖ ತೊಳ್ಕೊಂಡು ಬನ್ನಿ.ಸಂಕೋಚ ಯಾತಕ್ಕೆ? ಬೇಕಾದರೆ ನಾವು ಹೊರೆಗೇ ಇರ್ತಿವಿ.” ಪುಟ್ಟಣ್ಣ ಒಂದು ಕ್ಷಣ ಅನುಮಾನಿಸಿ, "ಇಲ್ಲಿ ಕೂತ್ಕೋಬಹುದು” ಎಂದು ಹೊಟೆಲಿನ ಸ್ನಾನದ ಮನೆಗೆ ಸಡೆದ “ಬಾರಯ್ಯ ಒಳಗೆ.. ಅಳಿಯನ ಮನೆ ಆತಿದ ಸ್ವೀಕರಿಸು," ಎಂದು ರಾಮ ಕೃಷ್ಣಯ್ಯ ಕೃಷ್ಣಪ್ಪನವರನ್ನು ಕರೆದರು ಸೊಳ್ಳೆ ಪರದೆ ಇದ್ದ ಮಂಚ ಮ್ರುದು ಹಾಸಿಗೆ. ಗೋಡೆಯಲ್ಲಿ ಬೀರು. ದೊಡ್ಡ ಮೇಜು. ಕನ್ನಡಿ ಕರಿ ನುರದ ಕುರ್ಚಿ ಬೆತ್ತದೊಂದು ಆರಾಮ ಕುರ್ಚಿ. ಎರಡು ದೊಡ್ಡ ಟ್ರಿ೦ಕುಗಳು ಸ್ವಾ೦ಡಿನಲ್ಲಿ ಆಸ್ತವ್ಯಸ್ತವಾಗಿ ತೂಗಾ ಡುತ್ತಿದ್ದ ಬಟ್ಟೆ ಬರೆ. ರಾಮಕೃಷ್ಣಯ್ಯ ಬೆತ್ತದ ಕುರ್ಚಿಯನ್ನು ಹಾಸಿಗೆಯ ಪಕಕ್ಕೆ ಎಳೆದು ಅದರ ಮೇಲೆ ಆಸೀನರಾದರು ಹುಸಿಗೆಯ ಅಂಚಿನಲ್ಲಿ ಕೃಷ್ಣಪ್ಪನವರು ಕುಳಿತರು ಇದೀಗ ಆಳಿಯನ ವ ತಿ ಒಂದು ಹಣ್ಣಿನ ಬದುಕನ್ನು ನಿಶ್ಕ್ರರಣವಾಗಿ ಮಣ್ಣು ಗೂಡಿಸಲು ಯತ್ನಿಸಿದ ಬಳಿಕ ಇದೀಗ ಆತ ಅನುಭವಿಸುತ್ತಿದ್ದ ಭೋಗ ವಿಲಾಸ “ಹೆಚ್ಚಿನ ಮಾತುಕತೆಯೆಲ್ಲ ನಾನೇ ಮಾದ್ಡೇನಪ್ಪ?” ಎಂದರು ರಾಮ ಕೃಷ್ಣಯ್ಯ. "ಹೂಂ." "ನೀನು ಧೈರ್ಯವಾಗಿರು ಸಿಟ್ಟಿನಲ್ಲಿ ಏನಾದರೂ ಅಂದೇನು ಅಂತ ಚಿಂತಿ ಸ್ಟೇಡ. ದಂಡೋಪಾಯ ಅಗತ್ಯವಾದರೆ ಅದಕ್ಕಿನ್ನೂ ಸಮಯವಿದೆ. ಮುಂದೆ ಮಾಡಿದರಾಯ್ತು."