ಪುಟ:ಕರ್ನಾಟಕ ನಂದಿನಿ ವಿಮಲಾದೇವಿ.djvu/೨೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಎಮಲಾದೇವಿ ೨೫ ರೋಷನಾರೆಯು ಹೀಗೆ ಚಿಂತೆ ಮಾಡುತ್ತಿರುವಾಗಲೇ ಔರಂಗಜೇ ಒನು ಪ್ರಾತಃಕಾಲದ ಭೋಜನವನ್ನು ತೀರಿಸಿಕೊಂಡು ತಂಗಿಯನ್ನು ನೋಡ ಲುಬಂದವನು ತಾನೇ ಒಂದು ಆಸದ ಮೇಲೆ ಕುಳಿತು ಚಿಂತಿಸುತ್ತಿದ್ದವಳನ್ನು ಕುರಿತು ಹೀಗೆ ಕೇಳಿದನು:- “ ತಂಗಿ, ನಿನ್ನ ಮುಖವನ್ನು ನೋಡಿದರೆ ಏನೋ ವಿಚಾರಸರಳಾಗಿ ರುವಂತೆ ಕಾಣವುದು. ಕಾರಣವೇನು ? ರೋಷ..ಕಾರಣವೇನಾದರೂ ಇರಲಿ, ಅಣ್ಣ, ಇನ್ನು ನಾಸೀ ಡಿಲೀನಗರದಲ್ಲಿರಲಾರೆ, ಮಕ್ಕಾಕ್ಕೆ ಹೊರಡಲು ಅನುಮತಿಯನ್ನು ಕೊಡು. ಔರಂಗ:- ನಾನೂ ಬರುವೆನು. ಇಬ್ಬರೂ ಜೊತೆಯಾಗಿಯೇ ಹೊರಡುವ. ರೋಷ:-ಸೀನೇಕೆ ಈಗ ಒರಬೇಕು, ಒರುವುದಕ್ಕೆ ನಿನಗೆ ಅವಕಾಶವೆಲ್ಲಿ ? ಔರಂಗ: -ಹೋಗಲಿ, ಈಗ ನೀನು ದೊರಡಲು ಕಾರಣವೇನು ? ರೋಷ: ...ಅಸ್ವತಂತ್ರವಾಗಿ ಪಟ್ಟಣದಲ್ಲಿ ಜೀವಿಸುವುದಕ್ಕಿಂತಲೂ ಸ್ವತಂತ್ರವಾಗಿ ಅಡವಿಯಲ್ಲಿರುವುದು ಸೌಖ್ಯವು. ಇಲ್ಲಿ ನಿನಗೆ ಸರ್ವತಂತ್ರಸ್ವಾತಂತ್ರವಿದ್ದು, ಸ್ವಯಂ ಬಾದಶಹನಾದ ಅಣ್ಣನೇ ವಶವಾಗಿದ್ರೂ ಅಸ್ವತಂತ್ರವೆ ? ರೋಷ: -ಸರ್ವಸ್ವಾತಂತ್ರದ ಮೇಲೆ ಅದಕ್ಕೆ ಆತಂಕ ಎರ ದಂತಿರಬೇಕಲ್ಲವೆ ? ಕ್ಷರಂಗ:ಆತಂಕಪಡಿಸಿದವರಾರು ? ಬೇಗ ಹೇಳು, ಅವರನ್ನು ತಕ್ಕಂತೆ ದಂಡಿಸುವೆನು. ರೋಷ: -ಇವರನ್ನು ದಂಡಿಸುವುದು ಸುಳ್ಳು, ನಿಜವನ್ನು ಹೇಳಿ ದರೆ ನಾನೇ ದಂಡಿಸಲ್ಪಡುವೆನು.