ಪುಟ:Evaluating Wikipedia brochure.pdf/೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ವಿಕಿಪೀಡಿಯ ಲೇಖನದ ವಿಕಾಸವನ್ನು ಗಮನಿಸುವುದು

ಇತಿಹಾಸವನ್ನು ನೋಡಿ ಪುಟದಲ್ಲಿ ನೀವು ಪ್ರತೀ ಲೇಖನವು ಹೇಗೆ ವಿಕಾಸವಾಯಿತು ಎಂಬುದನ್ನು ತಿಳಿಯಬಹುದು. ಎಲ್ಲಾ ಹಳೆಯ ಆವೃತ್ತಿಗಳು ಅಲ್ಲಿ ಕಾಣಸಿಗುತ್ತವೆ. ಇತಿಹಾಸವನ್ನು ನೋಡಿ ಪುಟದಲ್ಲಿ ಪ್ರತಿಯೊಂದು ಸಾಲುಗಳು ಒಂದೊಂದು ಆವೃತ್ತಿಯನ್ನು ಪ್ರತಿನಿಧಿಸುತ್ತವೆ. ಆ ದಿನಾಂಕದ ಮೇಲೆ ಕ್ಲಿಕ್ಕಿಸುವ ಮೂಲಕ ನೀವು ಆ ಆವೃತ್ತಿಯನ್ನು ನೋಡಬಹುದಾಗಿದೆ. ಅಲ್ಲಿ ನೀವು ಪ್ರತಿಯೊಂದು ಆವೃತ್ತಿಗಳು ಅದನ್ನು ರಚಿಸಿದ ಅಥವಾ ಬದಲಾಯಿಸಿದ ಬಳಕೆದಾರರೊಂದಿಗೆ ಸಂಯೋಜನೆಗೊಂಡಿರುವುದನ್ನು ಕಾಣಬಹುದಾಗಿದೆ.

ಜೊತೆಗೆ ನೀವು ರೇಡಿಯೋ ಬಟನ್ ಅನ್ನು ಅಥವಾ ಆಯ್ಕೆ ಮಾಡಿದ ಆವೃತ್ತಿಗಳನ್ನು ಹೊಂದಾಣಿಕೆ ಮಾಡಿ ನೋಡಿ ಆಯ್ಕೆಯನ್ನು ಕ್ಲಿಕ್ಕಿಸುವ ಮೂಲಕ ಯಾವುದಾದರೂ ಎರಡು ಬೇರೆ ಬೇರೆ ಆವೃತ್ತಿಗಳನ್ನು ಒಂದಕ್ಕೊಂದು ಹೋಲಿಸಿ ನೋಡಬಹುದಾಗಿದೆ. ಅಲ್ಲಿ ನೀವು ಎರಡು ಸಾಲುಗಳನ್ನು ಕಾಣುತ್ತೀರಿ. ಎಡಬದಿಯದು ಹಳೆಯ ಆವೃತ್ತಿಯಾದರೆ ಬಲಬದಿಯದು ಹೊಸ ಆವೃತ್ತಿಯಾಗಿರುತ್ತದೆ. ಆ ಸಾಲುಗಳಲ್ಲಿ ಬದಲಾವಣೆಗೊಂಡ ವಿಷಯಗಳನ್ನು ಕೆಂಪು ಬಣ್ಣದಲ್ಲಿ ಕಾಣಬಹುದಾಗಿರುತ್ತದೆ. ಈ ಸುಲಭ ಸಾಧನದ ಮೂಲಕವಾಗಿ ನೀವು ಆ ಲೇಖನಗಳಲ್ಲಾದ ಬದಲಾವಣೆಗಳನ್ನು ನಿರ್ಧರಿಸಬಹುದಾಗಿದೆ. ಆ ಎರಡು ಆವೃತ್ತಿಗಳಲ್ಲಿ ಯಾವ ಮಾಹಿತಿಗಳನ್ನು ಸೇರಿಸಲಾಗಿದೆ ಮತ್ತು ಯಾವುದನ್ನು ತೆಗೆಯಲಾಗಿದೆ ಎಂಬುದನ್ನು ತಿಳಿಯಬಹುದಾಗಿದೆ.